ಚಿಕ್ಕಮಗಳೂರು: ಶಾಂತಿನಗರದ ಪಿಎಂಶ್ರೀ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾ ಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿ ಆಜಾಮ್ ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ಶೃತಿ ಸೇರಿದಂತೆ 16 ಮಂದಿ ಸದಸ್ಯರುಗಳು ಬುಧವಾರ ಆಯ್ಕೆಯಾದರು.
ಈ ವೇಳೆ ನಗರಸಭಾ ಸದಸ್ಯ ಮುನೀರ್ ಅಹ್ಮದ್ ಅಭಿನಂದನೆ ಸಲ್ಲಿಸಿ ಮಾತನಾಡಿ ಶಾಲಾಭಿವೃದ್ದಿ ಸ್ಥಾನ ಅತ್ಯಂತ ಜವಾಬ್ದಾರಿ ಹೊಂದಿದೆ. ಮಕ್ಕಳ ಶೈಕ್ಷಣಿಕ ಬೆಳವಣಿಗೆ ಸಹಕರಿಸುವುದು ಸದಸ್ಯರುಗಳ ಧ್ಯೇ ಯವಾಗಬೇಕು ಎಂದು ಕಿವಿಮಾತು ಹೇಳಿದರು.
ಶಾಲೆಗಳಲ್ಲಿ ಕುಂದುಕೊರತೆ ಅಥವಾ ಲೋಪದೋಷಗಳು ಕಂಡುಬAದಲ್ಲಿ ಆಲಿಸಬೇಕು. ಉಪ್ಪಳ್ಳಿ ವಾ ರ್ಡಿನ ಅನೇಕ ಮಕ್ಕಳು ಇದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಕಾರಣ ಸಂಪೂರ್ಣ ಸಹಕಾರವು ತಮ್ಮಿಂದ ದೊರೆಯಲಿದ್ದು, ದೊಡ್ಡಮಟ್ಟಿನ ಕೊರತೆ ಕಂಡುಬAದಲ್ಲಿ ಶಾಸಕರ ಗಮನಕ್ಕೆ ತಂದು ಬಗೆಹರಿಸ ಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ನೂತನ ಸದಸ್ಯರುಗಳು : ಆಯಿಷಾ ಅಕ್ರಂ, ಪ್ರತಾಪ್, ಆಯಿಷಾ, ಅಪ್ರೋಜ್‌ಷರೀಫ್, ದಾದಾಪೀರ್, ಧರ್ಮಶಾಸ್ತç, ಮಣಿಕಂಠ, ಕುಮಾರ್, ವೆಂಕಟೇಶ್, ಭರತ್, ರಾಧಿಕಾ, ಗೀತಾ, ಜಯಲಕ್ಷ್ಮಿ, ಸರೋಜ, ಜಯಮ್ಮ ಆಯ್ಕೆಯಾದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಯ ಚಂದ್ರಯ್ಯ, ದೈಹಿಕ ಶಿಕ್ಷಣ ಪರಿವೀಕ್ಷಕ ಷೇರ್‌ಆಲಿ, ಶಿಕ್ಷಣ ಸಂಯೋಜಕಿ ಜಾನಕಮ್ಮ, ಸಿಡಿಎ ಸದಸ್ಯೆ ಗುಣವತಿ, ಸ್ಥಳೀಯರಾದ ತೌಷಿಕ್‌ಖಾನ್, ದಾದು ಮತ್ತಿ ತರರು ಹಾಜರಿದ್ದರು.