ಚಿಕ್ಕಮಗಳೂರು-ಶಿಕ್ಷಕಿಯರಿಂದ-ಶಾಲೆಗೆ-ಬೋರ್‌ವೆಲ್-ಸರ್ವ-ಧರ್ಮ-ಸಂಘ-ಅಭಿನಂದನೆ

ಚಿಕ್ಕಮಗಳೂರು-ತಾಲ್ಲೂಕಿನ ಮಾಚಗೊಂಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಶಾಶ್ವತ ಕುಡಿಯುವ ನೀರಿಗಾಗಿ ‌2.50 ಲಕ್ಷ ರೂ. ವೆಚ್ಚದಲ್ಲಿ ಬೋರ್‌ವೇಲ್ ಕೊರೆಸಿ ಆಸರೆ ಯಾದ ಶಾಲೆಯ ಶಿಕ್ಷಕಿಯಾದ ಹಿನತಬಸ್ಸಂ ಮತ್ತು ರಜಿಯಾ ಸುಲ್ತಾನಾ ಅವರಿಗೆ ಸರ್ವ ಧರ್ಮ ಸೇವಾ ಸಂಘದಿಂದ ಬುಧವಾರ ಆತ್ಮೀಯವಾಗಿ ಗೌರವಿಸಲಾಯಿತು.

ಈ ವೇಳೆ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಉಪ್ಪಳ್ಳಿ ಕೆ.ಭರತ್ ಸಮಾಜದಲ್ಲಿ ಆಸ್ತಿ, ಅಂತಸ್ತು ಗಳಿ ಸುವುದು ಮುಖ್ಯವಲ್ಲ. ಮರಳಿ ಸಮಾಜಕ್ಕೆ ಕೊಡುಗೆ ನೀಡುವುದನ್ನು ಕಲಿತುಕೊಂಡರೆ ಬದುಕು ಸಾರ್ಥಕವಾಗಲಿದೆ ಎಂಬುದಕ್ಕೆ ಈ ಶಾಲೆಯ ಶಿಕ್ಷಕಿಯ ಸೇವೆಯೇ ನೇರ ಉದಾಹರಣೆ ಎಂದು ತಿಳಿಸಿದರು.

ಶಾಲೆ ಹಲವಾರು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿತ್ತು. ಈ ಬಗ್ಗೆ ಶಾಲಾ ಆಡಳಿತ ಮಂಡಳಿಯು ಗ್ರಾ.ಪಂ. ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನ ಕಂಡು ಬಂದಿಲ್ಲ. ಈ ಬಗ್ಗೆ ಶಾಲಾ ಈರ್ವರು ಶಿಕ್ಷಕಿಯರು ಕುಟುಂಬಸ್ಥರ ಒಪ್ಪಿಗೆ ಪಡೆದು ಸ್ವಂತ ಖರ್ಚಿ ನಲ್ಲಿ ಬೋರೆವೆಲ್ ಕೊರೆಸಿರುವುದು ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ಇತ್ತೀಚಿಗೆ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲದೇ ಪರಿತಪಿಸುತ್ತಿವೆ. ಹೀಗಾಗಿ ಶಾಲಾ ಸಿಬ್ಬಂದಿಗಳು ದುಡಿಮೆಯ ಶೇ.೪ರಷ್ಟು ಹಣವನ್ನು ಪ್ರತಿ ತಿಂಗಳು ಸಂಗ್ರಹಿಸಿ ವಾರ್ಷಿಕ ಬಳಿಕ ಶಾಲಾಭಿವೃದ್ದಿ ಗೆ ಬಳಸಬಹುದು. ಆಗ ಯಾವುದೇ ಗ್ರಾ.ಪಂ. ಅಥವಾ ಚುನಾಯಿತ ಪ್ರತಿನಿಧಿಗಳ ಸಮೀಪ ಮನವಿ ಸಲ್ಲಿಸು ವ ಅವಶ್ಯಕತೆ ಇರುವುದಿಲ್ಲ ಎಂದು ತಿಳಿಸಿದರು.

ಅಲ್ಲದೇ ಶಾಲೆಯ ಹಳೇ ವಿದ್ಯಾರ್ಥಿಗಳು, ಎಸ್‌ಡಿಎಂಸಿ ಸದಸ್ಯರು, ಸುತ್ತಮುತ್ತಲಿನ ದಾನಿಗಳ ಕೋರಿದರೆ ಕೈಲಾದಷ್ಟು ಸಹಾಯಧನ ಸಿಗಲಿದೆ. ಇದರಿಂದ ಸಣ್ಣಪುಟ್ಟ ಲೋಪದೊಷಗಳನ್ನು ಸರಿಪಡಿಸಬಹುದು. ಕೆಲವು ಶಾಲೆಗಳಲ್ಲಿ ಶಿಕ್ಷಕರು ವೃತ್ತಿಧರ್ಮ ಮರೆತು ಇನ್ನಿತರೆ ಕೆಲಸಗಳಲ್ಲಿ ತೊಡಗುತ್ತಿದ್ದು ಈ ಕಾರ್ಯ ಕೈ ಬಿಟ್ಟು ಭವಿಷ್ಯದ ಮಕ್ಕಳನ್ನು ಅಣಿಗೊಳಿಸಬೇಕು ಎಂದರು.

ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಎಸ್.ಲೋಕೇಶ್ ಮಾತನಾಡಿ, ಅನೇಕ ವರ್ಷಗಳಿಂದ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದ ಶಾಲಾ ಮಕ್ಕಳಿಗೆ ಶಾಶ್ವತವಾಗಿ ಬೋರ್‌ವೆಲ್ ಕೊರೆಸಿರುವುದು ಹೆಮ್ಮೆಯ ಸಂಗತಿ. ಈ ಮಾದರಿಯಂತೆ ಪ್ರತಿ ಶಾಲೆಗಳಲ್ಲಿ ಶಿಕ್ಷಕರು ಮುಂದಾದರೆ ಮೂಲಸೌಕರ್ಯದಿಂದ ವಂಚಿತವಾಗುವುದಿಲ್ಲ ಎಂದು ತಿಳಿಸಿದರು.

ಇದೇ ವೇಳೆ ಶಾಲಾ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಹಾಗೂ ಸಿಬ್ಬಂದಿಗಳಿಗೆ ಗೌರವ ಸಲ್ಲಿಲಾಯಿತು. ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಸದಸ್ಯರಾದ ಅಣ್ಣಪ್ಪ, ಇಮ್ರಾನ್ ಆಲಿ, ಶಾಲಾ ಮುಖ್ಯಶಿಕ್ಷಕಿ ಸವಿತಾ, ಶಿಕ್ಷಕಿ ರಾದ ಮೆಂಜ್ಯಾ ನಾಯ್ಕ್, ಭುವನೇಶ್ವರಿ, ಶೀಲಾ, ಎಸ್.ಎನ್.ರೂಪ, ಬಿ.ಸಿ.ನಯನ, ಸ್ಥಳೀಯರಾದ ಸುರೇ ಶ್, ಅತಿಶಯ, ನಾಜೀರ್ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು.

– ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?