ಚಿಕ್ಕಮಗಳೂರು:- ಅಂಬೇಡ್ಕರ್ ದೇಶದ ಭದ್ರಭವಿಷ್ಯ ರೂಪಿಸಿದ ಮಹಾತ್ಮರು. ಮತದಾ ನ, ಸ್ತ್ರೀ ಸಾಮಾನ್ಯರ ಹಕ್ಕು ಹಾಗೂ ಸರ್ವರು ಸಮಾನರೆಂಬ ಕಾನೂನು ರಚಿಸಿ ಶೋಷಿತರ ಬದುಕಿಗೆ ದಾರಿ ದೀಪವಾದವರು ಎಂದು ಬಿಜೆಪಿ ಮುಖಂಡ ದೀಪಕ್‌ದೊಡ್ಡಯ್ಯ ಹೇಳಿದರು.
ತಾಲ್ಲೂಕಿನ ಮುಗುಳುವಳ್ಳಿ ಗ್ರಾಮದ ಬಿಜೆಪಿ ಮುಖಂಡರ ಮನೆಯಂಗಳದಲ್ಲಿ ಅಂಬಳೆ ಹೋಬಳಿ ಬಿಜೆಪಿ ಮಹಾಕಶಕ್ತಿ ಕೇಂದ್ರದಿಂದ ಆಯೋಜಿಸಿದ್ಧ ಭಾರತ ರತ್ನ ಡಾ|| ಬಿ.ಆರ್.ಅಂಬೇಡರ್ 134ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಬುಧವಾರ ಭಾಗವಹಿಸಿ ಅವರು ಮಾತನಾಡಿದರು.
ಸಮಾಜದ ಕೆಟ್ಟ ಸಂಪ್ರದಾಯ ವಿರುದ್ಧ ರೋಸಿಹೋಗಿದ್ಧ ದಲಿತರು, ಬಡವರು ಹಾಗೂ ಶೋಷಿತರಿಗೆ ಜೀವನವೇ ಇಲ್ಲದಂತಾಗಿತ್ತು. ನಡೆದಾಡುವ ದಾರಿಗಳಲ್ಲಿ ಬೆನ್ನಿಂದೆ ಪರಕೆಕಟ್ಟಿ ಪಾದದ ಗುರುತು ಸಿಗದಂತೆ ಅಳಿಸಿಕೊಂಡು ಹೋಗುವ ಆಚಾರಗಳಿಂದ ನರಳಾಡುವವರಿಗೆ ಸಂವಿಧಾನದ ಮುಖೇನ ದಾರಿತೋರಿದರು ಎಂದರು.
ರಾಷ್ಟçದ ಬಹುಸಂಖ್ಯಾತರು ಅಧಿಕಾರ ಕೈಹಿಡಿದರೆ ಕೆಟ್ಟ ವ್ಯವಸ್ಥೆಯನ್ನು ಬದಲಿಸಬಹುದೆಂಬ ಆಲೋ ಚನೆಯಿಂದ ಚುನಾಯಿತರಾಗುವ ಕ್ಷೇತ್ರಕ್ಕೆ ಇಪ್ಪತ್ತು ವರ್ಷಗಳ ಮೀಸಲಾತಿ ಕೊಟ್ಟ ಶ್ರೇಷ್ಟ ನಾಯಕ ಅಂಬೇ ಡ್ಕರ್ ಎಂದ ಅವರು ಜನಪ್ರತಿನಿಧಿಗಳು ಮೀಸಲಾತಿಯನ್ನು ಸದುಪಯೋಗಿಸಿಕೊಂಡು ಜನಾಂಗದ ಏಳಿಗೆಗೆ ಶ್ರಮಿಸಬೇಕು ಎಂದು ತಿಳಿಸಿದರು.
ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್ ಮಾತನಾಡಿ ಬಿಜೆಪಿ ಸರ್ಕಾರದಲ್ಲಿ ದೀನ ದಲಿತರು, ಬಡವರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿದೆ. ಆ ಹಿನ್ನೆಲೆಯಲ್ಲಿ ಇಂದು ಯಾವುದೇ ಬಲಾಡ್ಯ ಜಾತಿ ಯ ಪ್ರಭಾವವಿಲ್ಲದ ಸಾಮಾನ್ಯ ವ್ಯಕ್ತಿ ದೇಶದ ಪ್ರಧಾನಿಯಾಗಿ ಅಧಿಕಾರ ನಡೆಸಲು ಕಾರಣವಾಗಿದೆ ಎಂದು ತಿಳಿಸಿದರು.
ಇತ್ತೀಚೆಗೆ ಕೆಲವು ಪಕ್ಷಗಳು ಪರಿಶಿಷ್ಟರನ್ನು ಹತ್ತಿಕ್ಕಲು ಅಂಬೇಡ್ಕರ್ ಹೆಸರು ಬಳಸಿಕೊಂಡು ದ್ರೋಹವೆ ಸಗುತ್ತಿದೆ. ಈ ಮಾತಿಗೆ ಸಮುದಾಯವು ಹೆಚ್ಚು ಕಿವಿಗೊಡದಿರಿ. ಅಂಬೇಡ್ಕರ್ ಜೀವಿತಾವಧಿ ಹಾಗೂ ಮರಣ ನಂತರವು ಬಿಜೆಪಿ ಭಾರತರತ್ನ ಪ್ರಶಸ್ತಿ, ಸ್ಮಾರಕ ನಿರ್ಮಾಣ ಹಾಗೂ ಅಂತ್ಯಕ್ರಿಯೆ ಸ್ಥಳ ಪುಣ್ಯಕ್ಷೇತ್ರಗಳಾಗಿ ಮಾರ್ಪಾಡಿಸಿವೆ ಎಂದರು.

ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಮಾತನಾಡಿ ಒಂದೇ ಜಾತಿ, ಜನಾಂಗಕ್ಕೆ ಅಂಬೇಡ್ಕರ್ ಸೀಮಿತವಾಗಿಲ್ಲ. ಇಡೀ ವಿಶ್ವವೇ ಮೆಚ್ಚುವಂಥ ನಾಯಕರಾಗಿದ್ದಾರೆ. ಹೀಗಾಗಿ ಪ್ರತಿಯೊಬ್ಬರು ಮನೆಯಂಗಳದಿ ಅಂಬೇಡ್ಕರ್ ಜಯಂತಿ ಆಚರಿಸಿ ಸುಭೀಕ್ಷೆ ವಾತಾವರಣ ನಿರ್ಮಿಸಬೇಕು ಎಂದರು.
ಆಲ್ದೂರು ಎಸ್ಸಿ ಮೋರ್ಚಾದ ಮಂಡಲ ಪ್ರಧಾನ ಕಾರ್ಯದರ್ಶಿ ಗೌಡನಹಳ್ಳಿ ಮಂಜುನಾಥ್ ಮಾತ ನಾಡಿ ಅಂಬೇಡ್ಕರ್ ರಚಿಸಿದ ಸಂವಿಧಾನ ಜಗತ್ತು ಮೆಚ್ಚುವಂಥವಾದ ಕಾರಣ ವಿಶ್ವಸಂಸ್ಥೆ ಏ.14ನ್ನು ವಿಶ್ವಜ್ಞಾ ನಿಗಳ ದಿನವೆಂದು ಘೋಷಿಸಿ ಪ್ರಪಂಚದಾದ್ಯAತ ಪರಿಚಯಿಸುವ ಕೆಲಸ ಮಾಡಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಅಂಬಳೆ ಹೋಬಳಿ ಅಧ್ಯಕ್ಷ ಯೋಗೀಶ್ ವಹಿಸಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಣೇನಹಳ್ಳಿ ರಾಜು, ಮುಖಂಡರುಗಳಾದ ಮಹೇಶ್, ರಘುನಂದನ್, ಉಮೇಶ್, ಮಲ್ಲೇಶಪ್ಪ ಮತ್ತಿತರರು ಉಪಸ್ಥಿತರಿದ್ದರು.
- ಸುರೇಶ್ ಎನ್.