ಚಿಕ್ಕಮಗಳೂರು, ಮೇ.09:- ದುಷ್ಕರ್ಮಿಗಳಿಂದ ಹತ್ಯೆಯಾದ ಹಿಂದೂ ಕಾರ್ಯಕರ್ತ ಸುಹಾಸ್‌ಶೆಟ್ಟಿ ಮನೆಗೆ ಶುಕ್ರವಾರ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ನೇತೃತ್ವದಲ್ಲಿ ಕಾರ್ಯಕರ್ತರು ಹಾಗೂ ಗೆಳೆಯರು ಭೇಟಿ ನೀಡಿ ನೊಂದ ಕುಟುಂಬಕ್ಕೆ ಮೂರು ಲಕ್ಷ ರೂ.ಗಳ ಆರ್ಥಿಕ ಸಹಾಯಧನ ನೀಡಿ ಸಾಂತ್ವಾನ ಹೇಳಿದರು.
ಬಳಿಕ ಮಾತನಾಡಿದ ಅವರು ಬಡತನದ ಕುಟುಂಬದಲ್ಲಿ ಜನಿಸಿದ ಸುಹಾಸ್‌ಶೆಟ್ಟಿ ಕಟ್ಟಾಹಿಂದುತ್ವವಾದಿಯಾಗಿ ಬೆಳೆದವರು. ಆಂತರಿಕವಾಗಿ ಸುಹಾಸ್ ನಮ್ಮನ್ನು ಬಿಟ್ಟಗಲಿದ್ದಾರೆ. ಆದರೆ ಲಕ್ಷಾಂತರ ಯುವಕರಿಗೆ ಹಿಂದುತ್ವಕ್ಕಾಗಿ ಕಾರ್ಯ ನಿರ್ವಹಿಸುವ ಭದ್ರಬುನಾದಿಯ ಕೋಟಿ ನಿರ್ಮಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಆ ನೊಂದ ಕುಟುಂಬಕ್ಕೆ ಕರುಳಿನ ಕುಡಿಯನ್ನು ಮರಳಿ ಹಿಂತಿರುಗಿಸಲು ಸಾಧ್ಯವಿಲ್ಲ. ಆದರೆ ಜಿಲ್ಲಾ ಭಾಜಪ ಹಾಗೂ ಗೆಳೆಯೊಂದಿಗೆ ಸಣ್ಣಮಟ್ಟಿನ ಆರ್ಥಿಕ ಸಹಾಯ ಕಲ್ಪಿಸಿ ಸಾಂತ್ವಾನ ಹೇಳಲಾಗಿದ್ದು, ಯಾ ವುದೇ ವೇಳೆಯಲ್ಲೂ ಸುಹಾಸ್ ಸಾವಿನ ಸತ್ಯವನ್ನು ಬಹಿರಂಗಪಡಿಸಲು ಹಿಂದೂಬಾAಧವರು ಆ ಕುಟುಂ ಬದಲ್ಲಿ ಜೊತೆಗಿರಲಿದೆ ಎಂದರು.

ನಾಡಿನ ಸಮಸ್ತ ಹಿಂದೂ ಸಂಘಟನೆಗಳು, ನಾಯಕರುಗಳು ಸುಹಾಸ್ ಮನೆಗೆ ಭೇಟಿ ನೀಡಬೇಕು. ಈ ರೀತಿಯ ಅಹಿತಕರ ಘಟನೆ ಸಂಭವಿಸಿದಾಗ ನೊಂದ ಕುಟುಂಬಕ್ಕೆ ಶಕ್ತಿ ತುಂಬುವ ನಿಟ್ಟಿನಲ್ಲಿ ಕೈಜೋಡಿ ಸಬೇಕು. ಜೊತೆಗೆ ಕೈಲಾದ ಮಟ್ಟಿಗೆ ಸಹಾಯದ ಗುಣ ಬೆಳೆಸಿಕೊಂಡರೆ ಭವಿಷ್ಯದಲ್ಲಿ ಹಿಂದೂ ಸಮಾಜ ಗಟ್ಟಿ ತನದಿಂದ ಕೂಡಿ ಲಕ್ಷಾಂತರ ಸುಹಾಸ್‌ನಂಥ ಯುವಪಡೆಗಳು ಜನಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹೆಚ್.ಸಿ.ಕಲ್ಮರುಡಪ್ಪ, ಓಬಿ ಸಿ ರಾಜ್ಯ ಕಾರ್ಯದರ್ಶಿ ಬಿ.ರಾಜಪ್ಪ, ವಿಹೆಚ್‌ಪಿ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ, ಭಾಜಪ ಜಿಲ್ಲಾ ವಕ್ತಾರ ಸೋಮ ಶೇಖರ್, ಉಪಾಧ್ಯಕ್ಷರಾದ ಕನಕರಾಜ್ ಅರಸ್, ನಗರಸಭೆ ಮಾಜಿ ಉಪಾಧ್ಯಕ್ಷ ಕಾಯಿರವಿ, ಮುಖಂಡರು ಗಳಾದ ಶರತ್, ಕೌಸಿಕ್, ಕಾರ್ತಿಕ್, ಚಮಿನ್‌ಗೌಡ, .ಕಾವಳ ಮುಡೂರು ಪಂಚಾಯತ್ ಅಧ್ಯಕ್ಷ ಅಜಿತ್ ಶೆಟ್ಟಿ, ಬಂಟ್ವಾಳ ಯುವಮೋರ್ಚಾ ಅಧ್ಯಕ್ಷ ದಿನೇಶ್‌ಶೆಟ್ಟಿ ದಂಬೆದಾರ್ ಮತ್ತಿತರರಿದ್ದರು.
- ಸುರೇಶ್ ಎನ್.