ಚಿಕ್ಕಮಗಳೂರು-ಒತ್ತಡದಿಂದ-ಹೊರ-ಬರಲು-ಕ್ರೀಡೆಗಳು-ಸಹಕಾರಿ-ಕೃಷ್ಣೇಗೌಡ


ಚಿಕ್ಕಮಗಳೂರು-ವೈದ್ಯಕೀಯ ಕ್ಷೇತ್ರದಲ್ಲಿ ಪ್ರತಿದಿನವು ಒತ್ತಡದಿಂದ ಕಾರ್ಯನಿರ್ವ ಹಿಸುವ ಸಿಬ್ಬಂದಿಗಳಿಗೆ ಕ್ರೀಡಾ ಮನೋಭಾವ ಬೆಳೆಸಲು ಪಂದ್ಯಾವಳಿ ಆಯೋಜಿಸಿರುವುದು ಉತ್ತಮ ಬೆಳವಣಿಗೆ ಎಂದು ಆಶಾಕಿರಣ ಶಾಲೆ ಸಂಸ್ಥಾಪಕ ಡಾ|| ಜೆ.ಪಿ.ಕೃಷ್ಣೇಗೌಡ ಹೇಳಿದರು.

ನಗರದ ರಾಮನಹಳ್ಳಿ ಸಮೀಪ ಪೊಲೀಸ್ ಮೈದಾನದಲ್ಲಿ ಸಾಯಿ ಅಮೃತ್ ಹೆಲ್ತ್ಕೇರ್, ಸ್ಪರ್ಶ ಆಸ್ಪತ್ರೆ ಹಾಗೂ ವಿವಿಧ ಸಂಸ್ಥೆಗಳ ಸಹಭಾಗಿತ್ವದಲ್ಲಿ ಏರ್ಪಡಿಸಿದ್ಧ ಕ್ರಿಕೇಟ್ ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ಭಾನುವಾರ ಸಂಜೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ವೈದ್ಯಕೀಯ ಲೋಕ ಸುಲಭದ ಮಾತಲ್ಲ. ರೋಗಿಗಳ ಗುಣಮುಖರಾಗಿ ಸಂರಕ್ಷಿಸುವ ಕಾರ್ಯ ಮಹ ತ್ತರವಾದದು. ಒತ್ತಡ, ಜಂಜಾಟ ಹಾಗೂ ಮಾನಸಿಕವಾಗಿ ಕುಗ್ಗುವ ಸಾಧ್ಯತೆಯಿದೆ. ಹೀಗಾಗಿ ಮನಸ್ಸನ್ನು ಕೊಂಚ ಹಗುರಗೊಳಿಸಲು ಕ್ರೀಡೆಗಳಲ್ಲಿ ಭಾಗವಹಿಸಿದರೆ ದೈನಂದಿನ ವೃತ್ತಿ ಒತ್ತಡಕ್ಕೆ ಪರಿಹಾರ ಸಿಗಲಿದೆ ಎಂದು ಹೇಳಿದರು.

ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕ್ರಿಕೇಟ್ ಅತ್ಯಂತ ಪ್ರಸಿದ್ಧಿ ಪಡೆದುಕೊಂಡಿದೆ. ಅಲ್ಲದೇ ಇಡೀ ವಿಶ್ವದಲ್ಲೇ ಭಾರತೀಯ ಕ್ರಿಕೇಟ್ ಅತ್ಯಂತ ಶ್ರೀಮಂತಿಕೆ ಹೊಂದಿದೆ ಎಂದ ಅವರು ಪಂದ್ಯಾವಳಿ ಗೆಲುವುದೇ ಗುರಿಯಾಗಬಾರದು. ಮುಕ್ತವಾಗಿ ಆಟವಾಡಿ ಎಲ್ಲರೊಂದಿಗೆ ಪರಸ್ಪರ ಬೆರೆತಾಗ ಮಾತ್ರ ಪಂದ್ಯಾ ವಳಿಗೆ ನೈಜವಾಗಿ ಅರ್ಥ ಬರಲಿದೆ ಎಂದು ತಿಳಿಸಿದರು.

ಪಂದ್ಯಾವಳಿ ಆಯೋಜಕ ಡಾ|| ಚಂದ್ರಶೇಖರ್ ಸರ್ಜಾ ಮಾತನಾಡಿ ಎರಡು ದಿನಗಳ ಕಾಲ ಆಯೋ ಜಿಸಿದ್ಧ ಪಂದ್ಯಾವಳಿಯಲ್ಲಿ ಅಂತಿಮವಾಗಿ ಪಿಕ್ಸಿಲ್ ಸ್ಪೆಷರ್ ಮತ್ತು ಇವಿಂಗ್ ಹೀರೋಸ್ ಹಣಾಹಣಿಗೆ ಮುಂ ದಾದವು. ಮೊದಲ ಬ್ಯಾಟಿಂಗ್ ಆರಂಭಿಸಿದ ಪಿಕ್ಸಿಲ್ ೫೮ ರನ್‌ಗಳನ್ನು ಕಲೆಹಾಕಿತು.

ಇದನ್ನು ಬೆನ್ನಟ್ಟಿದ ಇವಿಂಗ್ ಹೀರೋಸ್ ೩೫ ರನ್ ಕಲೆಹಾಕಿದ ಕಾರಣ ಪಿಕ್ಸಿಲ್ ಸ್ಪೆಷರ್ ವಿಜೇತ ತಂಡ ವಾಗಿ ಹೊರಹೊಮ್ಮಿತು ಎಂದರು. ಮಹಿಳಾ ಥೋಬಾಲ್ ಪಂದ್ಯಾವಳಿಯಲ್ಲಿ ಮೊದಲ ಸ್ಥಾನ ಆಶ್ರಯ ಆಸ್ಪತ್ರೆ ಪಡೆದುಕೊಂಡರೆ, ಎರಡನೇ ಸ್ಥಾನವನ್ನು ಕೆ.ಆರ್.ಎಸ್. ಆಸ್ಪತ್ರೆಗೆ ಧಕ್ಕಿತು.

ಕನ್ನಡ ರಾಜ್ಯೋತ್ಸವ ಪುರಸ್ಕೃತ ಎ.ಎನ್.ಮೂರ್ತಿ ಮಾತನಾಡಿ ವರ್ಷಪೂರ್ತಿ ವೈದ್ಯಕೀಯ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ರಜೆಯಿಲ್ಲದೇ ಕರ್ತವ್ಯ ನಿರ್ವಹಿಸುವ ಕ್ಷೇತ್ರ. ಜೊತೆಗೆ ಅಂಬುಲೆನ್ಸ್ ಚಾಲಕರಂ ತೂ ದಿನದ 24 ಗಂಟೆಗಳ ಸೇವೆ ಒದಗಿಸುತ್ತಿರುವುದು ಸಾಮಾನ್ಯವಾದ ಮಾತಲ್ಲ. ಹೀಗಾಗಿ ವೈದ್ಯಕೀಯ ಸಿಬ್ಬಂದಿಗಳಿಗೆ ಕನಿಷ್ಟ 6ತಿಂಗಳಿಗೊಮ್ಮೆ ಕ್ರೀಡಾಕೂಟ ಆಯೋಜಿಸಬೇಕು ಎಂದು ಹೇಳಿದರು.


ಈ ಸಂದರ್ಭದಲ್ಲಿ ವಕೀಲ ವಿ.ಕೆ.ರಘು, ಸಾಯಿ ಅಮೃತ ಹೆಲ್ತ್ಕೇರ್‌ನ ಡಾ|| ನಿತಿನ್ ಬಂಕಪುರ, ವೈದ್ಯ ರಾದ ಡಾ|| ಗೀತಾ, ಡಾ|| ಕಾರ್ತೀಕ್, ಡಾ|| ವಿನಯ್ ಹಾಗೂ ವಿವಿಧ ತಂಡದ ಆಟಗಾರರು ಉಪಸ್ಥಿತರಿ ದ್ದರು.

  • ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?