ಚಿಕ್ಕಮಗಳೂರು-ವಕ್ಫ್-ತಿದ್ದುಪಡಿ-ವಿರೋಧಿಸಿ-ಮಸೀದಿಗಳಲ್ಲಿ-ಮೌನ- ಪ್ರತಿಭಟನೆ


ಚಿಕ್ಕಮಗಳೂರು:- ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ನಗರದ ಷರೀಫ್ ಗಲ್ಲಿ ಮದೀನಾ ಮಸೀದಿ ಸೇರಿದಂತೆ ನಗರದ ೪೦ಕ್ಕೂ ಹೆಚ್ಚು ಮಸೀದಿ ಮುಂಭಾಗದಲ್ಲಿ ಕಮಿಟಿ ಸದಸ್ಯರುಗಳು ಕೈಗೆ ಕಪ್ಪುಪಟ್ಟಿ ಧರಿಸಿಕೊಂಡು ಶುಕ್ರವಾರ ಮೌನ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಕಿಸಾಲ್ ಸೆಲ್ ರಾಜ್ಯ ಸಂಚಾಲಕ ಸಿ.ಎನ್.ಅಕ್ಮಲ್ ಕೇಂದ್ರ ಸರ್ಕಾರ ದೇಶ ದ ಮೂಲ ನಿವಾಸಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯವೆಸಗಿದೆ. ಮೋದಿ ನೇತೃತ್ವದ ಕೇಂದ್ರ ಸರಕಾರ ಅಲ್ಪ ಸಂಖ್ಯಾತರ ಏಳಿಗೆಯನ್ನು ಹತ್ತಿಕ್ಕಲು ವಿವಿಧ ಕಾಯ್ದೆ, ಕಾನೂನುಗಳನ್ನು ಜಾರಿ ಮಾಡಲು ಹೊರಟಿದ್ದಾರೆ ಎಂದು ದೂರಿದರು.

ಕೇಂದ್ರ ಜಾರಿಗೆ ತರಲು ಮುಂದಾಗಿರುವ ವಕ್ಫ್ ತಿದ್ದುಪಡಿ ಮಸೂದೆಯಲ್ಲಿ ವಕ್ಫ್ಬೋರ್ಡ್ನ ಆಸ್ತಿ ಹಾಗೂ ದೇಶದ ಭವಿಷ್ಯಕ್ಕೆ ಅಪಾಯವನ್ನುಂಟು ಮಾಡಿದೆ. ವಕ್ಫ್ ಬೋರ್ಡ್ ಆಸ್ತಿಗಳ ವಿಚಾರದಲ್ಲಿ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಿ ಅಲ್ಪಸಂಖ್ಯಾತರ ಅಭಿವೃದ್ಧಿಯನ್ನು ತಡೆಯುವ ಹುನ್ನಾರ ಈ ಮಸೂದೆಯಲ್ಲಿದೆ ಎಂದು ಹೇಳಿದರು.

ವಕ್ಫ್ ತಿದ್ದುಪಡಿ ಮಸೂದೆ ಜಾರಿಯಾಗಲು ಬಿಡಬಾರದು, ಈ ಮಸೂದೆ ವಿರುದ್ಧ ಸಮುದಾಯದ ಜನತೆ ನಗರ ಸೇರಿದಂತೆ ದೇಶಾದ್ಯಂತ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸುತ್ತಿದ್ದರೂ ಕೇಂದ್ರ ಸರಕಾರ ಏಕ ಪಕ್ಷೀಯವಾಗಿ ಮಸೂದೆ ಜಾರಿಗೆ ಸಂಚು ರೂಪಿಸಿದೆ ಎಂದರು.
ಈ ದೇಶದ ಮುಸಲ್ಮಾನರು ಸ್ವಾತಂತ್ರ‍್ಯಕ್ಕಾಗಿ ಪ್ರಾಣ ನೀಡಿದ್ದಾರೆ. ಪ್ರಧಾನಿ ಮೋದಿ ಆಡಳಿತದಿಂದಾಗಿ ದೇಶದಲ್ಲಿ ದಲಿತರು, ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿವೆ. ದೇಶದ ಆರ್ಥಿಕ ಪ್ರಗತಿ ಕುಂಟಿತಗೊAಡಿದೆ. ಹಿಂದೂ-ಮುಸ್ಲೀA ಉತ್ತಮ ಸಂಬAಧವನ್ನು ಹಾಳುಗೆಡವುತ್ತಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಮದೀನಾ ಮಸೀದಿ ಕಮಿಟಿ ಅಧ್ಯಕ್ಷ ಅಸ್ಲಾಂ, ಉಪಾಧ್ಯಕ್ಷ ಇಬ್ರೋಜ್, ಕಾರ್ಯದರ್ಶಿ ಅಬ್ದುಲ್ ವಾಹೀದ್, ಸದಸ್ಯರಾದ ಅಸ್ಲಾಂ, ಏಜಾಜ್, ಶೋಯೆಬ್, ಮಜರ್, ಅಜೀಮ್, ರಿಯಾನ್ ಮತ್ತಿತರರು ಹಾಜರಿದ್ದರು.

  • ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?