ಚಿಕ್ಕಮಗಳೂರು:– ಹವ್ಯಾಸಿ ಓದುಗರರು, ಸಾಹಿತಿ ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯ ಲ್ಲಿ ಆಗಮಿಸುವ ನಗರ ಗ್ರಂಥಾಲಯಕ್ಕೆ ಮೂಲಸೌಕರ್ಯ ಪೂರೈಸಲು ಸಂಬAಧಿಸಿದ ಅಧಿಕಾರಿಗಳೊಟ್ಟಿಗೆ ಚರ್ಚಿಸುತ್ತೇನೆ ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಭರವಸೆ ನೀಡಿದರು.
ನಗರದ ಕೋಟೆ ಬಡಾವಣೆ ಸಮೀಪವಿರುವ ನಗರ ಕೇಂದ್ರ ಗ್ರಂಥಾಲಯಕ್ಕೆ ಶನಿವಾರ ಭೇಟಿ ಮಾಡಿ ಗ್ರಂಥಾಲಯ ಸುತ್ತಮುತ್ತಲಿನ ವಾತಾವರಣವನ್ನು ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಗ್ರಂಥಾಲಯ ಆರಂಭದಲ್ಲೇ ಸರಸ್ವತಿ ಭಾವಚಿತ್ರ, ಸ್ಪರ್ಧಾತ್ಮಕ ಪರೀಕ್ಷಾ ವಿದ್ಯಾರ್ಥಿಗಳು, ನೂರಾರು ಸಂ ಖ್ಯೆಯ ನಿತ್ಯ ಓದುಗರರಿಗೆ ಸುಸಜ್ಜಿತ ವ್ಯವಸ್ಥೆ ಹಾಗೂ ಹದಿನಾಲ್ಕು ವರ್ಷದೊಳಗಿನ ಮಕ್ಕ ಳಿಗೆ ಪುಟ್ಟ ಗ್ರಂಥಾ ಲಯ ವ್ಯವಸ್ಥೆ ನಿರ್ಮಿಸಿರುವುದನ್ನು ಪರಿಶೀಲಿಸಿ ಪ್ರಶಂಸೆ ವ್ಯಕ್ತಪಡಿಸಿದರು.
ಪ್ರತಿದಿನವು ಗ್ರಂಥಾಲಯಕ್ಕೆ ಓದುಗರರ ಸಂಖ್ಯೆ ಹೆಚ್ಚಳಗೊಂಡ ಕಾರಣ ಹಿಂಭಾಗದಲ್ಲೇ ವಿಶಾಲ ಜಾ ಗದಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದೆ. ಈ ಒಳಾಂಗಣಕ್ಕೆ ಪೀಠೋಪಕರಣ ಸೇರಿದಂತೆ ಮೂಲಭೂತ ಸೌಕರ್ಯ ಕೊರತೆಯಿದ್ದು ಸಂಬಂಧಿಸಿದ ಅಧಿಕಾರಿಗಳನ್ನು ಶೀಘ್ರವೇ ಸಂಪರ್ಕಿಸಿ ಸೌಲಭ್ಯ ಕಲ್ಪಿಸಲಾಗು ವುದು ಎಂದು ತಿಳಿಸಿದರು.

ಉಚಿತ ಡಿಜಿಟಲ್ ಗ್ರಂಥಾಲಯ, ಕವಿ ಹಾಗೂ ಹಿರಿಯ ನಾಗರೀಕರನ್ನು ಆಕರ್ಷಿಸುವ ಪುಸ್ತಕ ಗಳು, ನಿಯತಕಾಲಿಕೆಗಳ ವ್ಯವಸ್ಥೆ ಗ್ರಂಥಾಲಯ ಮಾಡಿದೆ. ಮಹಿಳೆಯರಿಗೆ ವಿಶ್ರಾಂತಿ ಕೊಠಡಿ, ಆಧುನಿಕ ವ್ಯವಸ್ಥೆಗೆ ಹೆಚ್ಚು ಒತ್ತು ನೀಡಿದೆ. ನಗರ ಹೃದಯಭಾಗದಲ್ಲಿ ಹಿನ್ನೆಲೆ ಸಾಕಷ್ಟು ಹವ್ಯಾಸಿ ಓದುರರು ಗ್ರಂಥಾಲಯಕ್ಕೆ ಭೇಟಿ ನೀಡುತ್ತಿರುವುದು ಖುಷಿಯ ಸಂಗತಿ ಎಂದು ಹೇಳಿದರು.
ಜಗದ ಕವಿ ಕುವೆಂಪು ಸಂಬAಧಿಸಿದ ಐತಿಹಾಸಿಕ ವಿಚಾರಧಾರೆಗಳನ್ನು ನೋಡುವ ಸಂಗ್ರಹಗಳಿವೆ. ಒಟ್ಟಾರೆ ಸಣ್ಣಮಟ್ಟಿನ ಕೊರತೆಗಳ ಹೊರತಾಗಿ ಗ್ರಂಥಾಲಯ ಸಂಪೂರ್ಣ ಅತ್ಯುಧುನಿಕತೆಯಿಂದ ಕೂಡಿದೆ. ಪುಸ್ತಕಗಳನ್ನು ಕೊಂಡು ಹೋಗುವ ಸಂಖ್ಯೆಗಿAತ, ಗ್ರಂಥಾಲಯಕ್ಕೆ ಸ್ವತಃ ಭೇಟಿ ನೀಡಿ ಓದುತ್ತಿರುವುದು ಗ್ರಂ ಥಾಲಯ ಬೆಳವಣಿಗೆಗೆ ಕಾರಣ ಎಂದರು.
ನಗರ ಕೇಂದ್ರ ಗ್ರಂಥಾಲಯಾಧಿಕಾರಿ ಉಮೇಶ್ ಮಾತನಾಡಿ ಹೊಸದಾಗಿ ನಿರ್ಮಾಣಗೊಂಡಿರುವ ಗ್ರಂಥಾಲಯ ಕಟ್ಟಡಕ್ಕೆ ಅಗತ್ಯವಿರುವ ಪೀಠೋಪಕರಣ, ಕಂಪ್ಯೂಟರ್, ಪುಸ್ತಕ ರ್ಯಾಕ್, ರೀಡಿಂಗ್ ಟೇಬಲ್, ಓದುಗರ ಕುಚಿ ಹಾಗೂ ಕಟ್ಟಡದ ಮೇಲ್ಬಾಗದಲ್ಲಿ ಹಂಚಿನ ಮಾಡು ನಿರ್ಮಿಸಿಕೊಡಬೇಕು ಎಂದು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಡವಂತಿ ಗ್ರಾ.ಪಂ. ಸದಸ್ಯ ವಿನೋದ್ ಬೊಗಸೆ, ನಗರ ಕೇಂದ್ರ ಗ್ರಂಥಾಲಯಾ ಧಿಕಾರಿ ಉಮೇಶ್, ಸಿಬ್ಬಂದಿಗಳಾದ ರಾಘವೇಂದ್ರ, ಲತಾ, ಸಿದ್ದಪ್ಪ ಮತ್ತಿತರರು ಹಾಜರಿದ್ದರು.
- ಸುರೇಶ್ ಎನ್.