ಚಿಕ್ಕಮಗಳೂರು-ಸಮ್ಮೇಳನಾಧ್ಯಕ್ಷೆ ಲಕ್ಷ್ಮೀ ಶ್ಯಾಮ್‌ರಾವ್‌ಗೆ ಪದಾಧಿಕಾರಿಗಳು ಅಭಿನಂದನೆ

ಚಿಕ್ಕಮಗಳೂರು, ಮೇ.27:- ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಮಹಿಳಾ ಘಟಕದ ಪ್ರಥಮ ಸಮ್ಮೇ ಳನಾಧ್ಯಕ್ಷರಾಗಿ ಆಯ್ಕೆಗೊಂಡ ಲೇಖಕಿ ಲಕ್ಷ್ಮೀ ಶ್ಯಾಮ್‌ರಾವ್ ಅವರನ್ನು ಜಿಲ್ಲಾ ಕಸಾಪ ಪದಾಧಿಕಾರಿಗಳು ಭಾನುವಾರ ಸ್ವಗೃಹಕ್ಕೆ ಭೇಟಿ ನೀಡಿ ಅಭಿನಂದಿಸಿ ಗೌರವಿಸಿದರು.

ಕಸಾಪ ಸ್ವಾಗತ ಸಮಿತಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ, ಜೂನ್ 14 ರಂದು ನಗರದ ಕುವೆಂಪು ಕಲಾಮಂದಿರದಲ್ಲಿ ತಾಲ್ಲೂಕು ಮಹಿಳಾ ಕಸಾಪ ಸಮ್ಮೇಳನವನ್ನು ಆಯೋಜಿಸಲಾಗಿದ್ದು ಮಹಿಳಾ ಸಾಹಿತ್ಯ ಲೋಕದಲ್ಲಿ ಅಪಾರ ಸಾಧನೈದ ಲಕ್ಷ್ಮೀ ಶ್ಯಾಮ್‌ರಾವ್‌ರ ಸೇವೆ ಗುರುತಿಸಿ ಒಕ್ಕೊರಲಿನಿಂದ ಸಮ್ಮೇಳ ನಾಧ್ಯಕ್ಷರಾಗಿ ಆಯ್ಕೆಗೊಳಿಸಲಾಗಿದೆ ಎಂದರು.

ಪ್ರಸ್ತುತ ತಮ್ಮದೇ ಶೈಲಿಯಲ್ಲಿ ಕವನ ಸಂಕಲನ, ಕಥೆಗಳು ರಚಿಸುವ ಜೊತೆಗೆ ಅನೇಕ ಗ್ರಂಥಗಳ ಅನು ವಾದವನ್ನು ಮಾಡಿರುವ ಕೀರ್ತಿ ಲಕ್ಷ್ಮಿ ಅವರಿಗಿದೆ. ಅಲ್ಲದೇ ತಮ್ಮ ಅನಾರೋಗ್ಯವನ್ನು ಲೆಕ್ಕಿಸದೇ ಸಾಮಾಜಿ ಕ ಚಟುವವಟಿಕೆಗಳಲ್ಲಿ ಹುರುಪಿನಿಂದ ಭಾಗವಹಿಸುವವರನ್ನು ಸಮ್ಮೇಳನಾಧ್ಯಕ್ಷರಾಗಿ ಮಾಡಿರುವುದು ಹೆಮ್ಮೆ ಯ ಸಂಗತಿ ಎಂದರು.

ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ತಾಲ್ಲೂಕು ಮಹಿಳಾ ಕಸಾಪ ಘಟಕದ ಸಮ್ಮೇಳನ ಜಿಲ್ಲಾ ಕೇಂದ್ರದಲ್ಲಿ ನಡೆಯುತ್ತಿದೆ. ಈ ಸಮ್ಮೇಳನದ ಮುಖ್ಯ ರೂವಾರಿ ಲಕ್ಷ್ಮಿರ ಸಾರಥ್ಯದಲ್ಲಿ ಕಾರ್ಯಕ್ರಮ ಅತ್ಯಂತ ಯಶಸ್ವಿಗೊಳ್ಳುವ ಜೊತೆಗೆ ಸಾಹಿತ್ಯಾಸಕ್ತರು, ಬರಹಗಾರರು, ಲೇಖಕರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.

ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ ಜೂನ್ 14ರ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಧ್ವಜಾ ರೋಹಣ ನಡೆಯಲಿದೆ. ಅಂದಿನ ಕಾರ್ಯಕ್ರಮದ ಉದ್ಘಾಟನೆಯನ್ನು ಕನ್ನಡಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ|| ಪುರುಷೋತ್ತಮ್ ಬಿಳಿಮಲೆ ಅವರು ನೆರವೇರಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ, ಮೂವರಿಗೆ ಸಾಹಿತ್ಯ ಸಿರಿ, ಅನೇಕರಿಗೆ ಸಾಹಿತ್ಯ ಸೇವೆ ಗುರುತಿಸಿ ಕನ್ನಡಸಿರಿ ಪ್ರಶಸ್ತಿ ವಿತರಿಸಲಾಗುವುದು. ಸಾಹಿತಿ ದೀಪಾ ಹಿರೇಗುತ್ತಿ ಸಮಾರೋಪ ನುಡಿಗಳನ್ನಾ ಡಲಿದ್ದಾರೆ. ಹಾಸನ ಕಸಾಪ ಅಧ್ಯಕ್ಷ ಮಲ್ಲೇಶ್‌ಗೌಡ ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸವಿತಾ ರಮೇಶ್ ಪ್ರವೇಶ ನುಡಿಗಳನ್ನಾಡಲಿದ್ದಾರೆ. ಮಾಜಿ ಶಾ ಸಕಿ ಮೋಟಮ್ಮ ಜಾನಪದ ಗೋಷ್ಟಿ ಹಾಗೂ ಡಾ|| ಪುಷ್ಪಭಾರತಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ.

ಜಿಲ್ಲಾ ಲೇಖಕಿರ ಸಂಘದ ಅಧ್ಯಕ್ಷೆ ಅಜ್ಜಂಪುರ ಎಸ್.ಶೃತಿ ಕವಿಗೋಷ್ಠಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಾಲತಿ ಜಾನಪದ ಗೋಷ್ಠಿ ಉದ್ಘಾಟಿಸಲಿದ್ದಾರೆ. ಹಾಗೂ ಕ್ಷೇತ್ರದ ಜನಪ್ರತಿನಿ ಧಿಗಳು, ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ತಾಲ್ಲೂಕು ಅಧ್ಯಕ್ಷ ದಯಾನಂದ್ ಮಾವಿನಕೆರೆ, ನಿಕಟ ಪೂರ್ವ ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಿರ್ಮಲ ಮಂಚೇಗೌಡ, ತಾಲ್ಲೂಕು ಅಧ್ಯಕ್ಷೆ ವಿಜಯಲಕ್ಷ್ಮಿ, ನಗರಾಧ್ಯಕ್ಷ ಸಚಿನ್‌ಸಿಂಗ್, ದಾಸ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷೆ ಮಹಾಲಕ್ಷ್ಮೀ, ಕನ್ನಡದ ಕಟ್ಟಾಳುಗಳಾದ ಸುನೀತಾ ಕಿರಣ್, ಬಿ.ಪ್ರಕಾಶ್ ಮತ್ತಿತರರು ಹಾಜರಿದ್ದರು.

  • ಸುರೇಶ್‌ ಎನ್.

Leave a Reply

Your email address will not be published. Required fields are marked *