ಚಿಕ್ಕಮಗಳೂರು :– ತಾಲ್ಲೂಕಿನ ಮಲ್ಲಂದೂರು ಗ್ರಾಮದ ಕಡಗಲ ನಾಡು ಶ್ರೀ ಮಳ ಲೂರಮ್ಮನವರ ದೇವಿಯ ದಿವ್ಯ ರಥೋತ್ಸವ ಶನಿವಾರ ನೂರಾರು ಭಕ್ತಾಧಿಗಳು ರಥವನ್ನು ಎಳೆಯುವ ಮೂಲಕ ರಥೋತ್ಸವಕ್ಕೆ ಭಕ್ತಿಪೂರ್ವಕವಾಗಿ ಆಚರಿಸಿದರು.
ಮುಂಜಾನೆಯಿಂದ ಪ್ರಾರ್ಥನೆ, ತೀರ್ಥ ಪ್ರಸಾದ ವಿನಿಯೋಗ, ಹಣ್ಣುಕಾಯಿ ಸೇವೆ, ಮಹಾಮಂಗಳಾರತಿ ನಂತರ ಶ್ರೀದೇವಿಯನ್ನು ಭವ್ಯ ರಥದಲ್ಲಿ ಕುಳ್ಳಿರಿಸಿ ದೇಗುಲದ ಸುತ್ತಲು ಎಳೆಯಲಾಯಿತು. ರಥೋತ್ಸವ ಕ್ಕೆ ಆಗಮಿಸಿದ ಸುತ್ತಮುತ್ತಲಿನ ಗ್ರಾಮಸ್ಥರು ರಥಕ್ಕೆ ಬಾಳೆಹಣ್ಣು ತೂರಿದರು.
- ಸುರೇಶ್ ಎನ್.