ಚಿಕ್ಕಮಗಳೂರು, ಮೇ.12:- ನಗರದ ಬೈಪಾಸ್ ರಸ್ತೆ ಸಮೀಪದ ಪ್ರೈಮ್ ನರ್ಚರ್ ಇಂಟರ್ ನ್ಯಾಷ ನಲ್ ಶಾಲೆಗೆ ಈ ಬಾರಿಯ ಎಸ್.ಎಸ್.ಎಲ್.ಸಿ.ಯ ಸಿಬಿಎಸ್‌ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಪಡೆದುಕೊಂಡಿದೆ.

ಜಿಲ್ಲಾ ಮಟ್ಟಕ್ಕೆ ದಿವ್ಯಾಷನ್ ಆರ್.ಜೈನ್ ಶೇ.92, ಜೋಯೋ ಮಯಬ್ ಸಿದ್ದೀಕಿ ಶೇ.91.4, ಹೆಚ್. ಸಿ.ನಮ್ರತಾ ಶೇ.91.2, ವೈ.ಭವ್ಯತಾ ಶೇ.87.4, ಆಫೀಯಾ ಅಲಿಯಾ ಶೇ.87.2, ಎಲ್.ಎಂ.ಸಿAಚನಾ ಶೇ.84. 4, ಸಿ .ಆರ್.ಸ್ಕಂದ 85.4 ಮತ್ತು ಜಿ.ಅಬ್ದಿ ಶೇ.85 ಫಲಿತಾಂಶ ತೇರ್ಗಡೆ ಹೊಂದಿದ್ದಾರೆ.

ಒಟ್ಟು ಪರೀಕ್ಷೆಯಲ್ಲಿ 22 ವಿದ್ಯಾರ್ಥಿಗಳು ಹಾಜರಾಗಿದ್ದು ಈ ಪೈಕಿ 8 ವಿದ್ಯಾರ್ಥಿಗಳು ಜಿಲ್ಲಾ ಮಟ್ಟ, 10 ವಿದ್ಯಾರ್ಥಿಗಳು ಕೊಠಡಿಗೆ ಮೊದಲು ಸೇರಿದಂತೆ ಉಳಿದ ವಿದ್ಯಾರ್ಥೀಗಳು ಉತ್ತೀರ್ಣರಾಗಿದ್ದಾರೆ ಎಂದು ಶಾಲೆಯ ಪ್ರಿನ್ಸಿಪಾಲ್ ಸುಪ್ರಿಯಾ ತಿಳಿಸಿದ್ದಾರೆ.

- ಸುರೇಶ್ ಎನ್.