ಚಿಕ್ಕಮಗಳೂರು:- ಕನ್ನಡ ಕಠೀರವ ಡಾ|| ರಾಜ್‌ಕುಮಾರ್, ಮೊಮ್ಮಗ ಷಣ್ಮುಖ ಗೋವಿಂದರಾಜ್ ನಾಯಕ ನಟನಾಗಿ ನಟಿಸಿರುವ ನಿಂಬಿಯಾ ಬನದ ಮ್ಯಾಗಾ ಚಿತ್ರ ನಾಗಲಕ್ಷ್ಮಿ ಚಿತ್ರಮಂದಿರದಲ್ಲಿ ಶುಕ್ರವಾರ ಬಿಡುಗಡೆ ದಿನದಂದು ಕನ್ನಡಸೇನೆ, ಅಪ್ಪು ಬ್ರಿಗೇಡ್ ಹಾಗೂ ವಿವಿಧ ಕನ್ನಡಪರ ಸಂಘಟನೆಗಳು ಯಶಸ್ವಿ ಪ್ರದರ್ಶನಕ್ಕಾಗಿ ಕೇಕ್ ಕತ್ತರಿಸಿ ಸಿಹಿಹಂಚುವ ಮೂಲಕ ಶುಭ ಹಾರೈಸಿದರು.
ಈ ವೇಳೆ ಮಾತನಾಡಿದ ಹಿರಿಯ ವೈದ್ಯ ಡಾ|| ಜೆ.ಪಿ.ಕೃಷ್ಣೇಗೌಡ ಕಲಾದೇವಿಯು ಡಾ|| ರಾಜ್‌ಕುಮಾ ರ್ ಕುಟುಂಬದಲ್ಲಿ ಕರುಳಬಳ್ಳಿಯಂತೆ ವಿಶಾಲವಾಗಿ ಹಬ್ಬಿಕೊಂಡಿದೆ. ಇದಕ್ಕೆ ಷಣ್ಮುಖ ಗೋವಿಂದ್ ಪ್ರಥಮ ಚಿತ್ರದಲ್ಲೇ ಅದ್ಬುತವಾಗಿ ನಟಿಸಿ ಡಾ|| ರಾಜ್‌ಕುಮಾರ್ ಒಮ್ಮೆ ತೆರೆ ಮೇಲೆ ನೋಡುವಂತ ಭಾಗ್ಯ ಮರುಕಳಿಸುವಂತಾಯಿತು ಎಂದರು.
ಮಗುವಿನಿಂದ ತಾಯಿ ದೂರವಾದ ಬಳಿಕ, ತಾಯಿ ಪ್ರೀತಿಯನ್ನು ಹುಡುಕಾಡಿ ಬರುವಂಥ ಚಿತ್ರಕಥೆ ಅದ್ಬುತವಾಗಿ ನಿರ್ದೇಶಿಸಲಾಗಿದೆ. ಅಲ್ಲದೇ ಜಿಲ್ಲೆಯ ಕಳಸಾಪುರ, ಹೊಲದಗದ್ದೆ ಸೇರಿದಂತೆ ಮಲೆನಾಡು ಹಾಗೂ ಬಯಲುಸೀಮೆ ಭಾಗಗಳಲ್ಲಿ ಅದ್ಬುತವಾಗಿ ಚಿತ್ರೀಕರಿಸಿರುವ ತಂಡಕ್ಕೆ ಧನ್ಯವಾದಗಳು ತಿಳಿಸಿದರು.
ಬಹುಶ ಕನ್ನಡಚಿತ್ರಗಳು ದೇಶ-ವಿದೇಶಗಳಲ್ಲಿ ಹೆಚ್ಚು ಮನ್ನಣೆ ಪಡೆಯಲು ಡಾ|| ರಾಜ್‌ಕುಮಾರ್ ಕೊ ಡುಗೆ ಅಪಾರವಿದೆ. ಆ ಸಾಲಿನಲ್ಲಿ ಇತ್ತೀಚಿನ ನಾಯಕರು ಮುಂಚೂಣಿ ವಹಿಸಿರುವುದು ಹೆಮ್ಮೆಯ ಸಂಗತಿ. ಅದರಂತೆ ಷಣ್ಮುಖ ಗೋವಿಂದರಾಜ್ ನಟನೆಯ ಈ ಚಿತ್ರವು ನಾಡಿನಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿ ಭರ್ಜರಿ ಯಶಸ್ವಿ ದೊರಕಿ ತಾತನ ಕೀರ್ತಿ ಲಭಿಸುವಂತಾಗಲೀ ಶುಭ ಕೋರಿದರು.
ವಿಶೇಷವೆಂದರೆ ಜಿಲ್ಲೆಯ ಎ.ಎನ್.ಮೂರ್ತಿ, ವಿ.ಕೆ.ರಘು ಸೇರಿದಂತೆ ಹಲವಾರು ಮಂದಿ ಚಿತ್ರದಲ್ಲಿ ನಟಿಸಿ ಜೀವತುಂಬುವ ಕೆಲಸ ಮಾಡಿದ್ದಾರೆ. ಜೊತೆಗೆ ಹಿರಿಯ ಛಾಯಾಗ್ರಾಹಕ ಎ.ಎನ್.ಮೂರ್ತಿ ಅಪ್ಪಟ ರಾಜ್‌ಕುಮಾರ್ ಅಭಿಮಾನಿಯಾಗಿದ್ದಾರೆ. ಅಲ್ಲದೇ ಪ್ರತಿವರ್ಷವು ಜನ್ಮದಿನ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.
ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಮಾತನಾಡಿ ಕನ್ನಡಚಿತ್ರಕ್ಕೆ ಡಾ|| ರಾಜ್‌ಕುಮಾ ರ್ ಕುಟುಂಬ ಅಪಾರ ಕೊಡುಗೆ ನೀಡಿವೆ. ಆ ಸಾಲಿನಲ್ಲಿ ಉದಯೋನ್ಮುಖ ನಟನಾಗಿ ಬಂದಿರುವ ಷಣ್ಮುಖ ಗೋವಿಂದರಾಜ್ ಚಿತ್ರವು ಉತ್ತಮ ಪ್ರದರ್ಶನ ಕಾಣಲಿ. ಜೊತೆಗೆ ಎ.ಎನ್.ಮೂರ್ತಿ ಸೇರಿದಂತೆ ಸ್ಥಳೀಯ ಕಲಾವಿದರಿಗೆ ಅವಕಾಶ ಕಲ್ಪಿಸಿರುವುದು ಹೆಮ್ಮೆಯ ಸಂಗತಿ ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎ.ಎನ್.ಮೂರ್ತಿ ಮಾತನಾಡಿ ಪದ್ಮಭೂಷಣ ಡಾ|| ರಾಜ್‌ಕುಮಾರ್ ದೊಡ್ಡಮನೆ ಗುಡಿ ಇಂದು ನಿಂಬಿಯಾ ಬನದ ಮ್ಯಾಗಾ ಚಿತ್ರವು ಅಶೋಕ್ ಕಡಬ ಹಾಗೂ ಮಾದೇಶ ಸಾ ರಥ್ಯದಲ್ಲಿ ಬಹುಪಾಲು ಚಿಕ್ಕಮಗಳೂರು ಸುತ್ತಮುತ್ತಲಿನಲ್ಲಿ ಚಿತ್ರೀಕರಿಸಲಾಗಿದೆ. ಅಲ್ಲದೇ ಮಲೆನಾಡಿನ ಸೌಗಂಧವನ್ನು ಸವಿಯಲು ಅಭಿಮಾನಿಗಳಿಗೆ ಇದೊಂದು ಸುವರ್ಣವಕಾಶವಾಗಲಿದೆ ಎಂದು ತಿಳಿಸಿದರು.
ಇದೇ ವೇಳೆ ಚಿತ್ರಮಂದಿರದ ಮುಂಭಾಗದಲ್ಲಿ ದಿ|| ಪುನೀತ್ ರಾಜ್‌ಕುಮಾರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಬಳಿಕ ಚಿತ್ರದ ಬ್ಯಾನರ್‌ನ್ನು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ವಕ್ತಾರ ಹುಣಸೇಮಕ್ಕಿ ಲಕ್ಷ್ಮಣ್, ಅಪ್ಪು ಬ್ರಿಗೇಡ್‌ನ ಶಿವು, ಆಯುರ್ವೇದಿಕ್ ವೈದ್ಯ ಡಾ|| ಚಂದ್ರಶೇಖರ್ ಸರ್ಜಾ, ಮುಖಂಡರುಗಳಾದ ಎಸ್.ಎಸ್. ವೆಂಕಟೇಶ್, ಅನ್ವರ್, ನಟ-ವಕೀಲ ವಿ.ಕೆ.ರಘು ಮತ್ತಿತರರು ಹಾಜರಿದ್ದರು.
- ಸುರೇಶ್ ಎನ್.