ಚಿಕ್ಕಮಗಳೂರು-ವಿಧಾನಸೌಧ-ಚಲೋ-ಪಾದಯಾತ್ರೆಗೆ-ಕರವೇ- ಕಾರ್ಯಕರ್ತರು-ಭಾಗಿ

ಚಿಕ್ಕಮಗಳೂರು – ಮೇಕೆದಾಟು ಅಣೆಕಟ್ಟು ನಿರ್ಮಾಣದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಉದಾಸೀನತೆ ಖಂಡಿಸಿ ಮಾ.೨೧ ರಂದು ಹಮ್ಮಿಕೊಂಡಿರುವ ವಿಧಾನಸೌಧ ಚಲೋ ಪಾದ ಯಾತ್ರೆಗೆ ಜಿಲ್ಲೆಯಿಂದ 100 ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಕರವೇ ಜಿಲ್ಲಾ ಉಸ್ತು ವಾರಿ ಅಧ್ಯಕ್ಷ ದಿನೇಶ್ ಶಿವಪುರ ತಿಳಿಸಿದರು.


ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಮಾ.21 ರಂದು ರಾಮನಗರ ಜಿಲ್ಲೆಯಿಂದ ವಿಧಾನಸೌಧಗೆ ಹಮ್ಮಿಕೊಂಡಿರುವ ಎರಡು ದಿನದ ಪಾ ದಯಾತ್ರೆಗೆ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಕಾರ್ಯಕರ್ತರು ಭಾಗವಹಿಸಿ ರಾಜ್ಯಾಧ್ಯಕ್ಷ ಪ್ರವೀಣ್‌ಶೆಟ್ಟಿ ಅವರ ಕೈಬಲಪಡಿಸಲಾಗುವುದು ಎಂದು ಹೇಳಿದರು.


ಮೇಕೆದಾಟು ಯೋಜನೆಗೆ ಕೇಂದ್ರದಿಂದ ಅನುಮೋದನೆ ಕೊಡಿಸಲು ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವರು, ಸಂಸದರು ಶ್ರಮಿಸಬೇಕು. ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ನಿಯಂತ್ರಣಕ್ಕಾಗಿ ಐಟಿಬಿಟಿ, ಕಾರ್ಖಾನೆಗಳಲ್ಲಿ ಕನ್ನಡಿಗರನ್ನು ನೇಮಕ ಮಾಡಿಕೊಳ್ಳಬೇಕು. ಸರೋಜಿನಿ ಮಹಿಷಿ ವರದಿ ಜಾರಿಗೆ ತರಬೇಕು ಎಂಬ ಧ್ಯೇಯೋದ್ದೇಶದಿಂದ ರಾಮನಗರದಿಂದ ಪಾದಯಾತ್ರೆಗೆ ಚಾಲನೆ ನೀಡಲಾಗುತ್ತದೆ ಎಂದರು.


ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್, ಗೌರವಾಧ್ಯಕ್ಷ ರಾಜು, ತಾಲ್ಲೂಕು ಅಧ್ಯಕ್ಷ ಜೀವನ್, ಪ್ರ. ಕಾರ್ಯದರ್ಶಿ ಗಿರೀಶ್, ಮುಖಂಡರುಗಳಾದ ಹರ್ಷ ಉಪಸ್ಥಿತರಿದ್ದರು.

-‌ ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?