ಚಿಕ್ಕಮಗಳೂರು-ಐತಿಹಾಸಿಕ ಪ್ರಸಿದ್ಧ ಹಿರೇಮಗಳೂರು ಶ್ರೀ ಕೋದಂಡರಾಮಚಂದ್ರ ಸ್ವಾಮಿಯವರ ಬ್ರಹ್ಮರಥೋತ್ಸವದ ಅಂಗವಾಗಿ ಗ್ರಾಮೀಣ ಸೊಡಗಿನಲ್ಲಿ ಜೋಡೆತ್ತುಗಳನ್ನು ಅಲಂಕರಿಸಿ, ಗ್ರಾಮದ ಸುತ್ತಲು ಮೆರವಣಿಗೆ ನಡೆಸಿ, ಗ್ರಾಮದೇವತೆಗಳ ಉತ್ಸವ ಕಾರ್ಯವು ಶ್ರದ್ದೆಯಿಂದ ಬುಧವಾರ ನೇರವೇರಿತು.
ಈ ವೇಳೆ ದೇವಾಲಯದ ಅರ್ಚಕ ಹಿರೇಮಗಳೂರು ಕಣ್ಣನ್ ಮಾತನಾಡಿ ಮಾರ್ಚ್ ೯ರಂದು ನಡೆ ಯಲಿರುವ ಬ್ರಹ್ಮ ರಥೋತ್ಸವದ ಪ್ರಯುಕ್ತ ಇಂದು ಪಡಿ ಸಂಗ್ರಹ ಕಾರ್ಯಕ್ರಮವು ಯಶಸ್ವಿಯಾಗಿ ನಡೆ ಯಿತು. ಮಾ.12 ರವರೆಗೆ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಹೋಮ ಹವನಗಳು ಜರುಗಲಿದೆ ಎಂದು ತಿಳಿಸಿದರು.
ಸಂಸ್ಕೃತ ವಿದ್ವಾಂಸ ವೈಷ್ಣವ ಸಿಂಹ ಮಾತನಾಡಿ ಭಕ್ತಿಯಿಂದ ಶ್ರೀ ಕೋದಂಡರಾಮಚAದ್ರನನ್ನು ನಿಸ್ವಾ ರ್ಥ, ಮುಕ್ತ ಮನಸ್ಸಿನಿಂದ ಆರಾಧಿಸಿ, ಪೂಜಿಸಿದರೆ ಮಾನವ ಇಷ್ಟಾರ್ಥ ಹಾಗೂ ಆಕಾಂಕ್ಷೆಗಳನ್ನು ಈ ಡೇರಿಸುವನು ಎಂಬ ಪ್ರತೀತಿ ಹಿರೇಮಗಳೂರು ದೇವಾಲಯದಲ್ಲಿದೆ ಎಂದರು.
ಈ ಸಂದರ್ಭದಲ್ಲಿ ದೇವಾಲಯ ಟ್ರಸ್ಟ್ ಖಜಾಂಚಿ ರಂಗನಾಥ, ಸಂಚಾಲಕಿ ರಮಮೋಹನ್, ಮೂಡಿಗೆರೆಯ ಮಂಚೇಗೌಡ ಕುಟುಂಬ, ನಗರಸಭಾ ಮಾಜಿ ಸದಸ್ಯರಾದ ಹಿರೇಮಗಳೂರು ಪುಟ್ಟಸ್ವಾಮಿ, ಹೆಚ್. ಎಸ್.ಜಗದೀಶ್, ಗ್ರಾಮಸ್ಥರಾದ ಹೆಚ್.ಕೆ.ಕೇಶವಮೂರ್ತಿ, ರಾಮಚಂದ್ರ, ಮೋಹನ್, ಬಾಲಾಜಿ, ರಾಜಶೇ ಖರ್, ಶಿವಾಜಿ, ಸ್ವಾಮಿ, ಸಹ ಅರ್ಚಕರು ಹಾಜರಿದ್ದರು.
- ಸುರೇಶ್ ಎನ್.