ಚಿಕ್ಕಮಗಳೂರು- ಏ.14 ರಿಂದ ಮನೋ ಸಾಮಾಜಿಕ ಬೆಳವಣಿಗೆಗಾಗಿ ವಿಶೇಷ ಶಿಬಿರವನ್ನು ಆರೋಜಿಸಲಾಗಿದೆ ಎಂದು ಸಾಮಾಜಿಕ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಅಧ್ಯಕ್ಷರಾದ ರಾಜು ನರಸಯ್ಯ ತಿಳಿಸಿದರು.
ನಂತರ ಮಾತನಾಡಿದ ಅವರು ಸಾಮಾಜಿಕ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಚಿಕ್ಕಮಗಳೂರು ಮತ್ತು ಮನೋಸ್ಪಂದನ ಮನೋವೈದ್ಯಕೀಯ ಚಿಕಿತ್ಸೆ ಮತ್ತು ಆಪ್ತ ಸಮಾಲೋಚನಾ ಕೇಂದ್ರ ಚಿಕ್ಕಮಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಹದಿಹರೆಯದ ಮಕ್ಕಳ ಶೈಕ್ಷಣಿಕ ಮತ್ತು ಮನೋ ಸಾಮಾಜಿಕ ಬೆಳವಣಿಗೆಗಾಗಿ ಈ ಶಿಬಿರವನ್ನು ಚಿಕ್ಕಮಗಳೂರು ನಗರದ ಹೊರವಲಯದ ಬಿ.ಜಿ.ಎಸ್ ಕಾಲೇಜು ರಸ್ತೆ ಜ್ಯೋತಿ ನಗರ (ಹೌಸಿಂಗ್ ಬೋರ್ಡ್) ಸ್ಪಂದನ ಪಾರ್ಕ್ ಪಕ್ಕದ ಮನೋವೈದ್ಯಕೀಯ ಮತ್ತು ಆಪ್ತ ಸಮಾಲೋಚನಾ ಕೇಂದ್ರದಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಈ ಶಿಬಿರವು ಏಪ್ರಿಲ್ 14ರಿಂದ 30ರವರೆಗೆ ನಡೆಯಲಿದೆ, ಶಿಬಿರದಲ್ಲಿ ವಿಶೇಷ ಪರಿಣಿತಿ ಹೊಂದಿರುವ ತಜ್ಞರು, ಶಿಕ್ಷಕರು, ಮನು ಶಾಸ್ತ್ರಜ್ಞರು, ಹಾಗೂ ಇತರ ಹಲವಾರು ಪರಿಣತಿ ಹೊಂದಿರುವ ವ್ಯಕ್ತಿಗಳು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ತರಬೇತಿ ನೀಡಲಿದ್ದಾರೆ ಎಂದು ತಿಳಿಸಿದರು.
ಈ ವಿಶೇಷ ಶಿಬಿರದಲ್ಲಿ ಭಾಗವಹಿಸುವವರಿಗೆ ಕೊನೆಯ ದಿನಾಂಕ ಏಪ್ರಿಲ್ 12ರ ಒಳಗೆ ನೋಂದಣಿ ಮಾಡಿಕೊಳ್ಳುವಂತೆ ಹಾಗೂ ದೂರವಾಣಿ ಸಂಖ್ಯೆ 6362133584 ಸಂಪರ್ಕಿಸಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಜಯಶೀಲ ಕೆ ಆರ್, ಶಿಬಿರದ ಸಂಯೋಜಕರಾದ ವರ್ಷ ಎಂಪಿ, ಮಾನಸಿಕ ಆರೋಗ್ಯ ತಜ್ಞರಾದ ವಿನಯ್ ಕುಮಾರ್ ಕೆಎಸ್, ಆಪ್ತ ಸಮಾಲೋಚಕರಾದ ಆಶಾ ಎ, ಕಿರಣ್ ಕುಮಾರ್, ಪ್ರಭು ಕುಮಾರ್, ನವೀನ್ ಕುಮಾರ್, ಜಯಣ್ಣ ಹಾಗೂ ಇನ್ನಿತರರು ಉಪಸ್ಥಿತರಿದ್ದರು.