ಚಿಕ್ಕಮಗಳೂರು– (ಪಿಎನ್‌ಬಿ) ಶಿವರಾತ್ರಿ ಆಧ್ಯಾತ್ಮಿಕ ಹಬ್ಬವಷ್ಟೇ ಅಲ್ಲ, ನಮ್ಮ ದೇಹ ಪ್ರಕೃತಿಗೂ ಪೂರಕ. ಪಂಚೇAದ್ರಿಯಗಳ ನಿಗ್ರಹಿಸುವ ತರಬೇತಿಯೂ ಹೌದು ಎಂದು ಸೆಕ್ಯೂರ್ ಹೆಲ್ತ್ಕೇರ್‌ನ ಆಯುರ್ವೇದ ಮತ್ತು ಯೋಗ ತಜ್ಞೆ ಡಾ||ಗೌರಿವರುಣ್ ಅಭಿಪ್ರಾಯಿಸಿದರು.
ಶ್ರೀಪಾರ್ವತಿ ಮಹಿಳಾ ಮಂಡಳಿ ಚಿಕ್ಕೊಳಲೆ ಸದಾಶಿವಶಾಸ್ತ್ರೀ ಸಭಾಂಗಣದಲ್ಲಿ ಆಯೋಜಿಸಿದ್ದ ಶಿವರಾತ್ರಿ ಸಂಭ್ರಮ ಕರ‍್ಯಕ್ರಮವನ್ನು ಉದ್ಘಾಟಿಸಿ ಅವರಿಂದು ಮಾತನಾಡಿದರು.
ಶಿವರಾತ್ರಿ ಮಹತ್ವದ ಅರ್ಥಪೂರ್ಣ ಆಚರಣೆ. ಮನಸ್ಸು ಮತ್ತು ದೇಹ ಸುಸ್ಥಿತಿಯಲ್ಲಿಡಲು ಪೂರಕ ಆಚರಣೆ. ಪೂಜೆ, ಧ್ಯಾನದ ಜೊತೆಗೆ ಉಪವಾಸ ಇಲ್ಲಿಯ ಪ್ರಮುಖ ಅಂಶ. ಉಪ ಎಂದರೆ ಹತ್ತಿರ ವಾಸ ಎಂದರೆ ದೇವರ ಸಮೀಪ ವಿರುವುದು ಎಂಬ ಶಬ್ದಾರ್ಥವಿದೆ. ಇದು ಮನಸ್ಸಿನ ಒತ್ತಡ ನಿಗ್ರಹದ ಜೊತೆಗೆ ಪಂಚೇಂದ್ರಿಯಗಳನ್ನು ಹತೋಟಿಯಲ್ಲಿಡಲು ಸಹಕಾರಿ ಎಂದರು.
ಶಿವರಾತ್ರಿ ಸೃಷ್ಟಿಯ ಆದಿ. ಶಿವ-ಪಾರ್ವತಿಯರ ಕಲ್ಯಾಣ ದಿನ. ಗಂಗೆಯನ್ನು ಭೂಮಿಗೆ ಶಿವ ಹರಿಬಿಟ್ಟ ದಿನ. ಸಮುದ್ರ ಮಂಥನದಲ್ಲಿ ಹಾಲಾಹಲ ಆದಾಗ ವಿಷವನ್ನು ರಾತ್ರಿಪೂರ್ತಿ ತನ್ನ ಗಂಟಲಿನಲ್ಲಿ ಇರಿಸಿಕೊಂಡು ದೇವತೆಗಳಿಗೆ ಅಮೃತ ನೀಡಿದ ಪುಣ್ಯದಿನವೆಂಬ ಪ್ರತೀತಿ ಇದೆ. ಸ್ಥಾವರ ಲಿಂಗವಿರುವಲ್ಲಿ ಶಿವರಾತ್ರಿಯಂದು ಭಕ್ತಿ ಹೊಮ್ಮಿಸುತ್ತೆವೆ. ಭಜನೆ ಧ್ಯಾನ, ಉಪವಾಸಾದಿ ಆಚರಣೆಗಳಿಂದ ದೇವರನ್ನು ಒಲಿಸಿಕೊಳ್ಳಬಹುದು ಎಂದ ಡಾ||ಗೌರಿ, ಏಕಾಗ್ರತೆಯನ್ನು ಸಾಧಿಸಬಹುದು ಎಂದರು.

ಉಪವಾಸ ಜಗತ್ತಿನ ಅತ್ಯುತ್ತಮ ಔಷಧ. ಕ್ಯಾನ್ಸರ್ ಸೆಲ್‌ಗಳನ್ನು ಉಪವಾಸದಿಂದ ಕೊಲ್ಲಬಹುದು ಎಂಬ ಮಾತಿದೆ. ನಮ್ಮ ದೇಹ-ಮನಸ್ಸು ಸುಸ್ಥಿತಿಯಲ್ಲಿಡಲು ಒಳ್ಳೆಯ ಉಪವಾಸ ಸಹಕಾರ. ತನು-ಮನ ಹಗುರಾಗುತ್ತದೆ. ಕಿವಿ-ಕಣ್ಣು ಚುರುಕಾಗುತ್ತವೆ, ಚೆನ್ನಾಗಿ ಹಸಿವಾಗುತ್ತದೆ. ಜೀವನ ಬದುಕಿಗೆ ಬೇಕಾದಷ್ಟು ಮಾತ್ರ ಊಟಮಾಡಬೇಕು. ಹಿತಮಿತವಾದ, ಋತುಮಾನಕ್ಕೆ ತಕ್ಕದಾದ ಆಹಾರ ಸೇವನೆ ಸದಾಉತ್ತಮ ಎಂದು ಆಯುರ್ವೇದ ಹೇಳುತ್ತದೆ ಎಂದರು.
ಸಾತ್ವಿಕ ಆಹಾರ ಸೇವನೆಯಿಂದ ದೇಹಾರೋಗ್ಯ ಸುಸ್ಥಿತಿಯಲ್ಲಿಡಲು ಸಾಧ್ಯ. ಜಂಕ್‌ಫುಡ್ ಸೇವನೆಯಿಂದ ಅತಿಯಾದ ನ್ಯೂಟ್ರಿಷನ್ ದೇಹ ಸೇರಿತ್ತದೆ. ಇದು ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದ್ರೋಗದಂಹತ ಅನೇಕ ತೊಂದರೆಗಳನ್ನು ಆಹ್ವಾನಿಸುತ್ತದೆ. ಇನ್ನೂ ಸ್ವಲ್ಪ ಬೇಕೆನಿಸುವಾಗಲೇ ಸೇವನೆ ನಿಲ್ಲಿಸಬೇಕು. ನೀರು, ಗಾಳಿಗೆ ಹೊಟ್ಟೆಯಲ್ಲಿ ಸ್ಥಳಾವಕಾಶವಿರಬೇಕು. ಖಾಲಿಹೊಟ್ಟೆ ಬೊಜ್ಜು ಕರಗಿಸಲು ಸಹಕಾರಿ ಎಂದ ಡಾ.ಗೌರಿ ನಮ್ಮ ಎಲ್ಲ ಸಂಪ್ರದಾಯಕ ಹಬ್ಬಗಳಲ್ಲೂ ದೇಹಾರೋಗ್ಯದ ಕಾಳಜಿ ಇದೆ ಬಣ್ಣಿಸಿದರು.
ಶ್ರೀಪಾರ್ವತಿ ಮಹಿಳಾ ಮಂಡಳಿಯ ಅಧ್ಯಕ್ಷೆ ಸುಮಿತ್ರಾಶಾಸ್ತ್ರಿ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ ಮಹಾಶಿವರಾತ್ರಿ ಹಿಂದೂಗಳ ಪವಿತ್ರ ಹಬ್ಬ. ಶಿವ ಜಲಾಬಿಷೇಕ ಪ್ರಿಯ. ಬಿಲ್ವಪತ್ರೆ, ತುಂಬೆ ಹೂ ಅರ್ಪಿಸಿದರೂ ಶಿವ ಒಲಿಯುತ್ತಾನೆಂಬ ನಂಬಿಕೆ ಜನಮಾನಸದಲ್ಲಿದೆ. ನಾದಪ್ರಿಯನೂ ಅಲ್ಲ, ವೇದ ಪ್ರಿಯನೂ ಅಲ್ಲ, ಭಕ್ತಿಪ್ರಿಯ ಶಿವ ಎಂದರು.

ಈ ವೇಳೆ ಸಹಕರ‍್ಯದರ್ಶಿ ಪಾರ್ವತಿ ಬಸವರಾಜ್, ಉಪಾಧ್ಯಕ್ಷೆ ಮಂಜುಳಾಮಹೇಶ್, ಖಜಾಂಚಿ ಸೌಭಾಗ್ಯಜಯಣ್ಣ ಬಹುಮಾನ ವಿತರಿಸಿದರು.
ಸಾಮೂಹಿಕ ಶಿವಪೂಜೆ, ಶಿವನ ಭಕ್ತಿಗೀತೆಗಳ ಗಾಯನ, ಸಾಮೂಹಿಕ ಅಷ್ಟೋತ್ತರ ಬಿಲ್ವಪತ್ರಾರ್ಚನೆ , ಮಹಾಮಂಗಳಾರತಿಯೊAದಿಗೆ ಮಹಾಪ್ರಸಾದ ವಿನಿಯೋಗಿಸಲಾಯಿತು. ಪ್ರಯಾಗ ತ್ರಿವೇಣಿ ಸಂಗಮದ ಪವಿತ್ರಜಲದೊಂದಿಗೆ ಶಿವರಾತ್ರಿ ತಂಬಿಟ್ಟು, ರುದ್ರಾಕ್ಷಿ, ವಿಭೂತಿ, ವಸ್ತç ವಿತರಿಸಲಾಯಿತು.