ಚಿಕ್ಕಮಗಳೂರು: ಶಾಲಾ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಹಾಗೂ ವೃದ್ದಾಪ್ಯರ ಸೇವೆಗೆ ಅನುಗುಣವಾಗಿ ಮೂಲಸವಲತ್ತನ್ನು ವಿತರಿಸುವ ಸಾಮಾಜಿಕ ಕಾರ್ಯದಲ್ಲಿ ಸಂಸ್ಥೆ ಹಲವಾರು ವರ್ಷಗಳಿಂದ ಮುಂದಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಎಂ.ಎಲ್.ಸುಜಿತ್ ಹೇಳಿದರು.
ನಗರದ ಆಶಾಕಿರಣ ಅಂಧಮಕ್ಕಳ ಶಾಲೆಯಲ್ಲಿ ರೋಟರಿ ಕ್ಲಬ್ ಸಂಸ್ಥಾಪನ ದಿನದ ಅಂಗವಾಗಿ ಪಥ ಸಂಚಲನದಲ್ಲಿ ಭಾಗವಹಿಸುವ ವಿಶೇಷಚೇತನ ಮಕ್ಕಳಿಗೆ ಶೂ ಮತ್ತು ಸಾಕ್ಸ್ನ್ನು ಭಾನುವಾರ ಸಂಜೆ ಉಚಿತ ವಾಗಿ ವಿತರಿಸಿ ಅವರು ಮಾತನಾಡಿದರು.
ಮಕ್ಕಳು ವಿಕಲರಾಗದಂತೆ ಬಾಲ್ಯಾವಸ್ಥೆಯಿಂದಲೇ ಪಲ್ಸ್ ಪೊಲೀಯೋ ಲಸಿಕೆ ನೀಡುವುದು, ಸರ್ಕಾರಿ ಹಾಗೂ ವಿಶೇಷಚೇತನ ಶಾಲೆಯ ಮಕ್ಕಳಿಗೆ ಕ್ರೀಡಾಸಾಮಾಗ್ರಿ, ಚಳಿಗಾಲದಲ್ಲಿ ಶೆಟ್ವರ್ ಸೇರಿದಂತೆ ಫಲಾಪೇಕ್ಷೆ ಯಿಲ್ಲದೇ ಸಂಸ್ಥೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ಮುನ್ನೆಡೆಯುತ್ತಿದೆ ಎಂದರು.
ಪ್ರಸ್ತುತ ಕದ್ರಿಮಿದ್ರಿ ಸಮೀಪದ ಜೀವನ ಸಂಧ್ಯಾ ವೃದ್ದಾಶ್ರಮದ ಜವಾಬ್ದಾರಿ ಹಾಗೂ ರೋಟರಿ ಕಣ್ಣಿನ ಆಸ್ಪತ್ರೆಯನ್ನು ಸ್ಥಾಪಿಸುವ ಜೊತೆಗೆ ನಿರ್ವಹಣೆಯ ಮುಖ್ಯಸ್ಥಿಕೆಯನ್ನು ವಹಿಸಿಕೊಂಡು ಬಡಜನತೆಯ ಪರ ವಾಗಿ ಸ್ಪಂದಿಸುತ್ತಿದೆ. ಅಲ್ಲದೇ ವಿಶ್ವಾದ್ಯಂತ ಬಹುತೇಕ ದೇಶಗಳಲ್ಲಿ ಆಶಕ್ತರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ರೋಟರಿ ಕ್ಲಬ್ ಕಾರ್ಯದರ್ಶಿ ಎನ್.ಪಿ.ಲಿಖಿತ್ ಮಾತನಾಡಿ 1958 ರಲ್ಲಿ ಜಿಲ್ಲೆಯಲ್ಲಿ ಪ್ರಾರಂಭಗೊಂಡ ಸಂಸ್ಥೆ ಜನಸ್ನೇಹಿಯಾಗಿ ದುಡಿಯುತ್ತಿದೆ. ಜೊತೆಗೆ ತಾಲ್ಲೂಕಿನ ಹಂಪಾಪುರ ಶಾಲೆಗೆ 600 ಶೆಟ್ವರ್, ಬೊ ಗಸೆ ಶಾಲೆಗೆ ಕ್ರೀಡಾಸಾಮಾಗ್ರಿ, ಪಾದರಕ್ಷೆ ಒದಗಿಸಿದೆ. ಮುಂದೆ ೫೦ಕ್ಕೂ ಹಸಿರು ಬೋರ್ಡ್ಗಳನ್ನು ಶಾಲೆ ಗಳಿಗೆ ವಿತರಿಸುವ ಗುರಿಯಿದೆ ಎಂದರು.
ಅಂಧಮಕ್ಕಳ ಶಾಲೆಯ ಮುಖ್ಯೋಪಾಧ್ಯಾಯ ಲಕ್ಷ್ಮಣಗೌಡ ಮಾತನಾಡಿ ಆಶಾಕಿರಣ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಈ ನಡುವೆ ಮಧ್ಯಾಹ್ನ ಊಟ ಹಾಗೂ ಇತರೆ ಸೌಲಭ್ಯಗಳಿಗೆ ಸರ್ಕಾರದ ಹೆಚ್ಚಿನ ಬೆಂಬಲದ ಅಗತ್ಯವನ್ನು ಪೂರೈಸಿದರೆ ಮಕ್ಕಳಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದರು.
ಕಾರ್ಯಕ್ರಮದ ಬಳಿಕ ಶಾಲೆಯ ಸಭಾಂಗಣದಲ್ಲಿ ಕೇಕ್ ಕತ್ತರಿಸಿ ವಿಶ್ವ ರೋಟರಿ ದಿನವನ್ನು ಆಚರಿಸಿದರು. ಬಳಿಕ ಮಕ್ಕಳಿಗೆ ಸಿಹಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಸಿಬ್ಬಂದಿಗಳು, ವಿಶೇಷಚೇತನ ಮಕ್ಕಳು ಉಪಸ್ಥಿತರಿದ್ದರು.
- ಸುರೇಶ್ ಎನ್.