ಚಿಕ್ಕಮಗಳೂರು :- ನಾಡಿನಲ್ಲಿ ಎಲ್ಲವೂ ಸುಸೂತ್ರವಾಗಿರಲಿದೆ. ಮಳೆ, ಬೆಳೆ, ಎಲ್ಲವೂ ಸಂಪನ್ನವಾಗಲಿದೆ. ರೈತರಿಗೆ ಶುಭವಾಗಲಿದೆ ಎಂದು ನಾಡಿನ ಪ್ರಸಿದ್ಧ ದೇವರಗುಡ್ಡ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿದಿದ್ದು, ರಾಜ್ಯದ ಎಲ್ಲಾ ಸಮಸ್ಯೆಗಳು ಬಗೆಹರಿದು ರಾಜ್ಯ ಕಾಂಗ್ರೆಸ್ ಸರ್ಕಾರ ಐದು ವರ್ಷ ಪೂರೈಸಿ, ಮುಂದಿನ ೨೦೨೮ ವಿಧಾನಸಭಾ ಚುನಾವಣೆಯಲ್ಲೂ ಅಧಿಕಾರ ಹಿಡಿದು ಸುಭಿಕ್ಷವಾಗಿ ಆಡಳಿತ ನಡೆಸಲೆಂದು ಕಾಂಗ್ರೆಸ್ ಮುಖಂಡ ಉಪ್ಪಳ್ಳಿ ಕೆ.ಭರತ್, ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಮೈಲಾರಲಿಂಗೇಶ್ವರ ಮೂಲ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ದೇವರಗುಡ್ಡ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ್ ಎಂ.ತಳಗೇರಿ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಮಂಜುನಾಥ್ ಎಂ.ಬೂಸಮ್ಮನವರ್, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಂಜುನಾಥ್ ಜಿ.ಬ್ಯಾಡಗಿ, ಕಾಂಗ್ರೆಸ್ ಮುಖಂಡರಾದ ತಂಬಿ, ಹೆಗ್ಗಪ್ಪ ಊರ್ಮಿ ಸೇರಿದಂತೆ ಮತ್ತಿತರರು ಇದ್ದರು.