ಚಿಕ್ಕಮಗಳೂರು-ಸ್ತುತ ಶಿಕ್ಷಕರು-ಭಯದ-ವಾತಾವರಣದಲ್ಲಿ-ಮಕ್ಕಳಿಗೆ- ಶಿಕ್ಷಣ-ನೀಡುತ್ತಿದ್ದಾರೆ-ಎಸ್.ಎಲ್ ಭೋಜೇಗೌಡ


ಚಿಕ್ಕಮಗಳೂರು– ಮೊದಲೆಲ್ಲಾ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ದಂಡಿಸಿ ಶಿಕ್ಷಣ ನೀಡಿ ಅವರನ್ನು ಮಾದರಿಯನ್ನಾಗಿಸುತ್ತಿದ್ದರು. ಆದರೆ ಇಂದು ವಿದ್ಯಾರ್ಥಿಗಳನ್ನು ದಂಡಿಸಿದರೆ ಎಲ್ಲಿ ನಮ್ಮ ಕೆಲಸಕ್ಕೆ ಕುತ್ತ ಬರುತ್ತದೆಯೋ ಎಂಬ ಭಯದ ವಾತಾವರಣದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ವಿಷಾಧ ವ್ಯಕ್ತಪಡಿಸಿದರು.


ನಗರದ ಕುವೆಂಪು ಕಲಾ ಮಂದಿರದಲ್ಲಿ ನಡೆದ ಮಗಳುವಳ್ಳಿ ಗ್ರಾಮದ ಗ್ರೀನ್ ವ್ಯಾಲಿ ಶಾಲೆಯ ಗ್ರೀನ್ ವ್ಯಾಲಿ ವೈಭವ ವಾರ್ಷಿಕ ಸಮಾರಂಭೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು, ಈ ತಲೆಮಾರಿನ ಬದಲಾದ ಸನ್ನಿವೇಶದಲ್ಲಿ ಉತ್ಕೃಷ್ಟ ಗುಣಮಟ್ಟದ ಶಿಕ್ಷಣವನ್ನು ಖಾಸಗಿ ಶಾಲೆಗಳು ನೀಡುತ್ತಿದ್ದು ಇಂದಿನ ಮಕ್ಕಳಿಗೆ ಬೇಕಾದ ವಾತಾವರಣವನ್ನು ಸೃಷ್ಟಿ ಮಾಡಿವೆ ಅದರಂತೆ ಅಂದಿನ ಸರ್ಕಾರಿ ಶಾಲೆಯ ಶಿಕ್ಷಣದ ವ್ಯವಸ್ಥೆಯನ್ನು ಸರಿದೂಗಿಸಿ ಇನ್ನಷ್ಟು ಉತ್ತಮ ರೀತಿಯಲ್ಲಿ ಇಂದಿನ ಶಿಕ್ಷಣ ಸಂಸ್ಥೆಗಳು ಪ್ರಯತ್ನಿಸುತ್ತಿದೆ ಎಂದರು.

ಶಾಲೆಯ ಶಿಕ್ಷಣಕ್ಕಿಂತ ಪ್ರಮುಖವಾಗಿ ಮನೆಯಲ್ಲಿ ನೀಡುವಂತಹ ಶಿಕ್ಷಣವೇ ಅತಿ ಅಮೂಲ್ಯವಾಗಿದೆ. ಕಾರಣ ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ, ಮನೆಯಲ್ಲಿ ಕಲಿಸುವಂತಹ ಸಂಸ್ಕಾರ ವಿದ್ಯಾರ್ಥಿಗಳನ್ನು ಉತ್ತಮ ದಾರಿಯಡೆ ಕೊಂಡೆಯ್ಯಲು ಸಹಕಾರಿಯಾಗಲಿದೆ. ಮನೆಯಲ್ಲಿ ನೀಡುವಂತಹ ಶಿಕ್ಷಣದಿಂದ ವಿದ್ಯಾರ್ಥಿಗಳು ಉತ್ತಮ ಸಂಸ್ಕಾರವನ್ನು ಕಲಿತು ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ಮುಖ್ಯ ಪಾತ್ರ ವಹಿಸಲಿದೆ ಎಂದು ಪೋಷಕರಿಗೆ ಕಿವಿಮಾತು ಹೇಳಿದರು.


ನಮ್ಮ ಹಿರಿಯರು ಶಿಕ್ಷಣವಿಲ್ಲದೆ ಉತ್ತಮ ಸಂಸ್ಕಾರದಿಂದ ಉತ್ತಮ ಸಮಾಜವನ್ನು ನಿರ್ಮಿಸಿ ನಮಗೆ ಬಳುವಳಿಯಾಗಿ ನೀಡಿದ್ದಾರೆ ಅದನ್ನು ಇನ್ನಷ್ಟು ಸದೃಢಗೊಳಿಸಲು ಇಂದಿನ ಶಿಕ್ಷಣ ಸಂಸ್ಥೆಗಳು ಉತ್ತಮ ರೀತಿಯಲ್ಲಿ ಉತ್ಕೃಷ್ಟ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಮಕ್ಕಳನ್ನು ಉತ್ತಮ ದಾರಿಯಡೆ ಕೊಂಡೊಯ್ಯುತ್ತಿದ್ದಾರೆ. ಇಂದಿನ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ವಿದ್ಯಾಭ್ಯಾಸ ನೀಡಲು ಬಹಳ ಕಷ್ಟ ಪಡುತ್ತಿದ್ದು ಅವರು ಪಡುತ್ತಿರುವ ಕಷ್ಟವನ್ನು ತಮ್ಮ ಮಕ್ಕಳಿಗೆ ತಿಳಿಸುವುದು ಸಹ ಬಹುದೊಡ್ಡ ಜವಾಬ್ದಾರಿಯಾಗಿದೆ ಈ ಮೂಲಕ ಮಕ್ಕಳಲ್ಲಿ ಅರಿವು ಮೂಡಿಸುವ ಕೆಲಸವು ಆಗಬೇಕಿದೆ ಎಂದರು.


ಪೋಷಕರು ಮಕ್ಕಳನ್ನು ತಮಗಿಷ್ಟ ಬಂದಂತಹ ವಿದ್ಯಾಭ್ಯಾಸವನ್ನು ನೀಡುವ ಬದಲು ಮಕ್ಕಳಲ್ಲಿ ಇರುವಂತಹ ಆಸಕ್ತಿಯನ್ನು ಗುರುತಿಸಿ ಅದಕ್ಕೆ ಪೂರಕವಾದ ಶಿಕ್ಷಣವನ್ನು ನೀಡಿದರೆ ಉತ್ತಮ ಎಂದು ತಿಳಿಸಿದರು.


ಮತ್ತೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿಜ್ಞಾನ ಪ್ರಾಧ್ಯಾಪಕರಾದ ಕೃಷ್ಣಮೂರ್ತಿರಾಜ್ ಅರಸ್ ಅವರು ಮಾತನಾಡಿ ಜಿಲ್ಲೆಯಲ್ಲಿ ಉತ್ತಮ ರೀತಿಯಲ್ಲಿ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ ಗ್ರಾಮದ ಹಲವಾರು ಜನರಿಗೆ ಉದ್ಯೋಗ ಕಲ್ಪಿಸಿದ್ದು ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಾ ಈ ವಿದ್ಯಾ ಸಂಸ್ಥೆ ಮುಗುಳುವಳ್ಳಿ ಗ್ರಾಮಕ್ಕೆ ಕೊಡುಗೆಯಾಗಿದೆ ಎಂದರು.


ಕಾರ್ಯಕ್ರಮದಲ್ಲಿ ಕಾಮದೇನು ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಎಂ.ಕೆ ಜಗದೀಶ್, ಕೆನರಾ ಬ್ಯಾಂಕ್‌ನ ವ್ಯವಸ್ಥಾಪಕ ಮಹಾದೇವ, ಅಗ್ನಿಶಾಮಕ ದಳದ ಅಧಿಕಾರಿ ಪ್ರವೀಣ್ ಕೆ.ಎನ್, ವಕೀಲರಾದ ಕೆವಿ ಮಹಾಬಲ, ಶಾಲೆಯ ಪ್ರಾಂಶುಪಾಲ ಗಿರಿಜೇಶ್, ಈ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ವೀರೇಶ್ ಶೆಟ್ಟಿ, ಜಂಟಿ ಕಾರ್ಯದರ್ಶಿ ರೇಖಾ ವೀರೇಶ್, ಖಜಾಂಚಿ ನಂದೀಶ್ ಸೇರಿದಂತೆ ಶಾಲೆಯ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *

× How can I help you?