ಚಿಕ್ಕಮಗಳೂರು-ಸವಿತಾ-ಸಮಾಜದಿಂದ-ಏ.15 ಕ್ಕೆ ಶ್ರೀರಾಮ- ನವಮಿ-ಹಾಗೂ-ಹನುಮ ಜಯಂತಿ

ಚಿಕ್ಕಮಗಳೂರು-ಜಿಲ್ಲಾ ಸವಿತಾ ಸಮಾಜ ಚಿಕ್ಕಮಗಳೂರು (ರಿ.) ಹಾಗೂ ತಾಲೂಕು ಸವಿತಾ ಸಮಾಜ ಚಿಕ್ಕಮಗಳೂರು (ರಿ,) ಘಟಕದ ವತಿಯಿಂದ ಏ.5ರಂದು ಹಮ್ಮಿಕೊಂಡಿರುವ ಶ್ರೀರಾಮ ನವಮಿ ಹಾಗೂ ಹನುಮ ಜಯಂತಿ ಆಹ್ವಾನ ಪತ್ರಿಕೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ವಿಕ್ರಮ್ ಅಮಟೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಅಹ್ವಾನ ಪತ್ರಿಕೆ ಬಿಡುಗಡೆಗೂ ಮುನ್ನ ಎಂ.ಜಿ ರಸ್ತೆಯಲ್ಲಿರುವ ಶ್ರಿ ಗಣಪತಿ ದೇವಸ್ಥಾನದಲ್ಲಿ ಜಿಲ್ಲಾ ಸವಿತಾ ಸಮಾಜ ಚಿಕ್ಕಮಗಳೂರು ಹಾಗೂ ತಾಲೂಕು ಸವಿತಾ ಸಮಾಜ ಚಿಕ್ಕಮಗಳೂರು ಸಂಘದ ಸಭಾ ನಡುವಳಿ ಪುಸ್ತಕ, ಲೆಕ್ಕ ಪತ್ರ ಪುಸ್ತಕ ಸೇರಿದಂತೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಇಟ್ಟು ಮುಂದಿನ ಎಲ್ಲಾ ಕಾರ್ಯಗಳು ನಿರ್ವಿಘ್ನವಾಗಿ ನೆರವೇರಲೆಂದು ಸಂಘದ ಎಲ್ಲಾ ಪದಾಧಿಕಾರಿಗಳೂ ಪ್ರಾರ್ಥನೆ ಮಾಡಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಸವಿತಾ ಸಮಾಜ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಹಾಗೂ ಪತ್ರಕರ್ತರಾದ ವಿಶ್ವನಾಥ ಸಂಕಲ್ಪ ರಾಮರಾಜ್ಯ ಪರಿಕಲ್ಪನೆಯನ್ನು ಇಡಿ ಜಗತ್ತಿಗೆ ಆದರ್ಶವನ್ನಾಗಿ ನೀಡಿದ ಮರ್ಯಾದ ಪುರುಷೋತ್ತಮ ಶ್ರೀರಾಮ ಜಯಂತಿ, ಭಕ್ತನ, ಸೇವಕನಾಗಿ ಚಿರಂಜೀವಿಯಾಗಿರುವ ಹನುಮ ಜಯಂತಿ ಒಂದು ದಿನಕ್ಕೆ ಸೀಮಿತವಲ್ಲ. ಸಮಾಜಕ್ಕೆ ಆದರ್ಶರಾದ ಮಹನೀಯರ ಜಯಂತಿ ಮಾಸಾಚರಣೆಯಾಗಬೇಕು ಎನ್ನುವ ಉದ್ದೇಶದಿಂದ ಏ.15 ರಂದು ಮಂಗಳವಾರ ಬೆಳಗ್ಗೆ 11 ಗಂಟೆಗೆ ಅಜಾದ್ ಪಾರ್ಕ್ ವೃತ್ತದಲ್ಲಿ ಸಾರ್ವಜನಿಕವಾಗಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.


ನಂತರ ಮಾತನಾಡಿದ ತಾಲೂಕು ಸವಿತಾ ಸಮಾಜ ಮಹಿಳಾ ಘಟಕದ ಸಂಚಾಲಕರಾದ ಮಂಜುಳಾ ಎಸ್. ಹೆಚ್ ರವರು ಏ.15 ರ ಮಂಗಳವಾರದಂದು ಶ್ರೀರಾಮ ನವಮಿ ಹಾಗೂ ಹನುಮ ಜಯಂತಿಯನ್ನು ನಗರದ ಅಜಾದ್ ಪಾರ್ಕ್ ವೃತದಲ್ಲಿ ಬೆಳಗ್ಗೆ 11 ಗಂಟೆಗೆ ಹಮ್ಮಿಕೊಂಡಿದ್ದು , ಅಂದು ಪೂಜೆ ಮತ್ತು ಸಾರ್ವಜನಿಕ ಪ್ರಸಾದ ವಿನಿಯೋಗವಿರುತ್ತದೆ. ಈ ಕಾರ್ಯಕ್ರಮಕ್ಕೆ ಬಂಧುಗಳು ಕುಟುಂಬ ಸಮೇತರಾಗಿ ಆಗಮಿಸಬೇಕೆಂದು ಆಮಂತ್ರಿಸಿದರು.

ಈ ವೇಳೆ ತಾಲೂಕು ಸವಿತಾ ಸಮಾಜ ಚಿಕ್ಕಮಗಳೂರು ಸಂಘದ ತಾಲೂಕು ಗೌರವಾಧ್ಯಕ್ಷ ಆಲೂರು ಎನ್ ಸತೀಶ್, ತಾಲೂಕು ಗೌರವ ಸಲಹೆಗಾರದ ಶ್ರೀನಿವಾಸ್, ತಾಲೂಕಾಧ್ಯಕ್ಷ ಜೆ ಸತ್ಯನಾರಾಯಣ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಎಸ್ ಎಂ, ಉಪಾಧ್ಯಕ್ಷ ಮಾಧವ ಸಿ, ವಿಜಯ್ ಕುಮಾರ್ ಟಿಪಿ, ಸಹ ಕಾರ್ಯದರ್ಶಿ ಸುಜಿತ್, ಶಬರಿಶ್, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀ ಲಕ್ಷ್ಮಿ ಹೆಚ್.ಎಸ್, ಸಚಿನ್ ಎ. ಆರ್, ಯಶವಂತ್ ಟಿ, ಸಾಯಿ ಚರಣ್ ಮುಂತಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

× How can I help you?