ಚಿಕ್ಕಮಗಳೂರು, ಮೇ.14:- 21ನೇ ಶತಮಾನದ ಕವಿತೆಗಳಲ್ಲಿ ವೃದ್ಧ ವಿಮರ್ಶೆ ಎಂಬ ಹಿಂದಿ ವಿಷ ಯದ ಪ್ರಬಂಧಕ್ಕೆ ಅಲ್ಲಂಪುರ ಗ್ರಾಮದ ಡಾ|| ಜಿ.ರಾಧಿಕಾ ಅವರಿಗೆ ಧಾರವಾಡದ ಸ್ನಾತಕೋತ್ತರ ಮತ್ತು ಸಂಶೋಧನಾ ಸಂಸ್ಥೆ ಪಿ.ಹೆಚ್.ಡಿ. ಪದವಿ ನೀಡಿ ಗೌರವಿಸಿದೆ.
ಧಾರವಾಡದ ಹಿಂದಿ ಪ್ರಚಾರ ಸಭಾದ ಪ್ರೊ.ಅಮರ್‌ಜ್ಯೋತಿ ಇವರ ಮಾರ್ಗದರ್ಶನದಲ್ಲಿ ಪಿಹೆಚ್‌ಡಿ ಪದವಿ ಗಳಿಸಿದ್ದಾರೆ. ಮೂಲತ ಡಾ|| ಜಿ.ರಾಧಿಕಾ ಅವರು ಎಐಟಿ ಕಾಲೇಜಿನ ಹಿಂದಿ ಸಹಾಯಕ ಪ್ರಾಧ್ಯಾ ಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಕೆಯ ಪತಿ ಹೆಚ್.ಎಸ್.ಸತೀಶ್ ಡಿಡಿಪಿಐ ಕಚೇರಿಯ ತಾಂತ್ರಿಕ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
– ಸುರೇಶ್ ಎನ್.