ಚಿಕ್ಕಮಗಳೂರು-ಬುದ್ಧಿವಂತ-ನಾಗರೀಕರಿಂದಲೇ-ಪರಿಸರಕ್ಕೆ- ಹಾನಿ- ಸುಂದರಗೌಡ


ಚಿಕ್ಕಮಗಳೂರು– ಸಮಾಜದ ಬುದ್ಧಿವಂತ ನಾಗರೀಕರೇ ರಸ್ತೆ ಬದಿ, ಖಾಲಿ ನಿವೇಶನ ಹಾಗೂ ಎಲ್ಲೆಂದರಲ್ಲಿ ಕಸ ಬೀಸಾಡಿ, ಅನಾಗರೀಕರಂತೆ ವರ್ತಿಸಿ ಭೂ ಪ್ರದೇಶವನ್ನು ಮಾಲಿನ್ಯಗೊಳಿಸು ವುದು ಭವಿಷ್ಯಕ್ಕೆ ಮಾರಕ ಎಂದು ನೇಚರ್ ಕನ್ಸರ್‌ವೇಷನ್ ಟ್ರಸ್ಟ್ ಅಧ್ಯಕ್ಷ ಡಾ|| ಕೆ.ಸುಂದರಗೌಡ ಹೇಳಿದರು.


ತಾಲ್ಲೂಕಿನ ಮೂಗ್ತಿಹಳ್ಳಿ ಗ್ರಾಮದಲ್ಲಿ ನೇಚರ್ ಕನ್ಸರ್‌ವೇಷನ್ ಟ್ರಸ್ಟ್, ಕನ್ನಡಸೇನೆ, ಲಯನ್ಸ್ ಕ್ಲಬ್, ಗ್ರಾ. ಪಂ. ಸಹಯೋಗದಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಹಮ್ಮಿಕೊಂಡಿದ್ಧ ಸ್ವಚ್ಚತಾ ಕಾರ್ಯಕ್ರಮದಲ್ಲಿ ಶುಕ್ರವಾರ ಅವರು ಮಾತನಾಡಿದರು.


ಪ್ಲಾಸ್ಟಿಕ್ ಸುಡುವುದು, ಅರಣ್ಯದ ಕಾಳ್ಗಿಚ್ಚು ಹಾಗೂ ವಿಪರೀತ ವಾಹನಗಳ ಸಂಚಾರದಿಂದ ಪ್ರತಿ ವರ್ಷವು 350 ಕ್ಕೂ ಹೆಚ್ಚು ಟನ್ ವಿಷ ಅನಿಲ ಉತ್ಪತ್ತಿಕೊಂಡು ಮಾನವ ಸಂಕುಲಕ್ಕೆ ದೊಡ್ಡಗಂಡಾಂತರ ಸೃ ಷ್ಟಿಸಿದೆ. ಅಲ್ಲದೇ ತಾಂತ್ರಿಕ ಯುಗದಲ್ಲಿ ಪರಿಸರ ಹಾನಿಯಿಂದ ಜೀವರಾಶಿಗೂ ಕುತ್ತು ಸಂಭವಿಸಿದೆ ಎಂದರು.


ಹಿಂದಿನ ಸಮಯದಲ್ಲಿ ವೃದ್ದರನ್ನು ಮಕ್ಕಳು ಆಸ್ಪತ್ರೆಗೆ ಕೊಂಡೊಯ್ಯುವ ಪದ್ಧತಿಯಿತ್ತು. ಆಧುನಿಕತೆ ಬೆಳೆದಂತೆ ಮಕ್ಕಳನ್ನು, ವೃದ್ದರು ಆಸ್ಪತ್ರೆಗೆ ಕೊಂಡೊಯ್ಯುವ ಸ್ಥಿತಿಯಿದೆ. ಅಲ್ಲದೇ ಪ್ರಕೃತಿ ಮೇಲಿನ ಕಲುಷಿತ ವಾತಾವರಣದಿಂದ ಇಂದಿನ ಯುವಪೀಳಿಗೆ ಅತಿಹೆಚ್ಚು ಹೃದಯಘಾತಕ್ಕೆ ತುತ್ತಾಗುತ್ತಿರುವುದು ಶೋಚನೀ ಯ ಎಂದರು.


ಪ್ರಪಂಚದ ಬಹುತೇಕ ರಾಷ್ಟçಗಳಲ್ಲಿ ತಾಪಮಾನ ಏರಿಕೆ, ಪ್ರಕೃತಿ ವಿಕೋಪದಿಂದ ಸ್ವಚ್ಚಂಧ ಪರಿಸರವು ಹಾನಿಗೀಡಾಗುತ್ತಿದೆ. ಈ ಸತ್ಯವನ್ನು ಅರಿಯದ ಮಾನವರು ಇನ್ನಷ್ಟು ಹೆಚ್ಚಿನ ಮಟ್ಟದಲ್ಲಿ ಭೂ ಮಂಡಲಕ್ಕೆ ಹಾನಿಕಾರಕ ವಸ್ತುಗಳನ್ನು ಬಳಸಿ ಪೃಥ್ವಿಯ ನೈಸರ್ಗಿಕ ಸಂಪತ್ತನ್ನು ಹಾಳು ಮಾಡುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.


ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಮಾತನಾಡಿ, ವನರಾಶಿ ಹೊತ್ತು ಕಂಗೊಳಿಸುವ ಪರಿಸರವನ್ನು ಹಾಳು ಮಾಡುವ ಹಕ್ಕು ಯಾರಿಗೂ ಇರುವುದಿಲ್ಲ. ಹೀಗಾಗಿ ಮನೆಯಂಗಳದಲ್ಲಿ ಕಾಪಾಡುವ ಸ್ವಚ್ಚತೆಯನ್ನು ರಸ್ತೆ, ಉದ್ಯಾನವನದಲ್ಲೂ ಕಾಪಾಡಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಪ್ರತಿನಿತ್ಯ ಆಗಮಿಸುವ ಗಂಟೆಗಾಡಿಗಳಲ್ಲೇ ಕಸ ಹಾಕಬೇಕು ಎಂದರು.


ಇದೇ ವೇಳೆ ಶಾಲಾಮಕ್ಕಳು, ಮುಖಂಡರುಗಳು ಮುಖಕ್ಕೆ ಮಾಸ್ಕ್, ಕೈವಸ್ತç ಧರಿಸಿಕೊಂಡು ರಾಷ್ಟ್ರೀಯ ಹೆದ್ದಾರಿಯ ಎರಡು ಕಡೆ ರಸ್ತೆ ಬೀದಿ, ಖಾಲಿ ನಿವೇಶನ, ಕೆರೆಯ ಅಕ್ಕಪಕ್ಕದಲ್ಲಿ ಸ್ವಚ್ಚತೆ ಕೈಗೊಂಡರು.


ಈ ಸಂದರ್ಭದಲ್ಲಿ ಮೂಗ್ತಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮೇಶ್‌ಶೆಟ್ಟಿ, ಲಯನ್ಸ್ ಕ್ಲಬ್ ಅಧ್ಯಕ್ಷ ಪುಷ್ಪರಾಜ್, ಕಾರ್ಯದರ್ಶಿ ಗೋಪಿಕೃಷ್ಣ, ಕನ್ನಡಸೇನೆ ಜಿಲ್ಲಾ ವಕ್ತಾರ ಹುಣಸೇಮಕ್ಕಿ ಲಕ್ಷ್ಮಣ್, ಗ್ರಾ.ಪಂ. ಪಿಡಿಓ, ಆಶಾ ಕಾರ್ಯಕರ್ತೆಯರು, ಸೆಂಟ್ ಜೋಸೆಫ್ ಶಾಲಾ ಮಕ್ಕಳು ಹಾಜರಿದ್ದರು.‌

  • ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?