ಚಿಕ್ಕಮಗಳೂರು : ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಸಂದರ್ಭ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣ್ಣದ ಉದ್ಯಮಿ ಬಿ.ಎಸ್. ಸಂತೋಷ್ ಎಂಬುವವರು ತಾವು ಕಲಿತ ಸರ್ಕಾರಿ ಶಾಲೆಗೆ 2 ಕೋಟಿ 50 ಲಕ್ಷ ರೂ. ದೇಣಿಗೆ ನೀಡಿ ಶಾಲೆಯನ್ನು ಅಭಿವೃದ್ದಿ ಪಡಿಸಿದ್ದು ಇದರ ಜೊತೆಗೆ ತಮ್ಮ ಪುತ್ರನನ್ನು ಅದೇ ಶಾಲೆಗೆ ವಿದ್ಯಾಭ್ಯಾಸಕ್ಕಾಗಿ ಸೇರಿಸಿ ಮಾದರಿಯಾಗಿದ್ದಾರೆ.
ಮೂಡಿಗೆರೆಯ ಮುದ್ರೆಮನೆ ಕಾಫಿ ಕ್ಯೂರಿಂಗ್ ಮಾಲಿಕರಾಗಿರುವ ಸಂತೊಷ್ ಅವರು ತಾವು ಕಲಿತ ಮೂಡಿಗೆರೆ ತಾಲೂಕಿನ ಮುತ್ತಿಗೆಪುರ ಗ್ರಾಮದ ಸರ್ಕಾರಿ ಶಾಲೆಗೆ ದೇಣಿಗೆ ನೀಡಿದ್ದಾರೆ. ಕೇವಲ 3 ಕೊಠಡಿಗಳಿದ್ದ ಈ ಶಾಲೆಗೆ ದೇಣಿಗೆ ನೀಡಿ 8 ಕೊಠಡಿಗಳನ್ನು ನಿರ್ಮಿಸಿದ್ದು ಇದರ ಜೊತೆಗೆ ಶಾಲೆಗೆ ತೆರಳುವ ರಸ್ತೆ ಅಭಿವೃದ್ದಿಗೆ 18 ಲಕ್ಷ ರೂ ನೀಡಿದ್ದಾರೆ.
ಇವರ ಜೊತೆಗೆ ಗ್ರಾಮಸ್ಥರು ಕೂಡ ಹಣದ ಸಹಾಯ ಮಾಡಿದ್ದು ಈಗ ಮೂರು ಅಂತಸ್ಥಿನ 8 ಕೋಠಡಿಗಳ ಸುಸರ್ಜಿತ ಶಾಲಾ ಕಟ್ಟಡ, ರಸ್ತೆ, ಶೌಚಾಲಯ, ವಿಧ್ಯುತ್ ಸೇರಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಮಾಡಲಾಗಿದೆ. ಈ ಬಗ್ಗೆ ಆಕಾಶವಾಣಿಯೊಂದಿಗೆ ಮಾತನಾಡಿದ, ಶಾಲ ಮುಖ್ಯ ಶಿಕ್ಷಕಿ ಶ್ರೀಮತಿ ಭಾರತಿ ಅವರು ಹೆಚ್ಚಿನ ಮಾಹಿತಿ ನೀಡಿದ್ದಾರೆ.
ಇನ್ನು ಈ ಮೊದಲು 6೦ ಮಕ್ಕಳಿದ್ದ ಈ ಶಾಲೆಯಲ್ಲಿ ಈಗ 363 ಮಕ್ಕಳು ಸೇರ್ಪಡೆಯಾಗಿದ್ದಾರೆ.