ಚಿಕ್ಕಮಗಳೂರು-ದೈನಂದಿನ-ಒತ್ತಡ ಕಳೆಯಲು-ಕ್ರೀಡೆಗಳು ಸಹಕಾರಿ -ಸುವರ್ಣಗಾರರ ಕ್ಷೇಮಾಭಿವೃಧ್ದಿ-ಸಂಘದ ಅಧ್ಯಕ್ಷ-ಸುಧೀರ್‌ಶೇಟ್


ಚಿಕ್ಕಮಗಳೂರು- ದೈನಂದಿನ ಒತ್ತಡದ ನಡುವೆ ಸುವರ್ಣ ಕೆಲಸಗಾರರು ಕೆಲ ಸಮಯ ಬಿಡುವು ಮಾಡಿಕೊಂಡು ಕ್ರೀಡಾಸಕ್ತಿ ಬೆಳೆಸಿಕೊಂಡರೆ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಲು ಸಾಧ್ಯ ಎಂದು ಸುವರ್ಣಗಾರರ ಕ್ಷೇಮಾಭಿವೃಧ್ದಿ ಸಂಘದ ಅಧ್ಯಕ್ಷ ಸುಧೀರ್‌ಶೇಟ್ ಹೇಳಿದರು.


ನಗರದ ಮೌಂಟೆನ್ ವ್ಯೂ ಶಾಲಾವರಣದಲ್ಲಿ ಸುವರ್ಣಗಾರರ ಕ್ಷೇಮಾಭಿವೃದ್ದಿ ಸಂಘ ಹಾಗೂ ಚಿಕ್ಕಮ ಗಳೂರು ಚಿನ್ನಬೆಳ್ಳಿ ಕೆಲಸಗಾರರ ಸಹಯೋಗದಲ್ಲಿ ಏರ್ಪಡಿಸಿದ್ಧ ೧೨ನೇ ವರ್ಷದ ಕ್ರಿಕೇಟ್ ಪಂದ್ಯಾವಳಿಯ ಲ್ಲಿ ವಿಜೇತರಾದ ತಂಡಕ್ಕೆ ಬಹುಮಾನ ವಿತರಿಸಿ ಅವರು ಮಾತನಾಡಿ, ಚಿನ್ನಬೆಳ್ಳಿ ಕೆಲಸಗಾರರು ದರದ ಏರಿಳಿತದಿಂದ ಅನೇಕ ಒತ್ತಡಕ್ಕೆ ಒಳಗಾಗುತ್ತಿದೆ. ಈ ನಡುವೆ ಕೆಲಸಗಾ ರರು ಮಾನಸಿಕ ನೆಮ್ಮದಿ, ಶಾಂತಿ ಹದಗೆಡುವುದನ್ನು ತಪ್ಪಿಸಲು ಪಂದ್ಯಾವಳಿ ಆಯೋಜಿಸುವ ಮೂಲಕ ಮನಸ್ಸನ್ನು ಹದಗೊಳಿಸುವ ಕಾಯಕಕ್ಕೆ ಸಂಘವು ಮುಂದಾಗುತ್ತಿದೆ. ಮಾನವ ಜನಾಂಗಕ್ಕೆ ದೈಹಿಕ ವ್ಯಾಯಮವು ಕಡ್ಡಾಯವಾಗಬೇಕು. ಆಲಸ್ಯ ಅಥವಾ ಸೋಬೇರಿತನದಿಂದ ನಿರ್ಲಕ್ಷ್ಯವಹಿಸಿದರೆ ಆರೋಗ್ಯ ಕ್ಷಣಾರ್ಧದಲ್ಲಿ ಹದಗೆಡುವಲ್ಲಿ ಸಂಶಯವಿಲ್ಲ. ಹೀಗಾಗಿ ಸುವರ್ಣಗಾರರು ಪ್ರತಿದಿನವು ಕೆಲ ಸಮಯವನ್ನು ದೈಹಿಕವಾಗಿ ದಂಡಿಸಲು ಮುಡಿಪಿಟ್ಟರೆ, ಶಾರೀರಿಕವಾಗಿ ಗಟ್ಟಿಯಾಗಲು ಸಾಧ್ಯ ಎಂದರು.


ಸಂಘದ ಹಿರಿಯ ಸದಸ್ಯ ರುದ್ರಯ್ಯ ಆಚಾರ್ಯ ಮಾತನಾಡಿ ಹಿಂದಿನ ಕಾಲದಲ್ಲಿ ಮನುಷ್ಯ ಶಕ್ತಿವಂತನಾಗಲು ಗರಡಿ ಮನೆಗಳಲ್ಲಿ ವ್ಯಾಯಮವನ್ನು ಮಾಡಲಾಗುತ್ತಿತ್ತು. ಈ ದಿನದಲ್ಲಿ ಕ್ರಿಕೇಟ್, ವಾಲಿಬಾಲ್‌ನಂಥ ಅನೇಕ ಕ್ರೀಡೆಗಳಿರುವ ಕಾರಣ ಯುವಕರು ಆಸಕ್ತಿ ಹೊಂದಿರುವ ಕ್ರೀಡಾಕ್ಷೇತ್ರದಲ್ಲಿ ಭಾಗಿಯಾಗಿ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಸುವರ್ಣಗಾರರ ಹನ್ನೆರಡನೇ ವರ್ಷದ ಪಂದ್ಯಾವಳಿಯಲ್ಲಿ ಸುಮಾರು 6 ತಂಡಗಳು ಭಾಗಿಯಾಗಿದ್ದವು. ಅಂತಿಮವಾಗಿ ರಾಜರಾಜೇಶ್ವರಿ ತಂಡ ಹಾಗೂ ಬೆಂಗಾಲಿ ಬಾಯ್ಸ್ ತಂಡ ಪಂದ್ಯಾವಳಿ ನಡೆದವು. ಐದು ಓವರ್ ಬೆಂಗಾಲಿ ಬಾಯ್ಸ್ 74 ರನ್ ಕಲೆ ಹಾಕಿದರೆ, ರಾಜರಾಜೇಶ್ವರಿ ತಂಡ ೭೫ ರನ್ನು ದಾಖಲಿಸುವ ಮೂಲಕ ವಿಜಯ ಪತಾಕಿ ಹಾರಿಸಿದ ತಂಡಕ್ಕೆ ಪಾರಿತೋಷಕ ಹಾಗೂ ನಗದು ಬಹುಮಾನ ವಿತರಿಸಲಾಯಿತು.


ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಶ್ರೀಕಾಂತ್‌ಶೇಟ್, ಸದಸ್ಯರುಗಳಾದ ರಘು ಕೆ.ಆಚರ್ಯ, ರಾಘವೇಂದ್ರ, ಸುದೀಪ್ ಆಚಾರ್ಯ, ಸೋಮಶೇಖರ್, ಮಾರುತಿ ಪಾಟೀಲ್, ಉಮೇಶ್ ಆಚಾರ್ಯ, ವೆಂಕಟೇಶ್ ಶೇಟ್, ಆಯೋಜಕರಾದ ಕಲ್ಲೇಶ್ ಆಚಾರ್ಯ ಮತ್ತಿತರರಿದ್ದರು.

ಸುರೇಶ್ ಎನ್ , ಚಿಕ್ಕಮಗಳೂರು

Leave a Reply

Your email address will not be published. Required fields are marked *

× How can I help you?