ಚಿಕ್ಕಮಗಳೂರು-ಪ್ಲಾಸ್ಟಿಕ್-ಸೇವನೆಯಿಂದ-ಹಸು-ಮೃತ-ಗೋರಕ್ಷಕರಿಂದ-ಅಂತ್ಯಕ್ರಿಯೆ


ಚಿಕ್ಕಮಗಳೂರು:- ವಿಜಯಪುರ ಬಡಾವಣೆಯಲ್ಲಿ ಬಿಡಾಡಿ ಹಸು ಪ್ಲಾಸ್ಟಿಕ್ ಸೇವಿಸಿ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ನೀಡಿದರೂ ಪ್ರಯೋಜನವಾಗದೇ ಮೃತಪಟ್ಟಿದೆ.

ಈ ವೇಳೆ ಗೋ ಸಂರಕ್ಷಕರು ರಾಮನಹಳ್ಳಿ ಸ್ಮಶಾನದಲ್ಲಿ ಪಶು ವೈದ್ಯರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಹೊಟ್ಟೆಯಲ್ಲಿದ್ದ ಸುಮಾರು 80 ಕೆಜಿ ಹೆಚ್ಚು ಪ್ಲಾಸ್ಟಿಕ್ ಹೊರತೆಗೆಸಿ ಅಂತ್ಯಕ್ರಿಯೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಆಂಬುಲೆನ್ಸ್ ಟ್ರಸ್ಟ್ ಪುನೀತ್, ಸಂತೋಷ್ ಕೋಟ್ಯಾನ್, ಮಂಜುನಾಥ್ ಗಂಟೆ, ನಿಖಿಲ್, ವಿಶ್ವನಾಥ್, ಗೌತಮ್, ಬಜರಂಗದಳದ ಪ್ರಮುಖರಾದ ಶಾಮ್.ವಿ ಗೌಡ, ಆಕಾಶ್, ಸಮಿ ತ್, ಪಶು ವೈದ್ಯಾಧಿಕಾರಿ ಡಾಕ್ಟರ್ ರಾಮಚಂದ್ರಗೌಡ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?