ಚಿಕ್ಕಮಗಳೂರು-ಪರಭಾಷೆ ವ್ಯಾಮೋಹಕ್ಕೆ ಒಳಗಾಗದ ಏಕೈಕ ನಟ ಡಾ|| ರಾಜ್‌ಕುಮಾರ್-ಡಾ|| ಜೆ.ಪಿ.ಕೃಷ್ಣೇ ಗೌಡ

ಚಿಕ್ಕಮಗಳೂರು:– ಪರಭಾಷೆ ಚಿತ್ರಗಳಲ್ಲಿ ಹಲವಾರು ಅವಕಾಶಗಳಿದ್ದರೂ, ವ್ಯಾಮೋಹಕ್ಕೆ ಒಳಗಾಗದ ಡಾ|| ರಾಜ್‌ಕುಮಾರ್ ಸಂಪೂರ್ಣವಾಗಿ ಕನ್ನಡ ಚಿತ್ರಗಳಲ್ಲಿ ನಟಿಸುವ ಮೂಲಕ ಕನ್ನಡಾಂಬೆಯ ಸೇವೆಗೆ ಮುಡಿಪಾದವರು ಎಂದು ಆಶಾಕಿರಣ ಅಂಧಮಕ್ಕಳ ಪಾಠಶಾಲೆ ಸಂಸ್ಥಾಪಕ ಡಾ|| ಜೆ.ಪಿ.ಕೃಷ್ಣೇ ಗೌಡ ಹೇಳಿದರು.

ನಗರದ ಬಸವನಹಳ್ಳಿ ಮುಖ್ಯರಸ್ತೆಯ ರಾಜ್‌ಸ್ಟುಡೀಯೋ ಮುಂಭಾಗದಲ್ಲಿ ಏರ್ಪಡಿಸಿದ್ದ ಕನ್ನಡ ಕಂಠೀರವ ಡಾ|| ರಾಜ್‌ಕುಮಾರ್ 97ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಹಾಗೂ ಕೇಕ್ ಕತ್ತರಿಸುವ ಮೂಲಕ ಅವರು ಮಾತನಾಡಿದರು.
ಕನ್ನಡ ಭಾಷೆಯಲ್ಲಿ ಸುಮಾರು ಎರಡನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದವರು. ತದನಂತರ ಗಾಯನ ಕ್ಷೇತ್ರಕ್ಕೂ ಕಾಲಿರಿಸಿದ ಡಾ|| ರಾಜ್‌ರವರು, ತಮ್ಮದೇ ಅದ್ಬುತ ಕಂಠದಿಂದ ಇಡೀ ಭಾರತೀಯ ಚಿತ್ರಲೋಕವನ್ನು ಬೆರಾಗಿಸಿತ್ತು. ನಾದಮಯ ಚಿತ್ರಗೀತೆಗೆ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಗಳಿಸಿಕೊಂಡ ಕೀರ್ತಿ ಮೊಟ್ಟಮೊದಲು ಅವರಿಗೆ ಸಲ್ಲುತ್ತದೆ ಎಂದರು.

ಬೇಡರ ಕಣ್ಣಪ್ಪ ಚಿತ್ರದಿಂದ ಕನ್ನಡಕ್ಕೆ ಪಾದಾರ್ಪಣೆ ಮಾಡಿದ ಡಾ|| ರಾಜ್‌ಕುಮಾರ್ ಪ್ರತಿಯೊಂದು ಚಿತ್ರಗಳಲ್ಲಿ ತಮ್ಮದೇ ಶೈಲಿಯಲ್ಲಿ ಪಾತ್ರನಿರ್ವಹಿಸಿ ಸಮಾಜಕ್ಕೆ ಮಾದರಿಯಾವರು. ಅಲ್ಲದೇ ಪ್ರಪ್ರಥಮವಾಗಿ ಏಳು ಭಾಷೆಗಳಲ್ಲಿ ಭಾಷಾಂತರಗೊಂಡ ಡಾ|| ರಾಜ್‌ನವರ ಚಿತ್ರ ಮೊದಲೆಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಅಲ್ಲದೇ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ ಎಂದರು.

ಕನ್ನಡಪೂಜಾರಿ ಹಿರೇಮಗಳೂರು ಕಣ್ಣನ್ ಮಾತನಾಡಿ ಡಾ|| ರಾಜ್‌ಕುಮಾರ್ ಎಂದರೆ ವಿನಯ, ವಿಧೇಯತೆ ಹಾಗೂ ವೈಖರಿಗೆ ಭೂಷಣದಂತೆ. ಹಳೇಗನ್ನಡ, ಹೊಸಗನ್ನಡ ಹಾಗೂ ವರ್ತಮಾನದ ಕನ್ನಡ ವನ್ನು ಉಚ್ಚಾರಿಸುವ ಹಾಗೂ ನಡವಳಿಕೆ ವಿಸ್ಮಯವಾಗಿತ್ತು. ಮಿಗಿಲಾಗಿ 70ನೇ ವಯಸ್ಸಿನಲ್ಲೂ ಇಪ್ಪತ್ತರ ಹರೆ ಯನಂತೆ ಎಲ್ಲರನ್ನು ನಗಿಸುವ ನಟನಾ ಸಾಮರ್ಥ್ಯ ಹೊಂದಿದ್ದರು ಎಂದರು.

ಸರಳ, ಸಜ್ಜನಿಕೆಯ ಗುಣ ಅಳವಡಿಸಿಕೊಂಡಿದ್ಧ ಡಾ|| ರಾಜ್‌ಕುಮಾರ್ ಕನ್ನಡನಾಡಿನ ಅತಿದೊಡ್ಡ ಆಸ್ತಿ. ನಿರ್ಮಾಪಕರು, ನಿರ್ದೇಶಕರು, ಸಂಗೀತ ರಚನೆಕಾರರ ನಡುವಿನ ಒಡನಾಟ ಅದ್ಬುತವಾಗಿತ್ತು. ಎಲ್ಲರೊಂದಿ ಗೆ ಸ್ನೇಹ, ಪ್ರೀತಿವಿಶ್ವಾಸದಿಂದ ಮಾತನಾಡುವ ಬಾಂಧವ್ಯ ಹುಟ್ಟಿನಿಂದಲೇ ರೂಢಿಸಿಕೊಂಡಿದ್ಧ ಅವರ ನೆನ ಪುಗಳು ಎಂದಿಗೂ ಸಾವಿಲ್ಲ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ‌, ನಾಡು ಕಂಡ ಅಪ್ರತಿಮ ಕಲಾವಿದ ಎಂದರೆ ಡಾ|| ರಾಜ್‌ಕುಮಾರ್. ಮಕ್ಕಳು, ಮೊಮ್ಮಕ್ಕಳು ಇಂದಿಗೂ ಕಲಾದೇವಿಯ ಸೇವೆಯಲ್ಲಿ ನಿರತರಾಗಿರುವುದು ಸಾ ಮಾನ್ಯವಾದ ಮಾತಲ್ಲ. ಅನೇಕ ದಶಕಗಳಿಂದ ಜನತೆಯ ಭಾವನೆ, ಸಂತೋಷ ಹಾಗೂ ದುಃಖವನ್ನು ಮರಿ ಸುವಂತ ಸೇವೆಯಲ್ಲಿ ತೊಡಗಿರುವುದು ಹೆಮ್ಮೆಯ ಸಂಗತಿ ಎಂದರು.

ಸಮಾರಂಭದ ಆಯೋಜಕ, ಗಾಯಕ, ಅಭಿಮಾನಿ ಎ.ಎನ್.ಮೂರ್ತಿ ಮಾತನಾಡಿ ಚಲನಚಿತ್ರಗಳಲ್ಲಿ ನಟಿಸಿ ಮೊಟ್ಟಮೊದಲು ಅಭಿಮಾನಿಗಳನ್ನು ದೇವರೆಂದು ಭಾವಿಸಿ, ಅಪ್ಪಿಕೊಂಡಿರುವುದು ಹಾಗೂ ನಿರ್ಮಾ ಪಕರನ್ನು ಅನ್ನದಾತರೆಂದು ವ್ಯಾಖ್ಯಾನಿಸುವ ಏಕೈಕ ನಟ ಡಾ|| ರಾಜ್‌ಕುಮಾರ್ ಎಂದ ಅವರು ಸತತ ಮೂ ರು ದಶಕಗಳಿಂದ ಜನ್ಮದಿನವನ್ನು ಆಚರಿಸಲಾಗುತ್ತಿದೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಕಾಶ್ಮೀರದಲ್ಲಿ ಉಗ್ರಗ್ರಾಮಿಗಳ ಗುಂಡೇಟಿಗೆ ಬಲಿಯಾದ ಕನ್ನಡಿಗರಿಗೆ ಶ್ರದ್ದಾಂಜಲಿ ಸಲ್ಲಿಸಿ ಮೌನಾಚರಣೆ ನಡೆಸಲಾಯಿತು. ಬಳಿಕ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಿಲನ್ ಶಿವಪ್ಪ, ಜೆ.ಪಿ.ಕೃಷ್ಣೇಗೌಡ, ಪಿ.ಸಿ.ರಾಜೇಗೌಡ ಹಾಗೂ ಸೂರಿ ಶ್ರೀನಿವಾಸ್ ಅವರಿಗೆ ನೆನಪಿನ ಕಾಣಿಕೆ ಗೌರವಿಸಲಾ ಯಿತು. ಡಾ|| ರಾಜ್ ಮೊಮ್ಮಗ ಷಣ್ಮುಖ ಗೋವಿಂದರಾಜ್ ದೂರವಾಣಿ ಕರೆಮಾಡಿ ಎ.ಎನ್.ಮೂರ್ತಿ ಹಾಗೂ ಅಭಿಮಾನಿಗಳಿಗೆ ಶುಭ ಕೋರಿದರು.

ಈ ಸಂದರ್ಭದಲ್ಲಿ ಜೈಕನ್ನಡಾಂಬೆ ಬಳಗದ ಸದಸ್ಯರು, ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ವಕೀಲ ವಿ.ಕೆ.ರಘು, ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ಡಾ|| ಚಂದ್ರ ಶೇಖರ್‌ಸರ್ಜಾ, ಪತ್ರಕರ್ತರಾದ ಅನಿಲ್ ಆನಂದ್, ರಾಜೇಶ್, ಗೋಪಿ, ಉಮೇಶ್, ಛಾಯಾಗ್ರಾಹಕ ಎ. ಎನ್.ಪ್ರಸನ್ನ, ಶಶಿ, ಉಮಾಶಂಕರ್, ಕಸಾಪ ನಗರಾಧ್ಯಕ್ಷ ಸಚಿನ್ ಸಿಂಗ್, ಶಿವರಾಜ್ ಮತ್ತಿತರರು ಹಾಜ ರಿದ್ದರು. ನಂತರ ಎ.ಎನ್.ಮೂರ್ತಿ, ವಿ.ಕೆ.ರಘು, ಚಂದ್ರಶೇಖರ್ ಸರ್ಜಾ ಗಾಯನ ನಡೆಸಿಕೊಟ್ಟರು.

  • ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?