ಚಿಕ್ಕಮಗಳೂರು:- ಸಮಾಜ ಸುಧಾರಕ ಬಸವಣ್ಣ ಸಮಾನತೆಯನ್ನು ಬೋಧಿಸಿದರು. ದೇಶದ ದೃಷ್ಟಿಕೋನ ಮತ್ತು ಚಿಂತನೆಗಳನ್ನು ಹೊಂದಿದ್ದ ಬಸವಣ್ಣ ಮತ್ತು ಅವರ ಬೋಧನೆಗಳು ಇತಿಹಾಸದ ಭಾಗವಾಗಿದೆ ಎಂದು ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಹೇಳಿದರು.
ನಗರದ ಜಿಲ್ಲಾ ಬಹುಜನ ಸಮಾಜ ಪಾರ್ಟಿ ಕಚೇರಿಯಲ್ಲಿ ಆಯೋಜಿಸಿದ್ಧ 892ನೇ ಕ್ರಾಂತಿಕಾರಿ ಬಸವಣ್ಣ ಜಯಂತಿ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ಬಸವಣ್ಣನವರ ತತ್ವ ಮತ್ತು ಸಂದೇಶಗಳನ್ನು ಸಮಾಜಕ್ಕೆ ಸೂಕ್ತವಾಗಿ ತಲುಪಿಸುವುದಕ್ಕೆ ಜಯಂತಿ ಪೂರಕವಾಗುತ್ತದೆ. ಸರ್ವರು ಸಮಾನರೆಂಬ ಸಿದ್ದಾಂತದಡಿ ಬದುಕಿದ ಅಪರೂಪದ ವ್ಯಕ್ತಿ. ಬಡವರು, ಶೋಷಿತರು ಮತ್ತು ದೀನದಲಿತರು ಸಮಾಜದ ಮುಂಚೂಣಿಗೆ ತರುವಲ್ಲಿ ನಿರಂತರವಾಗಿ ಶ್ರಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಬಸವಣ್ಣನವರ ತತ್ವಗಳನ್ನು ನಾವೆಲ್ಲರೂ ಆಚರಣೆ ಮಾಡಬೇಕು, ಬಸವ ತತ್ವಗಳನ್ನು ಯಾರು ಬದುಕಿನಲ್ಲಿ ಆಚರಣೆ ಮಾಡುತ್ತಾರೋ ಅಂತಹವ ಮನೆಯಲ್ಲಿ ಶಾಂತಿ ನೆಮ್ಮದಿ ಇರುತ್ತದೆ. ಎಲ್ಲರನ್ನೂ ಪ್ರೀತಿ ಮಾಡುವಂತಹ ವಿಶ್ವಕುಟುಂಬ ಭಾವನೆಯನ್ನು ಬಸವಣ್ಣನವರು ಬಿತ್ತಿದ್ದು ಎಲ್ಲ ವರ್ಗದವರಿಗೂ ಸಮಾನತೆಯ ಬದುಕನ್ನು ನೀಡಿದವರು ಎಂದರು.
ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ ಮಾತನಾಡಿ 12ನೇ ಶತಮಾನದ ತಾರತಮ್ಯದಿಂದ ಕೂಡಿ ತ್ತು. ಶೋಷಿತರು, ದೀನದಲಿತರು ಹಾಗೂ ಮಹಿಳೆಯರು ಅಭಿವ್ಯಕ್ತಿ ಸ್ವಾತಂತ್ರ‍್ಯವಿಲ್ಲದೆ ದನಿ ಕಳೆದುಕೊಂಡಿದ್ದರು. ಆ ವೇಳೆ ಬಸವಣ್ಣನವರು ಅನುಭವ ಮಂಟಪದ ಮೂಲಕ ಸಮಾಜದ ಕಟ್ಟಕಡೆಯವರನ್ನು ಒಂ ದೆಡೆ ಕಲೆಹಾಕಿ ತಮ್ಮ ಸರಳ ವಚನ ಸಾಹಿತ್ಯದ ಮೂಲಕ ಎಲ್ಲರನ್ನು ಜಾಗೃತಗೊಳಿಸಿದರು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಎಸ್ಪಿ ತಾಲ್ಲೂಕು ಅಧ್ಯಕ್ಷ ಹೆಚ್.ಕುಮಾರ್, ಯಾವುದೇ ಕೆಲಸದಲ್ಲಿ ಮೇಲು–ಕೀಳಿಲ್ಲ ಎಂದು ಸಾರಿದ ಬಸವಣ್ಣ ಅವರು ಸಾಮಾಜಿಕ ಕ್ರಾಂತಿಯ ಹರಿಕಾರರು. ವಿದ್ಯೆಯಿಂದ ವಂಚಿರಾದವರಿಗೆ, ಮಹಿಳೆಯರಿಗೆ ಶಿಕ್ಷಣ ಹಾಗೂ ಅಭಿಪ್ರಾಯ ವ್ಯಕ್ತಪಡಿಸಲು ಮುಕ್ತ ಅವ ಕಾಶ ಮಾಡಿಕೊಟ್ಟು ಸಾಮಾಜಿಕ ಬದಲಾವಣೆಗೆ ಕಾರಣರಾದರು ಎಂದರು.
ಈ ಸಂದರ್ಭದಲ್ಲಿ ಬಿಎಸ್ಪಿ ಜಿಲ್ಲಾಧ್ಯಕ್ಷ ಪಿ.ಪರಮೇಶ್, ಖಜಾಂಚಿ ವಾಹಿದ್ ಜಾನ್, ಉಪಾಧ್ಯಕ್ಷೆ ಕೆ. ಎಸ್.ಮಂಜುಳಾ, ಅಸ್ಸೆಂಗ್ಲಿ ಉಪಾಧ್ಯಕ್ಷ ಹೊನ್ನಪ್ಪ, ಖಜಾಂಚಿ ಟಿ.ಹೆಚ್.ರತ್ನ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಯೋಜಕ ಕೆ.ಆರ್.ಗಂಗಾಧರ್, ಹಿರಿಯ ಮುಖಂಡರು ಗಿರೀಶ್, ಲತಾ, ಮಾರ್ಥ, ಮಂಜುಳಾ, ಕುಮಾರ್, ಮಲ್ಲೇಶ್, ಸವಿತಾ ಉಪಸ್ಥಿತರಿದ್ದರು.
– ಸುರೇಶ್ ಎನ್.