ಚಿಕ್ಕಮಗಳೂರು-ಉಳ್ಳವರು, ಬಡವರು ಎನ್ನದೇ ಸರ್ವರಿಗೂ ಒಂದೇ ಎಂಬ ಕಾನೂ ನು ರೂಪಿಸಿ ಸಂವಿಧಾನ ರಚಿಸಿರುವ ಡಾ|| ಬಿ.ಆರ್.ಅಂಬೇಡ್ಕರ್ ಸರ್ವ ಜನಾಂಗಕ್ಕೂ ಆದರ್ಶಪುರುಷ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಗೌರವಾಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಹೇಳಿದರು.
ನಗರದ ವಿಜಯಪುರ ಸಮೀಪ ಆದಿಭೂತಪ್ಪ ದೇವಾಲಯ ಸಭಾಂಗಣದಲ್ಲಿ ತಾಲ್ಲೂಕು ಹಾಗೂ ನಗರ ಕಸಾಪ ಘಟಕದಿಂದ ಬಿ.ಆರ್.ಅಂಬೇಡ್ಕರ್ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ಧ ಭೀಮ ಮಹಾ ಯಾನ ಕಾರ್ಯಕ್ರಮವನ್ನು ಸೋಮವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟçದ ಕೋಟಿಗಟ್ಟಲೇ ಜನಸಂಖ್ಯೆ ಸಂವಿಧಾನದ ಫಲಾನುಭವಿಗಳು ಎಂದೇಳು ಎರಡು ಮಾತಿಲ್ಲ. ಅಂಬೇಡ್ಕರ್ ಕೇವಲ ಒಂದು ವರ್ಗಕ್ಕೆ ಮೀಸಲಾತಿ ಒದಗಿಸಿಲ್ಲ, ಸರ್ವರಿಗೂ ಸಮಾನತೆ ಎಂಬ ನಿಟ್ಟಿನಲ್ಲಿ ಸಂವಿಧಾನ ರಚಿಸಿದ ಕಾರಣವೇ ಭಾರತದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯವಾಗಿದೆ ಎಂದು ಹೇಳಿದರು.
ಇತ್ತೀಚೆಗೆ ಕೆಲವರು ಅಂಬೇಡ್ಕರ್ ಒಂದು ಸಮಾಜಕ್ಕೆಂದು ಬಿಂಬಿಸಲಾಗುತ್ತಿದೆ. ನಿಜವಾಗಿ ಸಂವಿಧಾನ ಜಾತಿ, ಜನಾಂಗಕ್ಕೆ ಸೀಮಿತವಾಗಿಲ್ಲ. ಪ್ರತಿ ಸಮುದಾಯಕ್ಕೆ ಸುಖದಿಂದ ಬಾಳಲು ಅನುವು ಮಾಡಿಕೊಟ್ಟಿದೆ. ಹೀಗಾಗಿ ಅಂಭೇಡ್ಕರ್ ವಿಚಾರಧಾರೆ ಪ್ರತಿಮನೆಗಳಿಗೂ ತಲುಪಿಸಿದರೆ ನಿಜವಾದ ಅರ್ಥ ಬರಲಿದೆ ಎಂದರು.
ದೇಶದಲ್ಲಿ ಪಂಚಾಯಿತಿಯಿಂದ ಪಾರ್ಲಿಮೆಂಟ್‌ವರೆಗೆ ಚುನಾಯಿತರಾಗಿ ಅಧಿಕಾರ ಪಡೆಯಲು ಸಂವಿ ಧಾನ ಗ್ರಂಥವೇ ಮೂಲಬೇರು. ಮಹಿಳೆಯರಿಗೆ ಸ್ಥಾನಮಾನ, ಆಡಳಿತದ ಒಂದು ಭಾಗವಾಗಿ ಸಮಾಜದ ಸುಧಾರಣೆ, ಚಟುವಟಿಕೆಗಳಲ್ಲಿ ಭಾಗವಹಿಸಲು ಅಂಬೇಡ್ಕರ್ ನೀಡಿದಂಥ ಸಂವಿಧಾನದ ಹಕ್ಕುಗಳೇ ಮುಖ್ಯ ಕಾರಣ ಎಂದು ಹೇಳಿದರು.

ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಶೈಕ್ಷಣಿಕ ಹಾಗೂ ರಾಜಕೀಯವಾಗಿ ನೆಲೆಗಟ್ಟಿನಲ್ಲಿ ನಿಲ್ಲಲು ಅಂಬೇಡ್ಕರ್ ಮತದಾನದ ಬಳುವಳಿಯೇ ಕಾರಣ. ವಿಶೇಷವಾಗಿ ಮಕ್ಕಳು ಅಂಬೇಡ್ಕರ್ ಜೀವನ ಚರಿತ್ರೆ ಓದಿ ಮಹಾಯಾನದಲ್ಲಿ ನಡೆದ ಸತ್ಯಾಸತ್ಯತೆ ಸಂಗತಿಗಳನ್ನು ಅರಿತರೆ ಬದುಕಿಗೆ ದೊಡ್ಡ ಪಾಠವಾಗಲಿದೆ ಎಂದು ತಿಳಿಸಿದರು.
ಯುರೇಕಾ ಅಕಾಡೆಮಿ ಸಂಸ್ಥಾಪಕ ದೀಪಕ್‌ದೊಡ್ಡಯ್ಯ ಮಾತನಾಡಿ, ಅಂಬೇಡ್ಕರ್ ದೇಶದಲ್ಲಿ ಹುಟ್ಟ ಲಿಲ್ಲ ಅಥವಾ ಸಂವಿಧಾನ ರಚಿಸದಿದ್ದರೆ ದೇಶದ ಪರಿಸ್ಥಿತಿ, ದೀನದಲಿತರ ಹಾಗೂ ಆರ್ಥಿಕ ಸ್ಥಿತಿ ಏನಾಗಲಿದೆ ಎಂದು ಒಮ್ಮೆ ಅವಲೋಕಿಸಬೇಕು. ಇದನ್ನರಿತ ವಿಶ್ವಸಂಸ್ಥೆ ಅಂಬೇಡ್ಕರ್ ಜನ್ಮದಿನವನ್ನು ವಿಶ್ವಜ್ಞಾನದ ದಿನ ವೆಂದು ಘೋಷಿಸಿ ಗೌರವ ಸಮರ್ಪಿಸಿದೆ ಎಂದರು.
ಲೇಖಕಿಯರ ಸಂಘದ ಅಧ್ಯಕ್ಷೆ ಅಜ್ಜಂಪುರ ಎಸ್.ಶೃತಿ ‘ಅಂಬೇಡ್ಕರ್’ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ ಕಡುಬಡತನ, ಸಾಕಷ್ಟು ನೋವಿಗಳಿಂದ ಬೆಳೆದ ಅಂಬೇಡ್ಕರ್ ಹಾದಿ ಸುಗಮವಾಗಿರಲಿಲ್ಲ.
ಪ್ರತಿಯೊಂದು ಹೆಜ್ಜೆಗೂ ಅಪಮಾನ, ಅಗೌರವ ಕಾಲತುದಿಯಲ್ಲಿತ್ತು. ಎಲ್ಲವನ್ನೂ ಸಹಿಸಿ ಒಂದೊಂದೇ ಹೆಜ್ಜೆ ಯಿಟ್ಟ ಪರಿಣಾಮ ಇಂದು ವಿಶ್ವದ ದೊಡ್ಡಜ್ಞಾನಿಯಾಗಿ ಹೊರಹೊಮ್ಮಲು ಸಾಧ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕಸಾಪ ನಗರಾಧ್ಯಕ್ಷ ಸಚಿನ್‌ಸಿಂಗ್ ದೇಶದ ಸದೃಢ ಭವಿ ಷ್ಯ ರೂಪಿಸುವಲ್ಲಿ ಅಂಬೇಡ್ಕರ್ ಕೊಡುಗೆ ಅಪಾರವಾಗಿದೆ. ನೇರ ನಡೆ, ನುಡಿಯ ಸ್ವಭಾವ ಮೈಗೂಡಿಕೊಂಡ ಹಿನ್ನೆಲೆ ಬಡವರು, ಶೋಷಿತರ ಬದುಕಿಗೆ ಸೂರ್ಯನಂತೆ ಪ್ರಕಾಶಿಸಲು ಕಾರಣವಾಗಿದೆ ಎಂದರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸೂರಿಶ್ರೀನಿವಾಸ್, ಗೌರವ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ತಾಲ್ಲೂಕು ಅಧ್ಯಕ್ಷ ಮಾವಿನಕೆರೆ ದಯಾನಂದ್, ದಾಸ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಿರೇನಲ್ಲೂರು ಶ್ರೀನಿವಾಸ್, ಎಸ್ಸಿ ಎಸ್ಟಿ ದೌರ್ಜನ್ಯ ವಿರೋಧಿ ಸಮಿತಿ ಸದಸ್ಯ ಹುಣಸೇಮಕ್ಕಿ ಲಕ್ಷ್ಮ, ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌ ಡ, ಬಿಜಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ಯುತ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಎನ್.ಆದಿಲ್, ಅಂಬಳೆ ಹೋಬಳಿ ಅಧ್ಯಕ್ಷ ಮಾಸ್ತೇಗೌಡ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ರೂಪ ನಾಯಕ್ ನಿರೂಪಿಸಿದರು. ರವಿ ಕಳವಾಸೆ ಸ್ವಾಗತಿಸಿದರು. ಸಿ.ಎಂ.ಜ್ಯೋತಿ ವಂದಿಸಿದರು.
– ಸುರೇಶ್ ಎನ್.