ಚಿಕ್ಕಮಗಳೂರು-ವಿದ್ಯಾರ್ಥಿ-ಪುಷ್ಟೀಕರಣ-ಮತ್ತು-ಯುವ- ಮನಸ್ಸುಗಳನ್ನು-ಬೆಳಗಿಸುವ-ಕಾರ್ಯಕ್ರಮ

ಚಿಕ್ಕಮಗಳೂರು:– ಪುಷ್ಟೀಕರಣ ಚಟುವಟಿಕೆ ವಿದ್ಯಾರ್ಥಿಗಳ ತಾಂತ್ರಿಕ ಜ್ಞಾನವನ್ನು ನಿರ್ಮಿಸುವುದಲ್ಲದೆ, ಹೊಸ ಜನರೊಂದಿಗೆ ಸಹಯೋಗದಿಂದ ಕೆಲಸ ಮಾಡುವುದು, ಸಮಸ್ಯೆ ಪರಿಹರಿಸುತ್ತದೆ ಎಂದು ಹಾಸನ ಮಲ್ನಾಡ್ ಇಂಜಿನಿಯಿರಿಂಗ್ ಕಾಲೇಜು ಉಪನ್ಯಾಸಕಿ ಡಾ|| ಗೀತಾ ಕಿರಣ್ ಹೇಳಿದರು.

ನಗರದ ಎಐಟಿ ಕಾಲೇಜಿನಲ್ಲಿ ವಿದ್ಯುತ್ ಮತ್ತು ವಿದ್ಯುನ್ಮಾನ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಗಳಿಗೆ ಏರ್ಪಡಿಸಿದ್ಧ ವಿದ್ಯಾರ್ಥಿ ಪುಷ್ಟೀಕರಣ ಮತ್ತು ಯುವ ಮನಸ್ಸುಗಳನ್ನು ಬೆಳಗಿಸುವ ಕಾರ್ಯಕ್ರಮವ ನ್ನು ಮಂಗಳವಾರ ವಿಶೇಷ ಉಪನ್ಯಾಸ ನೀಡ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಗುಂಪುಗಳಾಗಿ ವಿಂಗಡಿಸಿ ವಿಶೇಷ ತರಬೇತಿ ನೀಡಿ ಆಗು-ಹೋಗುಗಳ ವೈಫಲ್ಯಗಳ ವಿಧ ವಿಧದದ ಹಾಗೂ ಶ್ರಮಗಳ ಬಗ್ಗೆ ಸಾಧನೆ ಹೇಗೆ ಮಾಡಬೇಕು. ಪರಸ್ಪರ ಒಬ್ಬರಿಗೊಬ್ಬರು ಮಾಹಿತಿ ತಂತ್ರಜ್ಞಾನಗಳನ್ನು ಬದಲಾಯಿಸಿ ಅಳವಡಿಸಿಕೊಳ್ಳುವ ಬಗ್ಗೆ ಒಳ್ಳೆಯ ಉದ್ದೇಶ ಹಾಗೂ ಸಾಧನೆಗಳ ಬಗ್ಗೆ ಮಾಹಿತಿ ನೀಡಿದರು.

ಪ್ರಸ್ತುತ ಕಾಲದಲ್ಲಿ ಜನಸಾಮಾನ್ಯರಿಗೆ ಮಾಹಿತಿ ಮುಟ್ಟಿಸುವುದು. ಸಮಾಜದಲ್ಲಿನ ವಿವಿಧ ಸಮಸ್ಯೆಗಳ ಸವಾಲುಗಳನ್ನು ಎದುರಿಸುವ ಮತ್ತು ಅತಿಮುಖ್ಯವಾಗಿ ವಿದ್ಯಾರ್ಥಿಗಳು ಪರೀಕ್ಷಾ ಸಮಯಗಳಲ್ಲಿ ಆತ್ಮಸ್ಥೈರ್ಯದಿಂದ ಎದುರಿಸಲು ಕೆಲವು ಮಾಹಿತಿಗಳನ್ನು ಸಮಗ್ರವಾಗಿ ವಿದ್ಯಾರ್ಥಿಗಳಿಗೆ ಬೋಧಿಸಿದರು.

ವಿದ್ಯಾರ್ಥಿಗಳು ತಮ್ಮ ಆಸಕ್ತಿಗಳನ್ನು ಅನುಸರಿಸಲು, ಹೊಸ ಆಸಕ್ತಿ ಮತ್ತು ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಪ್ರೋತ್ಸಾಹಿಸಲು ಪುಷ್ಟೀಕರಣ ಕಾರ್ಯಕ್ರಮ ಆಯೋಜಿಸಿ ತಿಳಿಹೇಳಲಾಗುತ್ತಿದೆ. ವಿದ್ಯಾರ್ಥಿಗಳು ನೀಡಬಹುದಾದ ಚಟುವಟಿಕೆಗಳ ಬಗ್ಗೆ ಯೋಚಿಸಬೇಕು. ವಿಭಿನ್ನ ರೀತಿಯಲ್ಲಿ ಪ್ರಯತ್ನಿಸಬೇಕು ಎಂದು ಕಿವಿ ಮಾತು ಹೇಳಿದರು.

ಎಐಟಿ ಕಾಲೇಜು ಪ್ರಾಂಶುಪಾಲ ಸಿ.ಟಿ.ಜಯದೇವ್ ಮಾತನಾಡಿ ವಿದ್ಯುತ್ ಮತ್ತು ವಿದ್ಯುನ್ಮಾನ ವಿದ್ಯಾಭ್ಯಾಸದ ಮಕ್ಕಳ ಪಯಣ ಬಹುಬೇಡಿಕೆಯ ಕ್ಷೇತ್ರವಾಗಿದೆ. ಶಿಸ್ತು, ಸಂಯಮ ಹಾಗೂ ಕಠಿಣ ಪರಿಶ್ರಮದಿಂದ ಅಭ್ಯಾಸಿದರೆ ಯಶಸ್ಸು ಕೈಮುಟ್ಟಿಯಲ್ಲಿದೆ. ಸೋಲುಂಡರೆ ಮತ್ತೊಮ್ಮೆ ಪ್ರಯತ್ನಿಸಬಹುದು. ಆದರೆ ಕೈಗೆ ಬಂದ ಯಶಸ್ಸು ಕೈತಪ್ಪಿಸಬಾರದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಾಸನ ಇಂಜಿನಿಯರ್ ಕಾಲೇಜು ಪ್ರಾಧ್ಯಾಪಕಿ ಡಾ|| ಮೋಹನಲಕ್ಷ್ಮೀ ವಿದ್ಯುತ್ ಮತ್ತು ವಿದ್ಯುನ್ಮಾನ ವಿಭಾಗದ ಮುಖ್ಯಸ್ಥ ಜಿ.ಆರ್.ವೀರೇಂದ್ರ, ಸಂಯೋಜಕರಾದ ಕೆ.ಎಂ.ಕವಿತಾ, ಡಾ|| ಪೋಶಿತಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

– ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?