ಚಿಕ್ಕಮಗಳೂರು- ವೈದ್ಯರು ಅಥವಾ ಸಿಬ್ಬಂದಿಗಳ ಮೇಲೆ ಹಲ್ಲೆಗೆ ಮುಂದಾದರೆ ದಂಡ ಹಾಗೂ ಶಿಕ್ಷೆ ವಿಧಿಸಲಾಗುವುದು ಎಂಬ ನಾಮಫಲಕವನ್ನು ಪ್ರತಿ ಆಸ್ಪತ್ರೆಗಳಲ್ಲಿ ಅಳವಡಿಸಿದಾಗ ಮಾತ್ರ ವೈದ್ಯರನ್ನು ಸಂರಕ್ಷಿಸಲು ಸಾಧ್ಯ ಎಂದು ಐಎಂಎ ರಾಜ್ಯಾಧ್ಯಕ್ಷ ಡಾ|| ವೀರಭದ್ರಪ್ಪ ಚಿನಿವಾಲ್ ಹೇಳಿದರು.
ನಗರದ ಬೈಪಾಸ್ ಸಮೀಪ ಚಿಕ್ಕಮಗಳೂರು ಭಾರತೀಯ ವೈದ್ಯಕೀಯ ಸಂಘ ಕಚೇರಿಯಲ್ಲಿ ಹಮ್ಮಿ ಕೊಂಡಿದ್ಧ ಕಾರ್ಯಾಗಾರ ಕುರಿತು ಅವರು ಮಾತನಾಡಿದರು.
ಕರ್ತವ್ಯ ನಿರತರಾಗಿರುವ ವೈದ್ಯರ ಮೇಲೆ ಹಲ್ಲೆ, ಹೇಯಕೃತ್ಯ ಅಥವಾ ಅವಾಚ್ಯ ಶಬ್ದಗಳಿಂದ ನಿಂದಿಸಿ ದಂತೆ ಕಡ್ಡಾಯವಾಗಿ ನಾಮಫಲಕ ಅಳವಡಿಸಬೇಕು. ಇದರಿಂದ ಭಯಭೀತರಾಗಿ ದಾಳಿಕೋರರು ಹಲ್ಲೆಗೆ ಮುಂದಾಗುವುದಿಲ್ಲ. ಪ್ರಕರಣವು ಕ್ಷೀಣಿಸಿ, ವೈದ್ಯರು ಸ್ವಯಂಪ್ರೇರಿತರಾಗಿ ಕರ್ತವ್ಯ ನಿರ್ವಹಿಸಲು ಅನುಕೂಲವಾಗಲಿದೆ ಎಂದರು.
ಕುಟುAಬದ ವ್ಯಕ್ತಿ ಅನಾರೋಗ್ಯದಿಂದ ನರಳಿದರೆ ತಕ್ಷಣಕ್ಕೆ ಸ್ಪಂದಿಸುವ ವೈದ್ಯರನ್ನು ಗೌರವಿಸುವ ಗುಣ ಜನತೆ ಬೆಳೆಸಿಕೊಳ್ಳಬೇಕು. ಹಗಲು-ರಾತ್ರಿ ಎನ್ನದೇ ರೋಗಿಯ ಗುಣಮುಖಕ್ಕೆ ಶ್ರಮಿಸುವ ವೈದ್ಯರ ಸೇವೆ ನಿಜಕ್ಕೂ ಅವಿಸ್ಮರಣೀಯ. ಹೀಗಾಗಿ ಪ್ರತಿಯೊಬ್ಬರ ನೋವಿನ ಆರೈಕೆ ಮಾಡುವ ವೈದ್ಯರಿಗೆ ಹಲ್ಲೆ ಅಥವಾ ನಿಂದಿಸದಿರಿ ಎಂದರು.

1928 ರಲ್ಲಿ ಪಶ್ಚಿಮ ಬಂಗಾಳದಲ್ಲಿ ಸ್ಥಾಪಿತಗೊಂಡ ಐಎಂಎ, ದೇಶಾದ್ಯಂತ 1750 ಶಾಖೆಗಳಿವೆ. ಈ ಪೈಕಿ ರಾಜ್ಯದಲ್ಲಿ 180 ಶಾಖೆಗಳನ್ನು ಹೊಂದಿದ್ದು ಪ್ರತಿ ಶಾಖೆಗಳಿಗೆ ಭೇಟಿ ನೀಡಿ ನ್ಯೂನತೆಗಳನ್ನು ಬಗೆಹರಿಸುವುದು, ಸದಸ್ಯರುಗಳ ಉಪಯೋಗಕ್ಕೆ ಹಲವಾರು ಯೋಜನೆಗಳ ಮಾಹಿತಿಯನ್ನು ಒದಗಿಸಲು ಸಂಸ್ಥೆ ಕಾ ರ್ಯಪ್ರವೃತ್ತgಗುತ್ತಿದೆ ಎಂದು ತಿಳಿಸಿದರು.
ಐಎಂಎ ರಾಜ್ಯಾದ್ಯಂತ ಹೆಚ್ಚು ವೈದ್ಯರನ್ನು ಸದಸ್ಯರನ್ನಾಗಿಸಿ ಸಂಸ್ಥೆ ಬೆಳವಣಿಗೆ ಸಹಕರಿಸಲಾಗುತ್ತಿದೆ. ಜೊತೆಗೆ ಸದಸ್ಯರಿಗೆ ಆರೋಗ್ಯ, ಸಾಮಾಜಿಕ ಕಾರ್ಯದ ಮಾಹಿತಿಯನ್ನು ಆಯಾ ಶಾಖೆಗಳ ಮೂಲಕ ಒದಗಿಸಲಾಗುತ್ತಿದೆ. ಅಲ್ಲದೇ ವೈದ್ಯರಲ್ಲಿ ಕವಿ, ಬರಹಗಾರರ ಹೃದಯವಿರುವ ಹಿನ್ನೆಲೆ ಅಂತಹವನ್ನು ಗುರುತಿಸಿ ಪ್ರೋತ್ಸಾಹಿಸಲಾತ್ತಿದೆ ಎಂದರು.
ಕೆಲವು ಜಿಲ್ಲೆಗಳಲ್ಲಿ ವೈದ್ಯಕೀಯ ಕೋರ್ಸ್ ನಡೆಸದೇ, ಪುರಾತನ ಪದ್ಧತಿಯಲ್ಲಿ ನಕಲಿ ವೈದ್ಯರಿದ್ದಾರೆ. ಹೀಗಾಗಿ ಆಯಾ ಜಿಲ್ಲಾ ಆರೋಗ್ಯ ಇಲಾಖೆ ಹೆಚ್ಚು ನಿಗಾವಹಿಸಬೇಕು. ಅಂತಹವರು ಕಂಡು ಬಂದಲ್ಲಿ ಕಾ ನೂನಾತ್ಮಕ ಕ್ರಮ ಕೈಗೊಂಡರೆ, ಆರ್ಥಿಕ ಸ್ಥಿತಿಯಿಂದ ಬಳಲುವ ಜನರ ಜೀವ ಉಳಿಸಲು ಸಾಧ್ಯವಾಗಲಿದೆ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಐಎಂಎ ರಾಜ್ಯ ಗೌರವಾಧ್ಯಕ್ಷ ಡಾ|| ಮರೀಗೌಡ, ಸಹಾಯಕ ಕಾರ್ಯದರ್ಶಿ ಡಾ|| ಮಧುಸೂದನ್, ಜಿಲ್ಲಾ ಪ್ರತಿನಿಧಿ ಡಾ|| ಜಿ.ಕೆ.ಭಟ್, ಚಿಕ್ಕಮಗಳೂರು ಅಧ್ಯಕ್ಷ ಡಾ|| ಕೆ.ಬಿ.ಶಶಿಧರ್, ಕಾರ್ಯ ದರ್ಶಿ ಡಾ|| ಕೌಶಿಕ್, ಖಜಾಂಚಿ ಡಾ|| ಸಂತೋಷ್ ಮತ್ತಿತರರಿದ್ದರು.
- ಸುರೇಶ್ ಎನ್.