ಚಿಕ್ಕಮಗಳೂರು: ಕ್ರೀಡಾಸಕ್ತಿ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುವ ಸಾಧನ. ವೈದ್ಯರು ಮತ್ತು ಸಿಬ್ಬಂದಿಗಳು ಕೆಲ ಸಮಯವನ್ನು ಕ್ರೀಡೆಗೆ ಮುಡಿಪಿಟ್ಟು ಶಾರೀರಿಕವಾಗಿ ಗಟ್ಟಿಯಾ ಗಬೇಕು ಎಂದು ಸ್ಪರ್ಶ ಆಸ್ಪತ್ರೆ ವೈದ್ಯ ಡಾ.ಚಂದ್ರಶೇಖರ್ ಸರ್ಜಾ ಹೇಳಿದರು.
ನಗರದ ರಾಮನಹಳ್ಳಿ ಸಮೀಪ ಪೊಲೀಸ್ ಮೈದಾನದಲ್ಲಿ ಸಾಯಿ ಅಮೃತ್ ಹೆಲ್ತ್ಕೇರ್, ಸ್ಪರ್ಶ ಆಸ್ಪತ್ರೆ ಹಾಗೂ ವಿವಿಧ ಸಂಸ್ಥೆಗಳ ಸಹಕಾರದಿಂದ ವೈದ್ಯರು, ಸಿಬ್ಬಂದಿಗಳಿಗೆ ಏರ್ಪಡಿಸಿದ್ಧ ಚಿಕ್ಕಮಗಳೂರು ಹೆಲ್ತಿ ವಾರಿರ‍್ಸ್ ಕಫ್ ಟೆನ್ನಿಸ್ ಬಾಲ್ ಕ್ರಿಕೇಟ್ ಪಂದ್ಯಾವಳಿಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಮನುಷ್ಯನ ಜೀವನವು ಸುಲಿತವಾಗಿ ಸಾಗಲು ದೈನಂದಿನ ಆರೋಗ್ಯವು ಅತಿಮುಖ್ಯ. ಕ್ರಿಕೇಟ್, ಶಟಲ್ ಕಾಕ್, ವೇಗದ ನಡಿಗೆ, ಓಟ ಸೇರಿದಂತೆ ಇನ್ನಿತರೆ ಆಸಕ್ತಿ ಹೊಂದಿರುವ ಚಟುವಟಿಕೆಗಳಲ್ಲಿ ತೊಡಗಿಸಬೇಕು. ನಿರ್ಲಕ್ಷö್ಯ ಧೋರಣೆ ತಾಳಿದರೆ ಆರೋಗ್ಯವು ಹದಗೆಡುವುದರಲ್ಲಿ ಸಂಶಯವಿಲ್ಲ ಎಂದು ತಿಳಿಸಿದರು.
ಸರ್ಕಾರಿ-ಖಾಸಗೀ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಆಯೋಜಿಸಿರುವ ಕ್ರಿಕೇಟ್ ಪಂದ್ಯಾವಳಿಯಲ್ಲಿ ಒಟ್ಟು 10 ತಂಡಗಳಿದ್ದು ೫ ಓವರ್‌ಗೆ ಸೀಮಿತಗೊಳಿಸಲಾಗಿದೆ. ಹತ್ತು ತಂಡಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಿ, ಅಂತಿಮ ಪಂದ್ಯವನ್ನು ನಡೆಸಲಾಗುತ್ತದೆ. ಅಲ್ಲದೇ ಮಹಿಳಾ ಸಿಬ್ಬಂದಿಗಳಿಗೆ ಥ್ರೋಬಾಲ್ ಪಂ ದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಸಾಯಿ ಅಮೃತ ಹೆಲ್ತ್ಕೇರ್‌ನ ಡಾ|| ನಿತಿನ್ ಬಂಕಪುರ ಮಾತನಾಡಿ ದೈನಂದಿನ ರೋಗಿಗಳ ಸೇವೆ ಯಲ್ಲಿ ತೊಡಗುವ ವೈದ್ಯರು, ಸಿಬ್ಬಂದಿಗಳನ್ನು ಮನಸ್ಸು ಉಲ್ಲಾಸಗೊಳಿಸಲು ಕ್ರೀಡಾಕೂಟ ಆಯೋಜಿಸಿದೆ ಎಂದ ಅವರು ಈ ಪಂದ್ಯಾವಳಿಯನ್ನು ಸುಮಾರು ಐದು ವರ್ಷಗಳಿಂದಲೂ ನಡೆಸಿಕೊಂಡು ಬರಲಾಗಿದೆ ಎಂದು ತಿಳಿಸಿದರು.
ಕ್ರಿಕೇಟ್ ಪಂದ್ಯಾವಳಿಯಲ್ಲಿ ಅಂತಿಮ ವಿಜೇತರಾದವರಿಗೆ ಮಾ.೨೩ ರಂದು ನಗರದಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತಿ ತಂಡವು ಅತ್ಯಂತ ಉತ್ಸಾಕರಾಗಿ ಕ್ರೀಡೆಯಲ್ಲಿ ಪಾಲ್ಗೊಳ್ಳ ಬೇಕು. ಅಪೈರ್‌ಗಳ ತೀರ್ಮಾನವನ್ನು ಗೌರವಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವೈದ್ಯರುಗಳಾದ ಡಾ|| ಕಾರ್ತೀಕ್, ಡಾ|| ವಿನಯ್ ಹಾಗೂ ವಿವಿಧ ತಂಡದ ಆಟ ಗಾರರು ಉಪಸ್ಥಿತರಿದ್ದರು.
–ಸುರೇಶ್ ಎನ್.