ಚಿಕ್ಕಮಗಳೂರು-ಕಣ್ಣು-ಶರೀರದ-ಅತ್ಯಂತ-ಸೂಕ್ಷ್ಮ-ಅಂಗ-ಸುಜಾತ- ಶಿವಕುಮಾರ್

ಚಿಕ್ಕಮಗಳೂರು: ಮಾನವರ ಶರೀರದಲ್ಲಿ ಕಣ್ಣು ಸೂಕ್ಷ್ಮತೆಯಿಂದ ಕೂಡಿರುವ ಅಂಗ. ಪ್ರಕೃತಿ ಸವಿಯುವ ಹಾಗೂ ದೈನಂದಿನ ಕಾಯಕದ ಭಾಗವಾಗಿರುವ ದೃಷ್ಟಿಯನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದು ನಗರಸಭೆ ಅಧ್ಯಕ್ಷ ಸುಜಾತ ಶಿವಕುಮಾರ್ ಹೇಳಿದರು.


ನಗರದ ಡಾ|| ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನೇಚರ್ ಕನ್ಸರ್‌ವೇಷನ್ ಟ್ರಸ್ಟ್, ಪ್ರಸಾದ್ ನೇತ್ರಾಲಯ ಹಾಗೂ ನಗರಸಭೆ ಸಹಯೋಗದಲ್ಲಿ ಹಮ್ಮಿಕೊಂಡಿದ್ಧ ಉಚಿತ ಕಣ್ಣು ಹಾಗೂ ದಂತ ತಪಾಸಣಾ ಶಿಬಿರಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.


ಸಣ್ಣಪುಟ್ಟ ದೃಷ್ಟಿದೋಷ ಸಂಭವಿಸಿದರೆ ಶೀಘ್ರವೇ ವೈದ್ಯರ ಬಳಿ ತೆರಳಿ ಚಿಕಿತ್ಸೆ ಕೊಡಿಸುವುದು ಮುಖ್ಯ. ನಿರ್ಲಕ್ಷ್ಮ ವಹಿಸಿದರೆ ಶಾಶ್ವತವಾಗಿ ದೃಷ್ಟಿ ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಕನಿಷ್ಟ ಆರು ತಿಂಗಳಿಗೊಮ್ಮೆ ಕಣ್ಣು ತಪಾಸಣೆ ನಡೆಸಿ, ವ್ಯತ್ಯಾಸಗಳಿದ್ದಲ್ಲಿ ಸರಿಪಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.


ನೇಚರ್ ಕನ್ಸರ್‌ವೇಷನ್ ಟ್ರಸ್ಟ್ ಅಧ್ಯಕ್ಷ ಡಾ|| ಕೆ.ಸುಂದರಗೌಡ ಮಾತನಾಡಿ ವಿಪರೀತ ಮೊಬೈಲ್ ಸಹವಾಸದಿಂದ ದೃಷ್ಟಿದೋಷವು ಬಾಲ್ಯದಿಂದಲೇ ಆರಂಭವಾಗಿ ಯೌವ್ವನದೊತ್ತಿಗೆ ಯುವಕರು ಕಣ್ಣಿನ ದೋಷಕ್ಕೆ ಸಿಲುಕಿ ಪರದಾಡುವ ಸನ್ನಿವೇಶ ಎದುರಾಗುತ್ತಿದೆ ಎಂದು ಹೇಳಿದರು.


ಹಿರಿಯ ಕಾಲಘಟ್ಟದಲ್ಲಿ ಕನಿಷ್ಟ ೫೦ರ ವಯಸ್ಸಿನ ಆಸುಪಾಸಿನ ಅಂತರದಲ್ಲಿ ದೃಷ್ಟಿದೋಶ ಎಂಬುದು ಸಾಮಾನ್ಯವಾಗಿತ್ತು. ಆದರೀಗ ಪ್ರಾಥಮಿಕ ಶಾಲಾ ಹಂತದಲ್ಲೇ ಮಕ್ಕಳಿಗೆ ದೃಷ್ಟಿದೋಷ ಕಾಡುತ್ತಿದೆ. ಹೀಗಾಗಿ ಪಾಲಕರು ಮೊಬೈಲ್ ಅಥವಾ ಟಿವಿ ಹೊರತಾಗಿ ಪಠ್ಯ, ಕ್ರೀಡಾ ಚಟುವಟಿಕೆಗೆ ಮಕ್ಕಳನ್ನು ತೊಡಗಿಸಬೇಕು ಎಂದು ಕಿವಿಮಾತು ಹೇಳಿದರು.

ಎರಡ್ಮೂರು ವರ್ಷಗಳ ಮಕ್ಕಳಿಗೆ, ತಾಯದಿಂದಿರು ರಗಳೆ ತಪ್ಪಿಸಲು ಮೊಬೈಲ್ ನೀಡಿ ಸುಮ್ಮನಾಗಿಸು ತ್ತಾರೆ. ಆದರೆ ಈ ಅಭ್ಯಾಸವು ಮಕ್ಕಳಿಗೆ ಆಗಾಧವಾಗಿ ಹರಡಿ, ಅರ್ಧದಿನವು ಬಿಡದಂತೆ ದೊಡ್ಡ ಚಟವಾ ಗಿ ಬದಲಾಗುತ್ತದೆ. ಹೀಗಾಗಿ ಅಜ್ಜ-ಅಜ್ಜಿಯರ ಜೊತೆಗಿನ ಒಡನಾಟ ಬೆಳೆಸಿದರೆ ಆರೋಗ್ಯ ಪೂರ್ಣ ಮಗು ವಾಗಲು ಸಾಧ್ಯ ಎಂದರು.

ಇದೇ ವೇಳೆ ತಪಾಸಣಾ ಶಿಬಿರದಲ್ಲಿ ಸುಮಾರು 25ಕ್ಕೂ ಹೆಚ್ಚು ಮಂದಿ ಭಾಗವಹಿಸಿ ತಪಾಸಣೆಗೆ ಒಳ ಗಾದರು. ಕಾರ್ಯಕ್ರಮಕ್ಕೂ ಮುನ್ನ ಮುಂಜಾನೆ ಕುವೆಂಪು ನಗರದಲ್ಲಿ ನಗರಸಭೆ ಅಧ್ಯಕ್ಷರ ನೇತೃತ್ವದಲ್ಲಿ ಸ್ವಚ್ಚತಾ ಅಭಿಯಾನ ನಡೆಸಲಾಯಿತು. ಈ ಸಂದರ್ಭದಲ್ಲಿ ವಿಲೀಯಂ ಪಿರೇರಾ, ವೈದ್ಯರು, ಸಿಬ್ಬಂದಿಗಳು ಹಾಜರಿದ್ದರು.

-ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?