ಚಿಕ್ಕಮಗಳೂರು- ಕನ್ನಡಿನ-ಮೇಲೆ-ಹಲ್ಲೆಗೆ-ಮುಂದಾದ-ಪುಂಡರ- ವಿರುದ್ಧ ಕ್ರಮಕ್ಕೆ ಮನವಿ


ಚಿಕ್ಕಮಗಳೂರು
– ಬೆಳಗಾವಿ ಬಸ್ ನಿರ್ವಾಹಕರ ಮೇಲೆ ಮರಾಠಿ ಪುಂಡರು ಹಲ್ಲೆ ನಡೆಸಿದ್ದು ಕೂಡಲೇ ಆರೋಪಿತರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಜಿಲ್ಲಾ ಡಾ|| ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.


ಈ ಕುರಿತು ಮಾತನಾಡಿದ ಸಂಘದ ಅಧ್ಯಕ್ಷ ಐ.ಕೆ.ಓಂಕಾರೇಗೌಡ ಬಸ್ ನಿರ್ವಾಹಕರ ಮಹಾದೇವ ಎಂಬುವವರ ಮೇಲೆ ಅಮಾನವೀಯವಾಗಿ ಹಲ್ಲೆಗೆ ನಡೆಸಿ ಪುಂಡಾಟ ಮೆರೆಯುತ್ತಿರುವ ಮರಾಠಿ ಪುಂಡರ ನ್ನು ಶೀಘ್ರವೇ ಪತ್ತೆಹಚ್ಚಿ ಜೈಲಿಗಟ್ಟುವ ಕೆಲಸವನ್ನು ರಾಜ್ಯಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.


ಕನ್ನಡಿಗರು ಶಾಂತಿ ಪ್ರಿಯರು, ಸ್ವಾಭಿಮಾನ ಬಿಟ್ಟು ಎಂದಿಗೂ ಸಾಗುವುದಿಲ್ಲ. ಹೀಗಾಗಿ ಮಹಾದೇವ ಎಂಬುವವರಿಗೆ ನೀಡಿರುವ ದೈಹಿಕ ಹಿಂಸೆ ವಿಚಾರದಲ್ಲಿ ಮರಾಠಿ ಪುಂಡರಿಂದಲೇ ಪರಿಹಾರವನ್ನು ಒದಗಿಸಿ ಕೊಡುವ ಮೂಲಕ ಕಾನೂನು ರೀತಿಯ ಕ್ರಮವನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.


ಬೆಳಗಾವಿಯ ಗಡಿ ಭಾಗದಲ್ಲಿ ಕನ್ನಡಿಗರ ಮೇಲೆ ಹಲ್ಲೆ ಪ್ರಕರಣಗಳು ಅನೇಕ ಭಾರಿ ನಡೆದಿವೆ. ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳದಿದ್ದಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ರಾಜ್ಯಸರ್ಕಾರ ರಾಜ್ಯದ ಗಡಿ ಭಾಗಗಳಲ್ಲಿ ಕನ್ನಡಿಗರ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಹೆಚ್ಚು ಕ್ರಮವಹಿಸಬೇಕು ಎಂದರು.


ಗಡಿಭಾಗದ ಜಿಲ್ಲೆಗಳಲ್ಲಿ ನೆಲ, ಜಲ, ಭಾಷೆಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ತೊಂದರೆ ನೀಡಲಾಗುತ್ತಿದೆ. ಒಂದಿಲ್ಲೊAದು ಪ್ರಕರಣಗಳು ದಾಖಲಾಗಿ ಕರ್ನಾಟಕ ಪ್ರಜೆಗಳನ್ನು ಅವಮಾನಿಸುವ ಕಾರ್ಯವಾಗುತ್ತಿದೆ. ಆ ನಿಟ್ಟಿನಲ್ಲಿ ರಾಜ್ಯಸರ್ಕಾರ ದಿಟ್ಟ ನಿರ್ಧಾರ ಕೈಗೊಳ್ಳಬೇಕು. ಶಾಶ್ವತವಾಗಿ ಗಡಿಸಮಸ್ಯೆ ಬಗೆಹರಿಸಲು ಮುಂ ದಾಗದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.


ಈ ಸಂದರ್ಭದಲ್ಲಿ ಸಂಘದ ಗೌರವ ಅಧ್ಯಕ್ಷ ಬಿ.ಎಂ.ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಜಿ.ಬಸ ವರಾಜ್, ಕಾರ್ಯದರ್ಶಿಗಳಾದ ಮಧು, ಜಯವರ್ಧನ್, ಮುಖಂಡರುಗಳಾದ ಮುಳ್ಳೇಗೌಡ, ಪರಮೇಶ್ವ ರ್ ಮತ್ತಿತರರು ಹಾಜರಿದ್ದರು.

  • ಸುರೇಶ್‌ ಎನ್‌

Leave a Reply

Your email address will not be published. Required fields are marked *

× How can I help you?