ಚಿಕ್ಕಮಗಳೂರು-ಕಾಂಗ್ರೆಸ್ ನೇತೃತ್ವದ ನಾಲ್ಕು ಲಕ್ಷ ಕೋಟಿ ಅಧಿಕ ಮೊತ್ತ ಬಜೆಟ್ ಸಾಲದ ಸುಳಿ, ಅಲ್ಪಸಂಖ್ಯಾತರ ಒಲೈಕೆ ಹಾಗೂ ಎಸ್ಟಿಎಸ್ಟಿ ಮತ್ತು ಬಹುಸಂಖ್ಯಾತ ಹಿಂದೂಗಳ ವಿರೋಧಿ ಬಜೆಟ್ ಆಗಿದೆ ಎಂದು ಕಡವಂತಿ ಗ್ರಾ.ಪಂ. ಸದಸ್ಯ ವಿನೋದ್ ಬೊಗಸೆ ಹೇಳಿದ್ದಾರೆ.
ಮುಖ್ಯಮಂತ್ರಿಗಳು ಕೆಲಸವಿಲ್ಲದೆ ಬಜೆಟ್ ಮಂಡಿಸಿದ್ದಾರೆ. ಈ ಬಾರಿ ಒಂದು ಸಮುದಾಯದ ಓಲೈಕೆ ಮಾಡಲು ಮುಂದಾಗಿದ್ದಾರೆ. ಅಲ್ಪಸಂಖ್ಯಾತರಿಗೆ ಹಲವಾರು ಯೋಜನೆಗಳನ್ನು ಕಲ್ಪಿಸಿ ಹಿಂದೂ, ರೈತ ಹಾಗೂ ಬಹು ಸಂಖ್ಯಾತರ ವಿರೋಧಿ ಬಜೆಟ್ ಮಂಡಿಸಲಾಗಿದೆ ಎಂದಿದ್ದಾರೆ
ಅಲ್ಪಸಂಖ್ಯಾತ ಒಲೈಕೆಗಾಗಿ ಮಹಿಳೆಯರಿಗಾಗಿ ಕಾಲೇಜು ಸ್ಥಾಪನೆ, ಸ್ಟಾರ್ಟ್ ಅಪ್, ವಿದೇಶಿ ವ್ಯಾಸಂಗಕ್ಕಾಗಿ 3೦ ಲಕ್ಷಕ್ಕೆ ಏರಿಕೆ, ವಾಸಿಸುವ ಪ್ರದೇಶ ಸ್ಥಾಪನೆ, ಸರಕಾರಿ ಗುತ್ತಿಗೆಯಲ್ಲಿ 2 ಕೋಟಿ ವರೆಗೆ ಮೀಸಲು, ವಕ್ಫ್, ಖಬರಸ್ಥಾನ ಅಭಿವೃದ್ಧಿಗೆ ಮೀಸಲು, ಹಜ್ ಭವನ ಹೆಚ್ಚುವರಿ ಕಟ್ಟಡಕ್ಕೆ ಅನುದಾನ, ಸರಳ ವಿವಾಹಕ್ಕೆ ಜೋಡಿಯೊಂದಕ್ಕೆ 5೦,೦೦೦/- ಅನುದಾನ, ಮದರಸಾಗಳಿಗೆ ಗಣಕ ಯಂತ್ರ, ಸ್ಮಾರ್ಟ್ ಬೋ ರ್ಡ್ ಸ್ಥಾಪಿಸಿ ಬಹುಸಂಖ್ಯಾತ ಹಿಂದುಗಳಿಗೆ ದ್ರೋಹವೆಸಗಿದೆ.

ಈ ಬಜೆಟ್ ಅಲ್ಪಸಂಖ್ಯಾತರಿಗೆ ಮಂಡಿಸಿದ ಮುಖ್ಯಮಂತ್ರಿಗಳು ಕ್ರೈಸ್ತ, ಬೌದ್ಧ, ಜೈನ ಧರ್ಮಗಳಿಗೆ ಯಾಕಿಲ್ಲ, ಪಂಚ ಗ್ಯಾರಂಟಿಗಳಿಂದ ಅಭಿವೃದ್ಧಿ ಕಾರ್ಯ ಇಲ್ಲದೆ ಜನ ತತ್ತರಿಸಿ ಹೋಗಿದ್ದು, ಅದನ್ನು ಗಮನದಲ್ಲಿಟ್ಟುಕೊಳ್ಳದೆ ಒಂದು ಸಮುದಾಯದ ಮತಗಳಿಗಾಗಿ ವೋಟನ್ನು ಮಂಡಿಸಿರುವುದು ಖಂಡನೀಯ ಎಂದಿದ್ದಾರೆ.