ಚಿಕ್ಕಮಗಳೂರು- ಕೃಷಿ-ಪರಿಕರಗಳ-ಸಂಘದ-ನೂತನ-ಕಚೇರಿ- ಉದ್ಘಾಟನೆ

ಚಿಕ್ಕಮಗಳೂರು-ಜಯನಗರ ಬಡಾವಣೆಯಲ್ಲಿ ನೂತನವಾಗಿ ಸ್ಥಾಪಿಸಿರುವ ಜಿಲ್ಲಾ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಕಚೇರಿಯನ್ನು ನಗರಸಭಾ ಸದಸ್ಯ ಎ.ಸಿ.ಕುಮಾರಗೌಡ ಉದ್ಘಾಟಿಸಿದರು.


ಬಳಿಕ ಮಾತನಾಡಿದ ಅವರು ಸಂಘಕ್ಕೆ ಸರ್ಕಾರದ ಎಸ್.ಆರ್.ರೇಟ್‌ನಲ್ಲಿ ನಿವೇಶನ ಒದಗಿಸಿಕೊ ಡುವ ಜೊತೆಗೆ ಮುಂದಿನ ದಿನಗಳಲ್ಲಿ ನಗರಸಭೆಯ ಎಲ್ಲಾ ಮೂಲಭೂತಗಳು ಸೌಕರ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.


ಈ ಸಂದರ್ಭದಲ್ಲಿ ಸಂಘದ ರಾಜ್ಯ ವಕ್ತಾರ ಹಿರೇನಲ್ಲೂರು ಶಿವು, ಜಿಲ್ಲಾ ಗೌರವಾಧ್ಯಕ್ಷ ಡಾ||ಮಹಾ ಬಲ, ಅಧ್ಯಕ್ಷ ಯೋಗೀಶ್ ಲಿಂಗದಹಳ್ಳಿ, ಕಾರ್ಯದರ್ಶಿ ಜಿ.ಸಿ.ಮನುಪ, ಉಪಾಧ್ಯಕ್ಷ ಉದಯ ಪೈ, ತಾಲೂ ಕು ಅಧ್ಯಕ್ಷ ಡಿ.ಟಿ.ತಿಮ್ಮಯ್ಯ, ಎಲ್ಲಾ ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು.

  • ಸುರೇಶ್ ಎನ್ , ಚಿಕ್ಕಮಗಳೂರು

Leave a Reply

Your email address will not be published. Required fields are marked *

× How can I help you?