ಚಿಕ್ಕಮಗಳೂರು– ನಗರದ ಶಂಕರಪುರ ಕೊಳಚೆ ಪ್ರದೇಶದಲ್ಲಿರುವ ಫಲಾನುಭವಿಗಳಿಗೆ ಹಕ್ಕುಪತ್ರ ಹಾಗೂ ಪೌರಕಾರ್ಮಿಕರಿಗೆ ಪ್ರತಿದಿನ ಮೊಟ್ಟೆ ವಿತರಿಸಬೇಕು ಎಂದು ಒತ್ತಾಯಿಸಿ ಭೀಮರಾವ್ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಶಿರಸ್ತೇದಾರ್ ಮನು ಮುಖಾಂತರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ಸಂಘದ ಅಧ್ಯಕ್ಷ ಟಿ.ರಮೇಶ್ ನಗರದ ಪುರಿಭಟ್ಟಿ, ತಮಿಳು ಕಾಲೋನಿ, ಆದರ್ಶ ನಗರದ ಕೊಳಚೆ ಪ್ರದೇಶದ ನಿವಾಸಿಗಳಿಗೆ ಮಂಡಳಿಯಿಂದ ಹಕ್ಕು ಪತ್ರ ವಿತರಿಸಲಾಗಿದೆ. ಅದರಂತೆ ಶಂಕರಪುರ ಫಲಾನುಭವಿಗಳು ಮನೆ ನಿರ್ಮಿಸಿಕೊಂಡು ವಾಸವಾಗಿದ್ದು ಇದುವರೆಗೂ ಯಾವುದೇ ದಾಖಲಾತಿ ಗಳಿಲ್ಲದೇ ಸಮಸ್ಯೆ ಎದುರಾಗಿದೆ ಎಂದರು.
ಹಲವಾರು ಭಾರಿ ಸಂಬಂಧಿಸಿದ ಕಚೇರಿಗಳಲ್ಲಿ ಹಕ್ಕುಪತ್ರ ಮಾಡಿಕೊಂಡಲು ಮನವಿ ಸಲ್ಲಿಸಲಾಗಿದೆ. ಆದರೂ ಇಲ್ಲಿಯವರೆಗೂ ಅಧಿಕಾರಿಗಳು ಖಾತೆ ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಶಂಕರಪುರದಲ್ಲಿ ದಿನ ಕೂಲಿ ಕೆಲಸ ಹಾಗೂ ಪೌರಕಾರ್ಮಿಕರಾಗಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ ಎಂದರು.
ಈ ನಿವಾಸಿಗಳಿಗೆ ಸೌಲಭ್ಯಗಳು ಪಡೆಯಬೇಕಾದರೆ ಸಮರ್ಪಕ ಹಕ್ಕುಪತ್ರ, ನೊಂದಾಯಿತ ದಾಖಲೆಗ ಳು ಕೇಳುವ ಹಿನ್ನೆಲೆ ಮಂಡಳಿಯಿಂದ ಹಕ್ಕುಪತ್ರ ನೀಡಿ ನೊಂದಾಯಿಸಬೇಕು ಎಂದರು.

ನೇರ ಪಾವತಿ ಮತ್ತು ಪೌರಕಾರ್ಮಿಕ ಆರೋಗ್ಯದ ದೃಷ್ಟಿಯಿಂದ ಪೌಷ್ಠಿಕ ಆಹಾರದ ಸಲುವಾಗಿ ವಾರವೀಡಿ ಮೊಟ್ಟೆ ವಿತರಣೆ ಮಾಡಬೇಕಾಗಿದೆ. ಆದರೆ ನಗರಸಭೆ ಆಡಳಿತವು ವಾರದಲ್ಲಿ ಸೋಮವಾರ, ಶನಿವಾರ ಎರಡು ದಿನಗಳಲ್ಲಿ ಮೊಟ್ಟೆಯನ್ನು ನೀಡದೇ ಪೌರಕಾರ್ಮಿಕರಿಗೆ ವಂಚನೆ ಮಾಡುತ್ತಿವೆ ಎಂದು ದೂರಿದರು.
ಈ ಸಂಬಂಧ ಅಧಿಕಾರಿಗಳಲ್ಲಿ ಅನೇಕ ಬಾರಿ ಕಾರ್ಮಿಕರು ಕೇಳಿಕೊಂಡರೂ ಯಾವುದೇ ಕ್ರಮವಹಿಸಿಲ್ಲ. ದುರ್ನಡತೆಯಿಂದ ಮಾತನಾಡಿದ್ದಾರೆ. ಪ್ರಸ್ತುತ ಪೌರಕಾರ್ಮಿಕರು ಪೌಷ್ಠಿಕ ಆಹಾರ ಕೊರತೆಯಿಂದ ಬಳ ಲುತ್ತಿದ್ದಾರೆ. ಹೀಗಿರುವ ಮೊಟ್ಟೆಯನ್ನೆ ನೀಡದೇ ಲಕ್ಷಾಂತರ ರೂ.ಗಳ ಹಣವನ್ನು ಸರ್ಕಾರಕ್ಕೆ ನಷ್ಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಆ ನಿಟ್ಟಿನಲ್ಲಿ ಪೌರಕಾರ್ಮಿಕರಿಗೆ ಆರೋಗ್ಯ ದೃಷ್ಟಿಯಿಂದ ವಾರವೀಡಿ ಮೊಟ್ಟೆ ವಿತರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿ ಅನುಕೂಲ ಮಾಡಿಕೊಡಬೇಕು. ನಿರ್ಲಕ್ಷ ಧೋರಣೆ ಅನುಸರಿಸಿದರೆ ಮುಂದಿ ನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘದ ಸದಸ್ಯರುಗಳಾದ ರಾಜಣ್ಣ, ಸದಾ, ಕೀರ್ತಿ, ಕಿರಣ್, ಕೌಶಿಕ್, ಚಂದ್ರ, ಸಂತೋಷ್, ಹರ್ಷ, ನವೀನ್, ರವಿ, ಸತ್ಯನಾರಾಯಣ್ ಮತ್ತಿತರರಿದ್ದರು.
- ಸುರೇಶ್ ಎನ್ ಚಿಕ್ಕಮಗಳೂರು