ಚಿಕ್ಕಮಗಳೂರು, ಮೇ.05:- ಬಿಎಸ್‌ಎನ್‌ಎಲ್ ಟವರ್ ಸಮಸ್ಯೆಗಳು ಮಲೆನಾಡು ಭಾಗದಲ್ಲಿ ಉದ್ಬವಿ ಸಿರುವ ಹಿನ್ನೆಲೆಯಲ್ಲಿ ಶೀಘ್ರವೇ ಅಧಿಕಾರಿಗಳೊಂದಿಗೆ ಚರ್ಚಿಸಿ ಗ್ರಾಹಕರಿಗೆ ಗುಣಮಟ್ಟದ ನೆಟ್‌ವರ್ಕ್ ಪೂ ರೈಸಲು ಕ್ರಮ ವಹಿಸುತ್ತೇವೆ ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.
ಶೃಂಗೇರಿ ತಾಲ್ಲೂಕಿನ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಬಿಎಸ್‌ಎನ್‌ಎಲ್, ಜಿಟಿಓ ಅಧಿಕಾರಿಗಳು ಮತ್ತು ನಾಮನಿರ್ದೇಶಿತ ಸದಸ್ಯರೊಂದಿಗೆ ಚರ್ಚೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬಿಎಸ್‌ಎನ್‌ಎಲ್ ಸಂಬAಧಿಸಿದ ಶೃಂಗೇರಿ 15, ಕೊಪ್ಪ 28 ಮತ್ತು ನರಾಪುರದಲ್ಲಿ 14 ಟವರ್‌ಗಳಲ್ಲಿ ನೆಟ್‌ವರ್ಕ್ ಸಮಸ್ಯೆಗಳಿವೆ ಎಂಬುದು ತಿಳಿದು ಬಂದಿದ್ದು ಆಯಾ ಟವರ್‌ಗಳ ಸಮಸ್ಯೆಗಳನ್ನು ಕಂಡು ಹಿಡಿಯುವ ಮೂಲಕ ಇನ್ನೊಂದು ವಾರದೊಳಗೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಅರಣ್ಯ ಅಧಿಕಾರಿಗಳಿಂದ ಸಮಸ್ಯೆ ಆಗುತ್ತಿರುವುದನ್ನು ಗಣನೆಗೆ ತೆಗೆದುಕೊಂಡ ಸಂಸದರು, ಸ್ಥಳದಲ್ಲೇ ಅಧಿಕಾರಿಗಳಿಗೆ ಮತ್ತು ಸಚಿವರಿಗೆ ದೂರವಾಣಿ ಕರೆಮಾಡಿ ಸಮಸ್ಯೆ ಕುರಿತು ವಿವರಿಸಿ ಪರಿಹರಿಸಬೇಕು. ಈ ಭಾಗದಲ್ಲಿ ಮೆಸ್ಕಾಂ ಸಮಸ್ಯೆಯು ತೀವ್ರವಾಗಿರುವ ಕಾರಣ ಸಂಬAಧಿಸಿದ ಸಚಿವರು, ಅಧಿಕಾರಿಗಳಿಗೆ ಚರ್ಚಿ ಸಿ ನಿವಾರಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಶೃಂಗೇರಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ವೇಣುಗೋಪಾಲ್, ಬಿಜೆಪಿ ನ.ರಾ.ಪುರ ಮಂಡಲ ಅಧ್ಯಕ್ಷರಾದ ನಿಲೇಶ್, ಬಿಎಸ್‌ಎನ್‌ಎಲ್ ಎಜಿಎಂ ಗೋಪಾಲಕೃಷ್ಣ, ಜೆಟಿಒಗಳು, ಕಡವಂತಿ ಗ್ರಾ ಮ ಪಂಚಾಯಿತಿ ಸದಸ್ಯ ವಿನೋದ್ ಬೊಗಸೆ, ಮುಖಂಡರಾದ ಶಶಿಆಲ್ದೂರ್, ಸಂಸದರ ಆಪ್ತ ಕಾರ್ಯ ದರ್ಶಿ ಯತೀಶ್ ಮತ್ತಿತರರು ಉಪಸ್ಥಿತರಿದ್ದರು.
– ಸುರೇಶ್ ಎನ್.