ಚಿಕ್ಕಮಗಳೂರು:– ಸಾವು-ಬದುಕಿನ ಮಧ್ಯೆ ಹೋರಾಡುವ ರೋಗಿಗಳನ್ನು ಗುಣಮುಖ ವಾಗಿಸಲು ಪ್ರಾಣದ ಹಂಗು ತೊರೆದು ಕಾರ್ಯನಿರ್ವಹಿಸುವ ಶುಶ್ರೂಷಕಿಯರು ಸೇವೆ ಅಮೂಲ್ಯವಾದದು ಎಂದು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮೊಹಮ್ಮದ್ ನಯಾಜ್ ಹೇಳಿದರು.
ನಗರದ ಪಾರ್ವತಿಪುರ ಸಮೀಪ ಆಶ್ರಯ ನರ್ಸಿಂಗ್ ಕಾಲೇಜು ಮತ್ತು ಇನ್ಸಿಟ್ಯೂಟ್ ಆಫ್ ನರ್ಸಿಂ ಗ್ ಸೈನ್ಸ್ ವತಿಯಿಂದ ಶನಿವಾರ ಏರ್ಪಡಿಸಿದ್ಧ ಎರಡನೇ ಬ್ಯಾಚ್ ಬಿಎಸ್ಸಿ ಮತ್ತು ಇಪ್ಪತ್ತನೇ ಬ್ಯಾಚ್‌ನ ಜಿಎನ್‌ಎಂ ನರ್ಸಿಂಗ್‌ನ ವಿದ್ಯಾರ್ಥಿಗಳ ಪ್ರಮಾಣವಚನ ಸ್ವೀಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕೋವಿಡ್ ಸಮಯದಲ್ಲಿ ಸ್ವಂತದವರೇ ರೋಗಿಗಳನ್ನು ಮುಟ್ಟದಿರುವ ಪರಿಸ್ಥಿತಿಯಲ್ಲಿ ದಾದಿಯರು ಭಯಭೀತರಾಗದೇ ರೋಗಿಯ ಗುಣಮುಖಕ್ಕೆ ಪಣತೊಟ್ಟು ನಿಂತು ಕಾರ್ಯನಿರ್ವಹಿಸಿದ್ದಾರೆ. ಹೀಗಾಗಿ ನರ್ಸಿಂಗ್ ವೃತ್ತಿಯಲ್ಲಿ ಕೆಲಸವು ಸಮಾಜದ ಒಳಿತು ಹಾಗೂ ಕುಟುಂಬದ ಆರೋಗ್ಯವನ್ನು ಕಾಪಾಡುವ ಶಕ್ತಿ ಯನ್ನು ಹೊಂದಿದೆ ಎಂದರು.

ನರ್ಸಿಂಗ್ ಕಲಿಕೆಯಲ್ಲಿ ವಿದ್ಯಾರ್ಥಿಗಳು ಎಲ್ಲರಂತಿರಬಾರದು, ಕನಿಷ್ಟ ನೂರರಲ್ಲಿ ಒಬ್ಬರು ವಿಶೇಷತೆ ಹೊಂದಿರಬೇಕು. ಇತ್ತೀಚೆಗೆ ವೈದ್ಯಕೀಯ ಮುಂದುವರೆದಿರುವ ಕ್ಷೇತ್ರ. ನಾನಾ ತಂತ್ರಜ್ಞಾನಗಳಲ್ಲಿ ಬೆಳವಣಿಗೆಗಳು ಹೊಂದಿವೆ. ಹೀಗಾಗಿ ಆಯಾ ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಅಳವಡಿಸಿಕೊಂಡು ಯಶಸ್ಸು ಸಾಧಿಸಬೇ ಕು ಎಂದು ಕಿವಿಮಾತು ಹೇಳಿದರು.
ಆಶ್ರಯ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ|| ಡಿ.ಎಲ್.ವಿಜಯ್‌ಕುಮಾರ್ ಮಾತನಾಡಿ ಸ್ವಂತ ಹಾಗೂ ಸಮಾಜದ ಆರೋಗ್ಯ ಕಾಪಾಡುವುದು ವೈದ್ಯಕೀಯ ಕ್ಷೇತ್ರ. ಆ ಸಾಲಿನಲ್ಲಿ ವಿದ್ಯಾರ್ಥೀಗಳು ಪಾದರ್ಪಾಣೆ ಮಾಡುತ್ತಿರುವುದಕ್ಕೆ ಹೆಮ್ಮೆಪಡಬೇಕು. ಕೇವಲ ಖಾಸಗೀತನಕ್ಕೆ ಸಂಸ್ಥೆ ಸ್ಥಾಪಿಸದೇ, ಜನತೆಗೆ ಗುಣಮಟ್ಟದ ಸೇ ವೆ ಹಾಗೂ ಜೀವ ಉಳಿಸಲು ಮುಂದಾಗುತ್ತಿವೆ ಎಂದರು.
ನರ್ಸಿಂಗ್ ವಿದ್ಯಾರ್ಥಿಗಳ ಸಮಗ್ರ ಕಲಿಕೆಗೆ ಅನುಸಾರವಾಗಿ ಪರಿಣಿತ ಉಪನ್ಯಾಸಕರು, ಪ್ರಿನ್ಸಿಪಾಲ್ ಹಾ ಗೂ ಸಕಲಸೌಲಭ್ಯಗಳನ್ನು ಪೂರೈಸಿ ಅನುಕೂಲ ಕಲ್ಪಿಸಿದೆ. ಅಲ್ಲದೇ ಆಶ್ರಯ ಇನ್ಸಿಟ್ಯೂಟ್‌ನಲ್ಲಿ ನರ್ಸಿಂಗ್ ಪೂರೈಸಿದ ಹಲವಾರು ಮಂದಿ ದೇಶ-ವಿದೇಶಗಳಲ್ಲಿ ಕೆಲಸ ನಿರ್ವಹಿಸುವ ಜೊತೆಗೆ ಬಹುಬೇಡಿಕೆಗೆ ಪಾತ್ರ ರಾಗಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಶ್ರಯ ಎಜುಕೇಷನ್ ಟ್ರಸ್ಟ್ ನಿರ್ದೇಶಕರಾದ ಡಾ|| ಶುಭ ವಿಜಯ್, ಡಾ|| ಅನಿಕೇತ್ ವಿಜ ಯ್, ಆಶ್ರಯ ನರ್ಸಿಂಗ್ ಕಾಲೇಜು ತೇಜಸ್ವಿನಿ, ಪುರುಷೋತ್ತಮ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
- ಸುರೇಶ್ ಎನ್.