ಚಿಕ್ಕಮಗಳೂರು– ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲೀಂ ನೌಕರರ ಕ್ಷೇಮಾಭಿವೃಧ್ದಿ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಜಿಲ್ಲಾಸ್ಪತ್ರೆಯ ಕಚೇರಿ ಅಧೀಕ್ಷಕ ನೂರ್ ಮಹಮ್ಮದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರದ ಆಜಾದ್ಪಾರ್ಕ್ ವೃತ್ತದ ಸಮೀಪ ಸೇವಾದಳ ಕಚೇರಿಯಲ್ಲಿ ಶನಿವಾರ ಸಂಜೆ ನಡೆದ ಕಾರ್ಯಕಾರಿ ಸಮಿತಿಯಲ್ಲಿ ನೂರ್ ಮಹಮ್ಮದ್ ಅಧಿಕಾರ ಸ್ವೀಕರಿಸಿದರು. ಪ್ರಧಾನ ಕಾರ್ಯದರ್ಶಿಯಾಗಿ ಮೊಹಮ್ಮದ್ ಅಮೀನ್ ಆಯ್ಕೆಗೊಂಡಿದ್ದಾರೆ.
ಅಪ್ತಾಬ್ ಹುಸೇನ್ (ಗೌರವಾಧ್ಯಕ್ಷ), ಗೌಸ್ ಮೊಹಿದ್ದೀನ್ (ಕಾರ್ಯಾಧ್ಯಕ್ಷ), ಅಬ್ದುಲ್ ರೆಹಮಾನ್, ಸುಹಾನ, ನಾಜಿಮಾ, ಜಾಕೀರ್ ಹುಸೇನ್ (ಉಪಾಧ್ಯಕ್ಷರು), ಇಲಿಯಾಜ್ (ಸಹ ಕಾರ್ಯದರ್ಶಿ), ಆಫ್ತಾಬ್ ಅಹಮದ್ (ಖಜಾಂಚಿ), ಅನ್ಸರ್ ಅಹಮದ್ (ಸಂ. ಕಾರ್ಯದರ್ಶಿ), ಇಸ್ಮಾಯಿಲ್, ನಜ್ಮ ನಿಕತ್, ಸಲೀ ಮುನ್ನಿಸಾ (ಗೌರವ ಸಲಹೆಗಾರ).
ಈ ವೇಳೆ ಸಂಸ್ಥಾಪಕ ಅಧ್ಯಕ್ಷ ಫೈಯಾಜ್ ಅಹ್ಮದ್ ಮಾತನಾಡಿ, ಈ ಹಿಂದೆಯೂ ನಮ್ಮ ಸಂಘದಿಂದ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕವಾಗಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡಿ ರಾಜ್ಯದಲ್ಲಿ ಉತ್ತಮ ಹೆಸರನ್ನು ಪಡೆದಿದ್ದು, ಮುಂದೆಯೂ ಉತ್ತಮ ಕೆಲಸ ಕಾರ್ಯಗಳನ್ನು ಮಾಡುವಂತೆ ಸೂಚಿಸಲಾಗಿದೆ ಎಂದರು.
ನೂತನ ಅಧ್ಯಕ್ಷ ನೂರ್ ಮಹಮ್ಮದ್ ಮಾತನಾಡಿ, ಮುಂದಿನ ಎಲ್ಲಾ ಕಾರ್ಯಗಳಲ್ಲಿ ಹಾಗೂ ಇನ್ನೂ ಹೆಚ್ಚು ಸಂಘಟನೆಯನ್ನು ಬಲಪಡಿಸಲು ಪ್ರತಿಯೊಬ್ಬರ ಸಹಕಾರದಿಂದ ಸಂಘವನ್ನು ಬೆಳವಣಿಗೆಯತ್ತ ಕೊಂಡೊಯ್ಯಲಾಗುವುದು ಎಂದು ತಿಳಿಸಿದರು.
- ಸುರೇಶ್ ಎನ್.