
ಚಿಕ್ಕಮಗಳೂರು-ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ನಡೆಸುವ ಶಿವಮೊಗ್ಗ ವಲಯ ಪುರುಷರ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಗರದ ರತ್ನಗಿರಿ ಕ್ರಿಕೆಟ್ ತಂಡ ಎಲ್ಲ ಲೀಗ್ ಪಂದ್ಯಗಳೂ ಸೇರಿದಂತೆ ಸೆಮಿಪೈನಲ್, ಫೈನಲ್ ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಪ್ರಶಸ್ತಿಗೆ ಭಾಜನರಾಗಿರುವುದಲ್ಲದೇ 2ನೇ ಡಿವಿಜನ್‌ನಿಂದ ಮೊದಲ ಡಿವಿಜನ್‌ಗೆ ಭಡ್ತಿ ಪಡೆದು ಸಾಧನೆ ಮಾಡಿದೆ.
ಕೆ.ಎಸ್.ಸಿ.ಎ ಇತ್ತೀಚೆಗೆ ಶಿವಮೊಗ್ಗ ನಗರದ ನವಿಲೆ ಕೆ.ಎಸ್.ಸಿ.ಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಶಿವಮೊಗ್ಗ ವಲಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿತ್ತು, ಈ ಪಂದ್ಯಾವಳಿಯಲ್ಲಿ ನಗರದ ರತ್ನಗಿರಿ ಕ್ರಿಕೆಟ್ ತಂಡ ಲೀಗ್ ಹಂತದ ಎಲ್ಲ ಪಂದ್ಯಗಳು ಮತ್ತು ಸೆಮಿಫೈನಲ್, ಫೈನಲ್ ಸೇರಿದಂತೆ ಆಡಿದ ಎಲ್ಲ 9 ಪಂದ್ಯಗಳಲ್ಲೂ ಸೋಲು ಕಾಣದೇ ನಗದು ಬಹುಮಾನ ಹಾಗೂ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಮೂಲಕ 2025ನೇ ಸಾಲಿನ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ಇದರೊಂದಿಗೆ ರತ್ನಗಿರಿ ಕ್ರಿಕೆಟ್ ತಂಡ ಕೆ.ಎಸ್.ಸಿ.ಎಯ 2ನೇ ಡಿವಿಜನ್‌ನಿಂದ ಮೊದಲ ಡಿವಿಜನ್‌ಗೆ ಭಡ್ತಿ ಪಡೆದುಕೊಂಡಿದೆ.

ರತ್ನಗಿರಿ ಕ್ರಿಕೆಟ್ ತಂಡವು ನಗರದ ಖ್ಯಾತ ಕ್ರಿಕೆಟ್ ಕೋಚ್ ಆಗಿರುವ ಶಂಕರ್ ಅವರ ತರಬೇತಿ ಮತ್ತು ಮಾರ್ಗದರ್ಶನದಲ್ಲಿ ಈ ಸಾಧನೆ ಮಾಡಿದ್ದು, ತಂಡದ ನಾಯಕ ರಾಕೇಶ್ ತಂಡದ ಗೆಲುವಿನ ರುವಾರಿಯಾಗಿದ್ದಾರೆ.
ಇವರೊಂದಿಗೆ ಆರಂಭಿಕ ಆಟಗಾರ ಯಾಸಿರ್ ಅಹ್ಮದ್, ಮುಖೀಬ್, ಖಾನ್, ಶಶಾಂಕ್, ರಾಕೇಶ್ ಎನ್.ಆರ್, ಬೌಲರ್‌ಗಳಾದ ರಜತ್‌ಗೌಡ, ರಾಕೇಶ್, ದೀಪಕ್, ಸಾಯಿನಂದನ್ ಹಾಗೂ ಫೈನಲ್ ಪಂದ್ಯದಲ್ಲಿ 68ರನ್ ಗಳಿಸಿದ ಫಜಲ್ ಬೇಲೂರ್ ಅವರ ಸಂಘಟಿತ ಆಟದಿಂದಾಗಿ ರತ್ನಗಿರಿ ಕ್ರಿಕೆಟ್ ತಂಡ ಕೆ.ಎಸ್.ಸಿ.ಎ ಶಿವಮೊಗ್ಗ ವಲಯ ಮಟ್ಟದ ಪುರುಷರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.