ಚಿಕ್ಕಮಗಳೂರು :- ಭವಿಷ್ಯದ ಮಕ್ಕಳಿಗೆ ಸ್ವಚ್ಚಂದ ಪರಿಸರವನ್ನು ಉಳಿಸಲು ಇಂದಿನಿAದಲೇ ನಾಗರೀಕರು ಸಸಿಗಳನ್ನು ಬೆಳೆಸುವುದು ಹಾಗೂ ಪ್ಲಾಸ್ಟಿಕ್‌ನ್ನು ನಿಷೇಧಿಸುವ ಸ್ವಯಂ ನಿರ್ಣಯ ಕೈಗೊಳ್ಳಬೇ ಕು ಎಂದು ನೇಚರ್ ಕನ್ಸರ್‌ವೇಷನ್ ಟ್ರಸ್ಟ್ ಅಧ್ಯಕ್ಷ ಡಾ|| ಕೆ.ಸುಂದರಗೌಡ ಹೇಳಿದರು.
ನಗರದ ತೇಗೂರು ಗ್ರಾ.ಪಂ. ವ್ಯಾಪ್ತಿಯ ಕದ್ರಿಮಿದ್ರಿ ಮುಖ್ಯರಸ್ತೆಯಲ್ಲಿ ನೇಚರ್ ಕನ್ಸರ್‌ವೇಷನ್ ಟ್ರಸ್ಟ್, ಲಯನ್ಸ್ ಕ್ಲಬ್, ಜೇಸಿಐ ಹಾಗೂ ತೇಗೂರು ಗ್ರಾ.ಪಂ. ಸಹಯೋಗದಲ್ಲಿ ಹಮ್ಮಿಕೊಂಡಿದ್ಧ ಪ್ಲಾಸ್ಟಿಕ್ ಮುಕ್ತ ಸ್ವಚ್ಚತಾ ಅಭಿಯಾನದಲ್ಲಿ ಗುರುವಾರ ಪಾಲ್ಗೊಂಡು ಅವರು ಮಾತನಾಡಿದರು.
ಹಚ್ಚಹಸಿನಿಂದ ಕೂಡಿರುವ ಸ್ವರ್ಗದಂಥ ಭೂಮಿಯಲ್ಲಿ ಕೈಗಾರಿಕೋದ್ಯಮದ ವಿಷಾನಿಲಯ, ಪ್ಲಾಸ್ಟಿಕ್ ಹಾಗೂ ಸ್ವಚ್ಚತೆ ಕಾಪಾಡದೇ ಮಾನವರು ಮಲೀನಗೊಳಿಸುತ್ತಿದ್ದಾರೆ. ಮುಂದೆ ದೊಡ್ಡ ಸಕಲ ಜೀವರಾಶಿಗಳಿ ಗೆ ಈ ಆಪತ್ತ ದೊಡ್ಡ ಮಾರಕವಾಗಿ ನುಂಗಲಾರದ ತುತ್ತಾಗಲಿದೆ ಎಂದು ಎಚ್ಚರಿಸಿದರು.

ಮನುಷ್ಯನ ದೈನಂದಿನ ಕಾರ್ಯಗಳಲ್ಲಿ ಪರಿಸರದ ಬಗ್ಗೆ ಕಾಳಜಿ ವಹಿಸದೇ ಪ್ಲಾಸ್ಟಿಕ್ ಸುಡುವುದರಿಂ ದ ಹೃದ್ರೋಗ ಹಾಗೂ ಕ್ಯಾನ್ಸರ್‌ನಂಥ ಅನೇಕ ಕಾಯಿಲೆಗಳು ಮಾನವರಿಗೆ ಉಂಟಾಗುತ್ತಿದೆ. ಈ ನಡೆಯಿಂದ ಭವಿಷ್ಯ ರೂಪಿಸುವ ಯುವಪೀಳಿಗೆಗೆ ಯವ್ವೌನದಲ್ಲೇ ಅಂತ್ಯ ಕಾಣುತ್ತಿರುವುದು ನಮ್ಮ ಮುಂದಿದೆ ಎಂದು ತಿಳಿಸಿದರು.
ಇಂದು ಮಾನವರು ಎಚ್ಚೆತ್ತುಕೊಂಡು ವಾತಾವರಣವನ್ನು ಸಮದಟ್ಟು ಮಾಡಿಕೊಳ್ಳಲು ಅವಕಾಶವಿದೆ. ಸದಾಕಾಲ ಪರಿಸರದೊಂದಿಗೆ ನಂಟನ್ನು ಹೊಂದಿರುವ ಪ್ರಾಣಿ, ಪಕ್ಷಿಗಳು ಕಾಳಜಿ ವಹಿಸುತ್ತಿರುವಾಗ, ಬುದ್ದಿ, ಶಕ್ತಿವಂತ ಮನುಷ್ಯನು ಸ್ವಾರ್ಥದ ಬದುಕಿಗಾಗಿ ಪರಿಸರ ಹಾಳುಮಾಡಿದರೆ ನೈಸರ್ಗಿಕ ಸಂಪತ್ತನ್ನು ಕಳೆದು ಕೊಂಡು ಜೀವಕ್ಕೆ ಕುತ್ತಾಗಲಿದೆ ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಪುಷ್ಪರಾಜ್ ಮಾತನಾಡಿ ಪರಿಸರವನ್ನು ದೈವ ಸ್ವರೂಪಿಯಂತೆ ಕಾಣಬೇಕು. ಪಂಚಭೂತಗಳು ಪೃಥ್ವಿಯನ್ನು ಸುರಕ್ಷತೆಯಿಂದ ಕಾಪಾಡುತ್ತಿದ್ದು, ಮನುಷ್ಯರಾಗಿ ನಾವು ಪರಿಸರ ಸಂರಕ್ಷಿಸು ವ ನೈತಿಕ ಧರ್ಮಪಾಲಿಸಬೇಕು. ಮಾನವ ಸಂತತೆ ಉಳಿವಿಗಾಗಿ ಇಂದಿನಿAದಲೇ ಜಾಗೃತರಾಗರಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತೇಗೂರು ಗ್ರಾ.ಪಂ. ಅಧ್ಯಕ್ಷೆ ರಾಧಾ, ಕದ್ರಿಮಿದ್ರಿ ವೃಧ್ದಾಶ್ರಮದ ಮುಖ್ಯಸ್ಥ ಹರಿಸಿಂ ಗ್, ಜೇಸಿಐನ ರಾಜೇಶ್, ಶ್ರೀನಿವಾ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಗೋಪಿಕೃಷ್ಣ, ಭೂಮಿಕಾ ಟಿವಿ ಸಂಪಾ ದಕ ಅನಿಲ್‌ಆನಂದ್ ಮತ್ತಿತರರು ಉಪಸ್ಥಿತರಿದ್ದರು.
– ಸುರೇಶ್ ಎನ್.