ಚಿಕ್ಕಮಗಳೂರು:- ತಾಲ್ಲೂಕಿನ ಖಾಂಡ್ಯ ಹೋಬಳಿ ಬೊಗಸೆ ಗ್ರಾಮದಲ್ಲಿ ಶ್ರೀ ಗುರುಪರ ದೇಶಪ್ಪನವರ ಮಠದಲ್ಲಿ ಮಂಗಳವಾರ ಅದ್ದೂರಿಯಾಗಿ ಜಾತ್ರಾ ಮಹೋತ್ಸವ ನೂರಾರು ಭಕ್ತಾಧಿಗಳ ಸಮ್ಮುಖದಲ್ಲಿ ಶ್ರದ್ದಾಭಕ್ತಿಯಿಂದ ನೆರವೇರಿತು.
ಜಾತ್ರೆಯಲ್ಲಿ ಹಲವಾರು ಗ್ರಾಮದಿಂದ ನಾಡು ಬರುವುದು ವಿಶೇಷವಾಗಿತ್ತು. ಗ್ರಾಮಸ್ಥರು ಕುಟುಂಬದವರ ಜೊತೆಗೆ ಪಾಲ್ಗೊಂಡು ರಥವನ್ನು ಎಳೆಯುವುದು, ಕೆಂಚದೇವರ ಮಣೆ ಆಡಿಸುವುದು, ಕೆಂಡ ತುಳಿದು ಆರಾಧ್ಯ ದೈವಕ್ಕೆ ವಿಶೇಷಪೂಜೆ ಸಲ್ಲಿಸಿದರು.
ಈ ಜಾತ್ರೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಗ ಶಶಿಧರ್ ಹಾಗೂ ಅವರ ತಂಡದವರು, ಕಡವಂತಿ ಗ್ರಾ.ಪಂ. ಸದಸ್ಯ ವಿನೋದ್ ಬೊಗಸೆ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.
– ಸುರೇಶ್ ಎನ್.