ಚಿಕ್ಕಮಗಳೂರು:– ತಾಲ್ಲೂಕಿನ ಸಿಂದಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಲತಾ ನಟೇಶ್ ಅವರು ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನಕ್ಕೆ ಬರ‍್ಯಾವ ಅಭ್ಯರ್ಥಿ ಉಮೇದುವಾರಿಕೆ ಸಲ್ಲಿಕೆಯಾಗದ ಹಿನ್ನೆಲೆ ಚುನಾವಣಾಧಿಕಾರಿ ಸಿ.ಸುಜಾತ ಘೋಷಿಸಿದರು.
ಅಭಿನಂದನೆ ಸಲ್ಲಿಸಿ ಮಾತನಾಡಿದ ಬಗರ್‌ಹುಕುಂ ಕಮಿಟಿ ಸದಸ್ಯ ಕೆಂಗೇಗೌಡ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಪ್ರತಿ ಗ್ರಾಮಗಳನ್ನು ಪರಿಗಣನೆಗೆ ತೆಗೆದುಕೊಂಡು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ನಂಬಿಕೆಯಿದ್ದು ಸರ್ಕಾರದ ಸವಲತ್ತನ್ನು ಚಾಚುತಪ್ಪದೇ ಒದಗಿಸಿಕೊಡಬೇಕು ಎಂದು ಹೇಳಿದರು.
ಗ್ರಾ.ಪಂ. ಕೊನೆಯ ಅಧ್ಯಕ್ಷ ಅವಧಿಯಲ್ಲಿ ಅಧಿಕಾರ ಹಿಡಿದ ಪಕ್ಷ ಮತ್ತು ಅಭ್ಯರ್ಥಿ ಮುಂದಿನ ಚುನಾ ವಣೆಗೆ ದಿಕ್ಸೂಚಿಯಾಗಲಿದ್ದಾರೆ ಜೊತೆಗೆ ಪಂಚಾಯಿತಿಯಲ್ಲಿ ಕಾಂಗ್ರೆಸ್ ಎಂಟು ಸದಸ್ಯರಿದ್ದು, ಬರುವಂಥ ಚುನಾವಣೆಗೆ ಇದೇ ಮಾದರಿ ಹೆಚ್ಚು ಸ್ಥಾನ ಗಳಿಸುವಂತಾಗಲೀ ಎಂದು ಶುಭ ಕೋರಿದರು.

ನೂತನ ಅಧ್ಯಕ್ಷೆ ಲತಾ ನಟೇಶ್ ಮಾತನಾಡಿ ಅಧ್ಯಕ್ಷ ಸ್ಥಾನ ಎಂದರೆ ಕೇವಲ ಅಧಿಕಾರವಲ್ಲ. ಜವಾಬ್ದಾ ರಿ ಮತ್ತು ಜನಸೇವೆಗೆ ಮುಡಿಪಿಟ್ಟ ಕಾಯಕ. ಹಣದಿಂದ ಅಧಿಕಾರ ಸಿಗಲಿದೆ ಎಂಬುದನ್ನು ಹುಸಿಗೊಳಿಸಿದ ಸಿಂದಿಗೆರೆ ಗ್ರಾಮಸ್ಥರು, ಜನಬೆಂಬಲದಿಂದ ಅಧಿಕಾರವಿದೆ ಎಂಬುದು ಎತ್ತಿಹಿಡಿಯುವ ಕೆಲಸ ಮಾಡಿರುವು ದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಲಕ್ಷ್ಮಿ ಭೈರಯ್ಯ, ಸದಸ್ಯರಾದ ಸಣ್ಣಮ್ಮ ಪುಟ್ಟೇಗೌಡ, ಹೇಮಾ ವತಿ ಚನ್ನಯ್ಯ, ಶಿವಮ್ಮ ಮಾರ್ಗಾಬೋವಿ, ಜಯದೇವಪ್ಪ, ಶಕುಂತರಾಜ್, ರವೀಶ್, ಎಸ್.ಎ.ರಘು, ಪಿಡಿಓ ಧರ್ಮಪ್ಪ, ಬೆಳವಾಡಿ ಗ್ರಾ.ಪಂ. ಅಧ್ಯಕ್ಷೆ ಸಿರಾಜ್ ಉನ್ನಿಸಾ, ಕಾಂಗ್ರೆಸ್ ಕಿಸಾಲ್ ಜಿಲ್ಲಾ ಉಪಾಧ್ಯಕ್ಷ ಅಮೀ ರ್ ಜಾನ್, ಮುಖಂಡರುಗಳಾದ ಷಡಕ್ಷರಿ, ಶಿವಕುಮಾರ್, ರಾಜಣ್ಣ, ಹೊನ್ನಬೋವಿ ಮತ್ತಿತರರಿದ್ದರು.
- ಸುರೇಶ್ ಎನ್.