ಚಿಕ್ಕಮಗಳೂರು :- ಜಾತಿ ಆಧಾರಿತ ತಾರತಮ್ಯದ ವಿರುದ್ಧ ಹೋರಾಡಲು ಮತ್ತು ಮಹಿಳೆ ಯರು ಮತ್ತು ಕೆಳಜಾತಿಗಳ ಹಕ್ಕುಗಳಿಗಾಗಿ ಪ್ರತಿಪಾದಿಸಲು ಜ್ಯೂತಿಬಾಫುಲೆ ತಮ್ಮ ಜೀವನವನ್ನು ಮುಡಿಪಾ ಗಿಟ್ಟರು ಎಂದು ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಹೇಳಿದರು.
ನಗರದ ಜಿಲ್ಲಾ ಬಿಎಸ್‌ಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ಧ ಜ್ಯೋತಿಬಾ ಪುಲೆ ಜಯಂತಿ ಕಾರ್ಯಕ್ರಮ ವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳಾ ಶಿಕ್ಷಣ ಮತ್ತು ಸಬಲೀಕರಣಕ್ಕಾಗಿ ನಡೆದ ಚಳವಳಿಯಲ್ಲಿ ಫುಲೆ ಪ್ರವರ್ತಕ ವ್ಯಕ್ತಿಯಾಗಿದ್ದರು. ಸಾಂಪ್ರದಾಯಿಕ ರೂಢಿಗಳನ್ನು ಮುರಿದು ಚಾಲ್ತಿಯಲ್ಲಿರುವ ಸಾಮಾಜಿಕ ಕ್ರಮವನ್ನು ಪ್ರಶ್ನಿಸುವ ಮೂಲಕ ಮೊದಲ ಬಾಲಕಿಯರ ಶಾಲೆಯನ್ನು ಸ್ಥಾಪಿಸಿದರು ಎಂದರು.
ಜ್ಯೋತಿಬಾ ಫುಲೆ ತಮ್ಮ ಕಾಲದ ದಬ್ಬಾಳಿಕೆಯ ಸಾಮಾಜಿಕ ರೂಢಿಗಳನ್ನು ಪ್ರಶ್ನಿಸಿದ ಕ್ರಾಂತಿಕಾರಿಯಾ ಗಿದ್ದರು. ಜಾತಿ ತಾರತಮ್ಯ ಮತ್ತು ಸಾಮಾಜಿಕ ಅಸಮಾನತೆಯಿಂದ ಪೀಡಿತವಾದ ಸಮಾಜದಲ್ಲಿ ಜನಿಸಿದ ಫುಲೆ, ಚಾಲ್ತಿಯಲ್ಲಿರುವ ಸಾಮಾಜಿಕ ರಚನೆಯಲ್ಲಿ ಅನ್ಯಾಯದ ವಿರುದ್ಧ ಹೋರಾಡಲು ತಮ್ಮ ಜೀವನವನ್ನು ಪಣಹಿಟ್ಟರು ಎಂದು ಹೇಳಿದರು.
ಅಜ್ಞಾನ ಮತ್ತು ಶೋಷಣೆಯ ಸಂಕೋಲೆಗಳಿಂದ ದಮನಿತ ಜನಸಾಮಾನ್ಯರನ್ನು ವಿಮೋಚನೆಗೊ ಳಿಸಲು ಶಿಕ್ಷಣವೇ ಪ್ರಮುಖ ಎಂದು ಫುಲೆ ದೃಢವಾಗಿ ನಂಬಿದ್ದರು. ಭಾರತದಲ್ಲಿ ಸಾರ್ವತ್ರಿಕ ಶಿಕ್ಷಣ ಮತ್ತು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಅಂತಹ ವಿಚಾರಗಳನ್ನು ಪರಿಗಣಿಸಲಾಗಿದ್ದ ಸಮಯದಲ್ಲಿ ಪತ್ನಿ ಸಾವಿತ್ರಿಬಾಯಿ ಫುಲೆ ಅವರೊಂದಿಗೆ ಚಳುವಳಿಯನ್ನು ಪ್ರಾರಂಭಿಸಿದರು ಎಂದರು.

ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ ಮಾತನಾಡಿ, ಫುಲೆಯವರ ಸಾಮಾಜಿಕ ಸಮಾನತೆಯ ಬದ್ಧತೆಯು ಶಿಕ್ಷಣವನ್ನು ಮೀರಿ ವಿಸ್ತರಿಸಿತು. ಜಾತಿ ವ್ಯವಸ್ಥೆಯನ್ನು ತೀವ್ರವಾಗಿ ವಿರೋಧಿಸಿದರು. ಅಂಚಿನಲ್ಲಿ ರುವ ಕೆಳಜಾತಿಗಳು ಉನ್ನತೀಕರಿಸಲು ಅವಿಶ್ರಾಂತವಾಗಿ ಶ್ರಮಿಸಿದ್ದರು. ಸಮಾಜದಲ್ಲಿ ಸರ್ವಸಮಾನರಂತೆ ಬಾಳಲು ಶಾಲೆ, ಗ್ರಂಥಾಲಯಗಳನ್ನು ತೆರೆದು ಆಸರೆ ಒದಗಿಸಿದರು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಎಸ್ಪಿ ಜಿಲ್ಲಾಧ್ಯಕ್ಷ ಸಿ.ಪರಮೇಶ್ವರ್ ದಲಿತ ಹೆಣ್ಣು ಮಕ್ಕಳಿಗೆ ಶಿಕ್ಷಣ ಎಂಬುದು ಕನಸಾಗಿದ್ಧ ಸಂದರ್ಭದಲ್ಲಿ ಹೂವಾಡಿಗರ ಸಮುದಾಯದ ಜನಿಸಿದರಾದರೂ ಜ್ಯೋತಿಭಾ ಪುಲೆ ಹೆಣ್ಣುಮಕ್ಕಳಿಗೆ ನಿಲುವು ತಾಳಿ ಶಿಕ್ಷಣ ಕೊಡಿಸಿದವರು. ಪ್ರಸ್ತುತ ಬಹುಜನ ಚಳುವಳಿ ಫುಲೆ, ಅಂಬೇಡ್ಕರ್ ಚಳುವಳಿಯೆಂದೇ ಪ್ರಸಿದ್ಧವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಎಸ್ಪಿ ಜಿಲ್ಲಾ ಸಂಯೋಜಕ ಕೆ.ಎಂ.ಗೋಪಾಲ, ಸಿ.ಎಂ.ಮಂಜಯ್ಯ, ಉಪಾಧ್ಯಕ್ಷೆ ಕೆ.ಎಸ್.ಮಂಜುಳಾ, ತಾಲ್ಲೂಕು ಅಧ್ಯಕ್ಷ ಹೆಚ್.ಕುಮಾರ್, ಪ್ರಧಾನ ಕಾರ್ಯದರ್ಶಿ ವಸಂತ್, ಮುಖಂಡರು ಗಳಾದ ಜಗದೀಶ್, ಬ.ಎಂ.ಶಂಕರ್, ಎಂ.ಬಾಬು, ವಾಹೀದ್, ಬಕ್ಕಿ ಮಂಜುನಾಥ್, ಪುಟ್ಟಸ್ವಾಮಿ ಇದ್ದರು.
- ಸುರೇಶ್ ಎನ್.