ಚಿಕ್ಕಮಗಳೂರು:- ತಾಲ್ಲೂಕಿನ ಹಿರೇಕೊಳಲೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸ್ಮಾರ್ಟ್ಕ್ಲಾಸ್ ನಡೆಸಲು ಅನುಕೂಲವಾಗಲು ರೋಟರಿ ಕಾಫಿಲ್ಯಾಂಡ್‌ನಿಂದ 43 ಇಂಚಿ ನ ಟಿವಿ ಹಾಗೂ ಅನ್ನಪೂರ್ಣ ವೃದ್ದಾಶ್ರಮಕ್ಕೆ ಎರಡು ಆಮ್ಲಜನಕದ ವೆಂಟಿಲೇಟರ್‌ನ್ನು ಈಚೆಗೆ ಉಚಿತವಾಗಿ ಕೊಡುಗೆ ನೀಡಲಾಯಿತು.
ಈ ವೇಳೆ ಮಾತನಾಡಿದ ರೋಟರಿ ಕಾಫಿಲ್ಯಾಂಡ್ ಅಧ್ಯಕ್ಷ ತನೋಜ್‌ನಾಯ್ಡು ಗ್ರಾಮೀಣ ಶಾಲೆಯ ಮಕ್ಕಳು ಸ್ಮಾರ್ಟ್ಕ್ಲಾಸ್‌ಗಳಿಂದ ಹಿಂದುಳಿಯಬಾರದೆಂಬ ದೃಷ್ಟಿಯಿಂದ ಟಿವಿ ಕೊಡುಗೆ ನೀಡಿ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಟ್ಟಿದೆ. ಇದರಿಂದ ಮಕ್ಕಳ ಭವಿಷ್ಯಕ್ಕೆ ಉತ್ತಮವಾಗಲಿದೆ ಎಂದು ತಿಳಿಸಿದರು.
ವೃದ್ದಾಶ್ರಮಗಳ ವೃದ್ದರಿಗೆ ಅಸ್ತಮಾ ಸೇರಿದಂತೆ ಇನ್ನಿತರೆ ಆರೋಗ್ಯ ಸಮಸ್ಯೆಯಿಂದ ಉಸಿರಾಟಕ್ಕೆ ತೊ ಂದರೆಯಾಗದಿರಲು ಆಮ್ಲಜನಕ ವೆಂಟಿಲೇಟರ್ ನೀಡಿದ್ದು ತುರ್ತು ಪರಿಸ್ಥಿತಿಯಲ್ಲಿ ಬಹಳಷ್ಟು ಉಪಯೋ ಗವಾಗಲಿದ್ದು ಪ್ರಾಣವನ್ನು ಉಳಿಸುವ ಕಾರ್ಯ ಮಾಡಲಿದೆ ಎಂದರು.
ಈಗಾಗಲೇ ರೋಟರಿ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾ ಜ ಸೇವೆಯಲ್ಲಿ ಮುಂದಾಗಿದೆ. ಜೊತೆಗೆ ಸಂಕಷ್ಟದಲ್ಲಿ ಸಿಲುಕಿರುವ ಕುಟುಂಬಕ್ಕೂ ಆಸರೆಯಾಗಿ ಜನಪರ ವಾ ಗಿ ಕಾರ್ಯದಲ್ಲಿ ನಿರತವಾಗಿದೆ ಎಂದರು.

ಈ ಸಂದರ್ಭದಲ್ಲಿ ರೋಟರಿ ಕಾಫಿಲ್ಯಾಂಡ್‌ನ ಸದಸ್ಯರಾದ ನಾಗೇಶ್‌ಕೆಂಜಿಗೆ, ಗುರುಮೂರ್ತಿ, ಶಾಂತ ರಾಮ್‌ಶೆಟ್ಟಿ, ಸೂರಜ್, ಆನಂದ್, ನಾಸೀರ್ ಹುಸೈನ್ ಮತ್ತು ಶಾಲಾ ಆಡಳಿತ ಮಂಡಳಿ ಉಪಸ್ಥಿತರಿದ್ದರು.
– ಸುರೇಶ್ ಎನ್.