ಚಿಕ್ಕಮಗಳೂರು- ಉಪಪಂಗಡಗಳು ಒಂದಾಗಿ ವೀರಶೈವ-ಲಿಂಗಾಯಿತರೆನ್ನಿ- ಸಚಿವ ಲಕ್ಷ್ಮೀ ಹೆಬ್ಬಾಳ್ಕರ್

ಚಿಕ್ಕಮಗಳೂರು, ಮೇ.24:- ರಾಜ್ಯದಲ್ಲಿ ನೂರಕ್ಕೂ ಹೆಚ್ಚಿರುವ ಸಮಾಜದ ಉಪಪಂಗಡಗಳು ಒಂದಾ ಗುವ ಮೂಲಕ ವೀರಶೈವ ಲಿಂಗಾಯಿತರೆಂದು ಪ್ರತಿಪಾದಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ನಗರದ ಎಐಟಿ ಕಾಲೇಜು ಸಮೀಪದ ವೀರಶೈವ ಲಿಂಗಾಯಿತ ಸಮುದಾಯ ಭವನದಲ್ಲಿ ಶನಿವಾರ ನಡೆದ ಜಗದ್ಗುರು ಶ್ರೀ ರೇಣುಕಾ ಮತ್ತು ಬಸವೇಶ್ವರರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವೀರಶೈವ ಮತ್ತು ಲಿಂಗಾಯಿತ ಸಮಾಜವು ಹಸುವಿನಂತೆ, ಹಿಂದೆ ಬಂದರೆ ಒದೆಯುವದಿಲ್ಲ, ಮುಂದೆ ಬಂದರೆ ಹಾಯುವುದಿಲ್ಲ. ನಾಡಿನ ಪ್ರತಿಯೊಂದು ಜಾತಿ, ಧರ್ಮ, ಸಮಾಜವನ್ನು ಜೊತೆಗೂಡಿಸಿಕೊಂಡು ಅಸುಯೆಪಡದೇ ಅತ್ಯಂತ ಪ್ರೀತಿಯಿಂದ ಕಾಣುವ ಸಮಾಜ ವೀರಶೈವ-ಲಿಂಗಾಯಿತ ಎಂದು ಹೇಳಿದರು.

ರಾಜ್ಯದಾದ್ಯಂತ ಮೂಲೆ ಮೂಲೆಗಳಲ್ಲಿ ನಮ್ಮ ಸಮಾಜವು ನೆಲೆಯೂರಿದೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಮುನ್ನೆಲೆಗೆ ಕರೆತರುವ ನಿಟ್ಟಿನಲ್ಲಿ ಎಲ್ಲಾ ಉಪಪಂಗಡಗಳು ಒಂದಾಗುವು ದು ಮುಖ್ಯವಾಗಿದ್ದು ಬಸವಣ್ಣನವರ ಆದರ್ಶದಲ್ಲಿ ಸಾಗುತ್ತಿರುವ ಜನಾಂಗವು ಒಗ್ಗಟ್ಟನ್ನು ಪ್ರದರ್ಶಿಸಬೇಕು ಎಂದು ತಿಳಿಸಿದರು.

ಸರ್ಕಾರದ ಅನುದಾನ, ಸಮಾಜದ ಮುಖಂಡರು ಹಾಗೂ ದಾನಿಗಳ ಸಹಕಾರದಿಂದÀ ಬೃಹತ್ ಮಟ್ಟ ದಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯ ಭವನ ಅಂತಿಮವಾಗಿ ಪೂರ್ಣಗೊಳ್ಳುತ್ತಿರುವುದು ಸ್ವಾಗತಾ ರ್ಹ ಹೀಗಾಗಿ ಸಮಾಜದ ಮಗಳಾಗಿ ತಾವು ಸಮುದಾಯ ಭವನಕ್ಕೆ 10 ಲಕ್ಷ ರೂ. ದೇಣಿಗೆ ನೀಡುವುದಾಗಿ ಭರವಸೆ ನೀಡಿದರು.

ವೀರಶೈವ-ಲಿಂಗಾಯಿತ ಸಮಾಜವನ್ನು ಕಟ್ಟಿಗೊಳಿಸುವ ನಿಟ್ಟಿನಲ್ಲಿ ಶ್ಯಾಮನೂರು ಶಿವಶಂಕರಪ್ಪ, ಈಶ್ವ ರ್‌ಖಂಡ್ರ ಮಾರ್ಗದರ್ಶನದಲ್ಲಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಪಕ್ಷಾತೀತವಾಗಿ ಸಮಾಜ ದ ಪರವಾಗಿ ಮನೆಮಗಳಂತೆ ಕೆಲಸ ಮಾಡಲು ಸಿದ್ದವಾಗಿದ್ದೇನೆ ಎಂದರು.
ಹನ್ನೇರಡನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿ ಮೊಟ್ಟಮೊದಲು ಮಹಿಳೆ ಯರನ್ನು ಮುಖ್ಯವಾಹಿನಿಗೆ ಕರೆತಂದರು. ಧಯವೇ ಧರ್ಮದ ಮೂಲವಯ್ಯ ಎಂಬ ಸಂದೇಶವನ್ನು ನೀಡಿ ರುವ ಬಸವೇಶ್ವರರ ಜೀವನದ ಸಾರಾಂಶ, ಸತ್ಯವನ್ನು ನಾಗರೀಕರು ಮೈಗೂಡಿಸಿಕೊಳ್ಳಬೇಕು ಎಂದರು.

ನಿಸರ್ಗದ ಸೊಬಗು, ಸಂಸ್ಕೃತಿ, ಧಾರ್ಮಿಕತೆಯ ಪ್ರತೀಕದಿಂದ ಕೂಡಿರುವ ಜಿಲ್ಲೆ ಶ್ರೀಮಂತಿಕೆಯನ್ನು ಹೊಂದಿದೆ. ಇಲ್ಲಿನ ನಿವಾಸಿಗಳು ಸುಸಂಸ್ಕೃತ ಹಾಗೂ ಹೃದಯವಂತರು. ಜಿಲ್ಲೆಗಾಗಮಿಸಿದ ತಮಗೆ ತವರಿನ ಮನೆಯಂತೆ ಅದ್ದೂರಿ ಸ್ವಾಗತ ನೀಡಿರುವುದು ಹೆಮ್ಮೆಯಿದೆ ಎಂದರು.

ಶಾಸಕ ಹೆಚ್.ಡಿ.ತಮ್ಮಯ್ಯ ಮಾತನಾಡಿ ರಾಜ್ಯದಲ್ಲಿ ಬದುಕು ರೂಪಿಸಿಕೊಂಡಿರುವ ಸಮಾಜದ ಒಳ ಪಂಗಡಗಳ ನಿವಾಸಿಗಳು ಶೈಕ್ಷಣಿವಾಗಿ ಒಗ್ಗಟ್ಟಾಗಲು ಒಳಪಂಗಡ ಮರೆತು ವೀರಶೈವ-ಲಿಂಗಾಯಿತರೆಂದು ಒಂದಾಗಬೇಕು. ಜೊತೆಗೆ ಸಮುದಾಯದ ಬೆಳವಣಿಗೆಗೆ ಸಹಕರಿಸಬೇಕು ಎಂದು ತಿಳಿಸಿದರು.

ನೂತನ ಸಮುದಾಯ ಭವನಕ್ಕೆ ಪಕ್ಷಾತೀತವಾಗಿ ಎಲ್ಲರೂ ಆರ್ಥಿಕವಾಗಿ ಕೈಜೋಡಿಸಿದ್ದಾರೆ. ಇನ್ನೂ ಕೆಲವು ಕೆಲಸಗಳು ಬಾಕಿಯಿರುವ ಕಾರಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನೇತೃತ್ವದಲ್ಲಿ ಮುಖ್ಯಮಂತ್ರಿಗಳೊಂದಿಗೆ ನಿಯೋಗ ತೆರಳಿ ಉಳಿದ ಕೆಲಸಕ್ಕೆ ಅನುದಾನ ಬಿಡುಗಡೆಗೊಳಿಸಿ ಭವನವನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಮಾಜದ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದಸ್ವಾಮಿ ಸಮಾ ಜದ ಏಳಿಗೆಗೆ ಭವನ ನಿರ್ಮಿಸುವ ಉದ್ದೇಶದಿಂದ ಬಸವೇಗೌಡ ಕುಟುಂಬದವರ ಸಹಕಾರದಿಂದ ಪ್ರಾರಂಭಿ ಸಿದ ಸಮುದಾಯ ಭವನವು 9 ಎಕರೆ ಪ್ರದೇಶದಲ್ಲಿ ಅಚ್ಚುಕಟ್ಟಾಗಿ ನಿರ್ಮಾಣವಾಗುತ್ತಿದ್ದು ಜೊತೆಗೆ ಶಾಸಕರು ಸಮಾಜದ ಬಗ್ಗೆ ಕಾಳಜಿ ವಹಿಸಿ ಎರಡು ಕೋಟಿ ಅನುದಾನವನ್ನು ಒದಗಿಸಿಕೊಟ್ಟಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಶೈವ ಲಿಂಗಾಯಿತ ಸಮಾಜದ ಅಧ್ಯಕ್ಷ ಬಿ.ಎ.ಶಿವಶಂಕರ್ ವಹಿಸಿದ್ದರು. ನೈಸರ್ಗಿಕ ಕೃಷಿಕ ಚಂದ್ರಶೇಖರ ನಾರಣಾಪುರ ಶ್ರೀ ರೇಣುಕಾಚಾರ್ಯ ಮತ್ತು ಬಸವೇಶ್ವರರ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಅ.ಭಾ.ವಿ.ಲಿಂ ಮಹಾಸಭಾ ಜಿಲ್ಲಾಧ್ಯಕ್ಷ ಹೆಚ್.ಎಂ.ಲೋಕೇಶ್, ಕಾಫಿ ಬೆಳೆಗಾರ ಎ.ಬಿ.ಸುದರ್ಶನ್, ಸಮಾಜದ ಉಪಾಧ್ಯಕ್ಷರಾದ ಹೆಚ್.ಎನ್.ನಂಜೇಗೌಡ, ಹೆಚ್.ಎಂ.ರೇಣುಕಾರಾಧ್ಯ, ಎಂ. ಎಸ್.ನಿರಂಜನ್, ಕಾರ್ಯದರ್ಶಿಗಳಾದ ಸಿ.ಬಿ.ನಂದೀಶ್, ಡಿ.ಎಸ್.ಮಮತ, ಖಜಾಂಚಿ ಎಸ್.ದೇವರಾಜ್, ಮುಖಂಡರುಗಳಾದ ಕೆ.ಸಿ.ನಿಶಾಂತ್, ದಿವಾಕರ್, ಬಸವರಾಜು, ಜಗದೀಶ್, ಜಿ.ಕೆ.ನಂಜೇಶ್ ಮತ್ತಿತರರು ಉಪಸ್ಥಿತರಿದ್ದರು.

– ಸುರೇಶ್‌ ಎನ್.

Leave a Reply

Your email address will not be published. Required fields are marked *