ಚಿಕ್ಕಮಗಳೂರು:– ನಟ ಡಾ.ಪುನೀತ್‌ರಾಜ್‌ಕುಮಾರ್ 5೦ನೇ ಜನ್ಮದಿನದ ಪ್ರಯುಕ್ತ ನಗರದ ಪೆನ್‌ಷನ್ ಮೊಹಲ್ಲಾದಲ್ಲಿ ಅಂಬೇಡ್ಕರ್ ಯುವಕ ಸಂಘ ಮತ್ತು ಸ್ಥಳೀಯರ ನೇತೃತ್ವದಲ್ಲಿ ಕೇಕ್ ಕತ್ತರಿಸಿ ಸಿಹಿ ಹಂಚುವ ಮೂಲಕ ಸೋಮವಾರ ಸಂಜೆ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿದರು.
ಈ ವೇಳೆ ಮಾತನಾಡಿದ ನಗರಸಭಾ ಸದಸ್ಯ ಶಾದಬ್ ಆಲಂಖಾನ್ ನಗುಮುಖದ ಒಡೆಯ ಪುನೀ ತ್‌ರಾಜ್‌ಕುಮಾರ್ ಎಂದಿಗೂ ಅಜಾರಾಮರ. ನಟನೆಯ ಪ್ರತಿ ಚಿತ್ರವು ವಿಭಿನ್ನ, ವಿಶಿಷ್ಟತೆಯಿಂದ ಕೂಡಿತ್ತು. ಯುವಸಮೂಹವನ್ನು ಹೆಚ್ಚು ಆಕರ್ಷಿಸುವ ಕಥೆಗಳಲ್ಲಿ ನಟಿಸಿ ಪ್ರಖ್ಯಾತಿ ಪಡೆದ ಅಪರೂಪದ ನಟರು ಎಂದು ಹೇಳಿದರು.

ಪುನೀತ್‌ರಾಜ್‌ಕುಮಾರ್ ದೈಹಿಕವಾಗಿ ನಮ್ಮೊಂದಿಗೆ ಇಲ್ಲವಾದರೂ, ಜೀವಿತಾವಧಿಯಲ್ಲಿ ಕೈಗೊಂಡ ಸಾಮಾಜಿಕ ಕಾರ್ಯ, ಯುವತಿಯರ ಬಾಳಿಗೆ ಬೆಳಕು ನೀಡಿರುವುದು ಹಾಗೂ ಬಡಮಕ್ಕಳಿಗೆ ಉಚಿತ ವಿದ್ಯಾ ಭ್ಯಾಸಕ್ಕೆ ಆರ್ಥಿಕ ಸಹಾಯಧನ ನೆನಪಿನಲ್ಲಿ ಸದಾ ನಮ್ಮೊಂದಿಗಿದ್ದಾರೆ ಎಂದು ತಿಳಿಸಿದರು.
ಪ್ರಸ್ತುತ ಸಮಾಜದಲ್ಲಿ ಯುವಕರು ಪುನೀತ್‌ರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಕನಿಷ್ಟ ದುಡಿ ಮೆಯ ಒಂದಿಷ್ಟು ಹಣವನ್ನು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿದರೆ ಪುನೀತ್ ಅಭಿಮಾನಿಯಾಗಲು ಸಾರ್ಥಕವಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಶಹಬುದ್ದೀನ್ ಮಾತನಾಡಿ ವಿಶೇಷ ನಟನೆಯಿಂದ ಇಡೀ ರಾಷ್ಟçದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಏಕೈಕ ಪುನೀತ್, ಸಮಾಜಮುಖಿ ಕಾರ್ಯದ ಜೊತೆಗೆ ವರನಟ ರಾಜ್‌ಕುಮಾರ ಪುತ್ರನೆಂಬ ಅಹಂ ಇಲ್ಲದೇ ಎಲ್ಲರೊಂದಿಗೂ ಬಾಂಧವ್ಯದಿಂದ ಬೆರೆಯುವ ಗುಣ ಅವರಲ್ಲಿ ತ್ತು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಯುವಕರ ಸಂಘದ ಸಂತೋಷ್, ಅನಿಲ್, ಕಿರಣ್, ಬಿಜೆಪಿ ಮುಖಂಡ ನವೀನ್, ವರ್ತಕರಾದ ರಾಜು, ಶರತ್, ಪೌರಕಾರ್ಮಿಕರಾದ ನರಸಯ್ಯ, ಭಾಗಭೂಷಣ್, ರಘು, ಸ್ಥಳೀಯರು ಭಾಗವಹಿಸಿದ್ದರು.