ಚಿಕ್ಕಮಗಳೂರು-ಹಿರೇಮಗಳೂರು ದೊಡ್ಡಕೆರೆಯ ಕಾಲುವೆ ಅನೇಕ ವರ್ಷಗಳಿoದ ಹೂಳು,ಕಸ ತುಂಬಿಕೊoಡಿದ್ದ ಹಿನ್ನೆಲೆ ಗ್ರಾಮಸ್ಥರು ಕ್ಷೇತ್ರದ ಮಾಜಿ ಶಾಸಕ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು ಭೇಟಿ ಸಲ್ಲಿಸಿ ಸಮಸ್ಯೆ ವಿವರಿಸಿದ ಮರುದಿನವೇ ಪರಿಹಾರ ಒದಗಿಸಲು ಮುಂದಾಗಿರುವುದಕ್ಕೆ ಗ್ರಾಮಸ್ಥರು ಸಂತಸ ವ್ಯಕಪಡಿಸಿದರು.
ಈ ವೇಳೆ ಮಾತನಾಡಿದ ಗ್ರಾಮದ ಹಿರಿಯ ಜಾನಯ್ಯ,ನಗರಕ್ಕೆ ಸಮೀಪವಿರುವ ಹಿರೇಮಗಳೂರು ದೊಡ್ಡಕೆರೆ ಹೂಳು ತೆಗೆಯುವ ಸಂಬoಧ ಸಣ್ಣ ನೀರಾವರಿ ಇಲಾಖೆ ಹಾಗೂ ಹಾಲಿ ಶಾಸಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ.ಹೀಗಾಗಿ ಕ್ಷೇತ್ರದ ಮಾಜಿ ಶಾಸಕ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಗಮನಕ್ಕೆ ತಂದಾಗ ವೈಯಕ್ತಿಕ ಖರ್ಚಿನಿಂದ ರೈತರಿಗೆ ಅನುಕೂಲ ಕಲ್ಪಿಸಲು ಜೆಸಿಬಿ ಕರೆಸಿ ಕಾಲುವೆ ಕಸ ತೆರವಿಗೆ ಮುಂದಾಗಿದ್ದಾರೆ ಎಂದರು.
ಹಿರೇಮಗಳೂರು ಗ್ರಾಮದ ದೊಡ್ಡಕೆರೆ ಚಾನಲ್ ಮೂಲಕ ಹಿರೇಮಗಳೂರು, ಬಂಡಿಹಳ್ಳಿ, ಕನ್ನೇನಹಳ್ಳಿ, ಲಕ್ಷ್ಮೀಪುರ , ಮಲ್ಲೇದೇವರನಹಳ್ಳಿ ಹಾಗೂ ಕರ್ತಿಕೆರೆ ಗ್ರಾಮಗಳಿಗೆ ನೀರೂಣಿಸುತ್ತಿತ್ತು.ಆದರೆ ಕೆಲ ವರ್ಷಗಳಿಂದ ಕಾಲುವೆ ಗಿಡ-ಗಂಟಿ, ಮಣ್ಣು ತುಂಬಿಕೊಂಡಿದ್ದರಿoದ ಸಮರ್ಪಕವಾಗಿ ಲಭ್ಯವಾಗುತ್ತಿರಲಿಲ್ಲ.ಈ ತೊನ್ದರೆಯನ್ನು ಸಿ ಟಿ ರವಿಯವರ ಗಮನಕ್ಕೆ ತಂದ ಮರುದಿನವೇ ಯಾವ ಅನುದಾನಕ್ಕೂ ಕಾಯದೆ ಕೆಲಸ ಮಾಡಿಸಲು ಪ್ರಾರಂಭಿಸಿದ್ದಾರೆ.
ಸತತ ಎರಡು ದಶಕಗಳ ಶಾಸಕರಾಗಿ ಹಿರೇಮಗಳೂರಿಗೆ ರಸ್ತೆ, ಅಂಗವಿಕಲ-ವಿಧವಾವೇತನ, ಆರೋಗ್ಯ ಕೇಂದ್ರ ಜೊತೆಗೆ ರೈತರಿಗೆ ನೀರಾವರಿ ಸೌಲಭ್ಯ ಸೇರಿದಂತೆ ಬಹಳಷ್ಟು ಅಭಿವೃದ್ದಿಗೆ ಶ್ರಮಿಸಿ ಸಾರ್ಥಕ ನಾಯಕರಾಗಿದ್ದು ರೈತಪರ ನಿಲುವು ಹೊಂದಿರುವ ಅವರಿಗೆ ಗ್ರಾಮಸ್ಥರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದರು.
ಗ್ರಾಮಸ್ಥ ಚಂದ್ರಶೇಖರ್ ಮಾತನಾಡಿ ಹಿರೇಮಗಳೂರು ಕೆರೆ ಎರಡು ಸಾವಿರ ಎಕರೆ ಹೊಂದಿರುವ ನೀರಾವರಿ ಪ್ರದೇಶವಾಗಿದೆ.ಕೆರೆ ಭರ್ತಿಗೊಂಡಿದ್ದರೂ ಕೂಡಾ ರೈತರಿಗೆ ಕಳೆದ ಒಂದೂವರೆ ವರ್ಷಗಳಿಂದ ಉಪಯೋಗಕ್ಕಿಲ್ಲ ಹಾಗೂ ಕಾಲುವೆ ನೀರು ಸಮರ್ಪಕವಾಗಿ ಜಮೀನಿಗೆ ಹಾಯಿಸಲು ಸಾಧ್ಯವಾಗುತ್ತಿಲ್ಲ.ಈ ವೇಳೆ ಸಿ.ಟಿ.ರವಿ ಗ್ರಾಮಸ್ಥರಿಗೆ ಸ್ಪಂದಿಸಿರುವುದು ಸ್ವಾಗತಾರ್ಹ ಎಂದರು.
ಕಾಲುವೆ ಸಂಪೂರ್ಣ ಹದಗೆಟ್ಟಿರುವ ಕಾರಣ ಹೊಸ ಕಾಲುವೆಯಾಗಿ ನಿರ್ಮಿಸಿಕೊಡಬೇಕು. ದುರಸ್ಥಿಗೊಳಿಸಿ ಮುಂದುವರೆಸಿದರೆ ಪದೇ ಪದೇ ಈ ಸಮಸ್ಯೆ ಕಾಡಲಿದೆ. ಹೀಗಾಗಿ ಹಾಲಿ ಶಾಸಕ ತಮ್ಮಯ್ಯ ಹಿರೇಮಗಳೂರು ನಿವಾಸಿಯಾದ ಕಾರಣ ರೈತಾಪಿ ವರ್ಗಕ್ಕೆ ಅನುಕೂಲ ಕಲ್ಪಿಸಲು ಹೊಸ ಕಾಲುವೆ ನಿರ್ಮಿಸಿ ಈ ಭಾಗದ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ಗ್ರಾಮಸ್ಥ ಹೆಚ್.ಕೆ.ಕೇಶವಮೂರ್ತಿ ಮಾತನಾಡಿ, ರೈತರ ಜೀವನಾಡಿ ದೊಡ್ಡಕೆರೆ ಕಾಲುವೆಯು ಹುಲ್ಲು, ಸೊಪ್ಪು ಅತಿಯಾಗಿ ಬೆಳೆದು ನೀರು ಹರಿಯದೇ ಜನ-ಜಾನುವಾರುಗಳಿಗೆ ಸಮಸ್ಯೆಯಾಗಿದೆ. ಕಾಲುವೆ ಅಚ್ಚು ಕಟ್ಟಾಗಿ ನಿರ್ಮಿಸುವಂತೆ ಗ್ರಾಮಸ್ಥರು ಹಾಲಿ ಶಾಸಕ ತಮ್ಮಯ್ಯ ಹಾಗೂ ನೀರಾವರಿ ಇಲಾಖೆಗೆ ಗಮನಕ್ಕೆ ತಂದರೂ ಗಮನಕ್ಕೆ ಬಾರದ ಹಿನ್ನೆಲೆ ಜಾನಯ್ಯ ನೇತೃತ್ವದಲ್ಲಿ ವಿವಿಧ ಗ್ರಾಮಸ್ಥರು ಸಿ.ಟಿ.ರವಿಯವರಿಗೆ ವಿಷಯ ತಲುಪಿಸಿದ ಕೂಡಲೇ ಸಮಸ್ಯೆ ಪರಿಹರಿಸಲು ಮುಂದಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ವಿಜಯ್‌ಕುಮಾರ್, ರಾಜು, ಯೋಗೇಂದ್ರ, ಸುರೇಶ್, ಓಂಕಾರ, ನಾಗರಾಜ್, ಧರ್ಮರಾಜು, ಗಣೇಶ, ಸೋಮಣ್ಣ, ರವಿಕುಮಾರ್, ಮಹೇಶ್, ಪಾಪಣ್ಣ ಹಾಜರಿದ್ದರು.
—————–ಸುರೇಶ್