
ಚಿಕ್ಕಮಗಳೂರು-ಕಡೂರು ತಾಲ್ಲೂಕಿನ ಯಗಟಿ ಹೋಬಳಿಯ ಗರ್ಜೆ ಗ್ರಾಮದೇವತೆ ಶ್ರೀ ಕರಲಮ್ಮ ದೇವಿಯ ಬ್ರಹ್ಮರಥೋತ್ಸವವು ಮೂರೂರು ಗ್ರಾಮಸ್ಥರ ಸಮ್ಮುಖದಲ್ಲಿ ಶ್ರದ್ದಾಭಕ್ತಿಯಿಂದ ಶನಿವಾರ ಪೂರ್ಣಗೊಂಡಿತು.
ರಥೋತ್ಸವದಲ್ಲಿ ಸಾವಿರಾರು ಭಕ್ತರು ಹಳ್ಳಿ ಸೊಡಗಿನ ಸಾಂಪ್ರದಾಯಿಕ ವೇಷಭೂಷಣದಲ್ಲಿ ಪಾಲ್ಗೊಂಡಿದ್ದು ಕಳೆತಂದಿತ್ತು. ಜೊತೆಗೆ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ತೇರಿಗೂ ಮುನ್ನ ಗ್ರಾಮಸ್ಥರು, ಎತ್ತಿನಬಂಡಿ, ಟ್ರಾಕ್ಟರ್, ಜೆಸಿಬಿ, ಆಟೋ ಹಾಗೂ ಕಾರುಗಳಲ್ಲಿ ದೇವಾಲಯ ಸುತ್ತಲು ಪ್ರಧಕ್ಷಿಣೆ ಹಾಕಿದರು.
ಮುಂಜಾನೆಯಿoದಲೇ ದೇವಿಗೆ ವಿಶೇಷಪೂಜೆ ನಡೆದವು.ಅಲಂಕಾರದಿoದ ಗರ್ಭಗುಡಿ ಕಂಗೊಳಿಸುತ್ತಿತ್ತು. ಮಹಾಮಂಗಳಾರತಿ ನಂತರ ಭಕ್ತರು ದರ್ಶನ ಭಾಗ್ಯ ಪಡೆದುಕೊಂಡರು. ನಂತರ ಬ್ರಹ್ಮರಥೋತ್ಸವ ಆರಂ ಭಗೊಂಡಿತು. ಯುವಕರು, ವಯೋವೃದ್ದರು ರಥವನ್ನು ಎಳೆದರು. ಅಕ್ಕಪಕ್ಕದಲ್ಲಿ ನಿಂತಿದ್ಧ ಭಕ್ತರು ರಥಕ್ಕೆ ಬಾಳೆಹಣ್ಣು ತೂರಿ ಭಕ್ತಿ ಪರವಾಶರಾದರು.

ನಾಳೆ ದೇವಾಲಯದಲ್ಲಿ ಸಿಡಿಉತ್ಸವ ನಡೆಯಲಿದೆ ಎಂದು ಗರ್ಜೆ ಗ್ರಾಮಸ್ಥ ಸಿ.ಜಿ.ಚಂದ್ರು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಚೇತನ್ ಕೆಂಪರಾಜ್, ದೇವಾಲಯ ಸಮಿತಿ ಮುಖಂಡರು, ಅರ್ಚಕರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
—-ವರದಿ-ಸುರೇಶ್