ಚಿಕ್ಕಮಗಳೂರು- ವಿದ್ಯುತ್ಛಕ್ತಿ-ಒಳ್ಳೆಯ-ಸ್ನೇಹಿತ-ಕೆಟ್ಟ ಶತ್ರು: ಬೆಂಗಳೂರಿನ-ಸಹಾಯಕ-ಬೆಂಗಳೂರಿನ-ಸಹಾಯಕ-ಇಂಜಿನಿಯರ್- ಗಾಯತ್ರಿ-ದೇವಿ-ರಾಕೇಶ್

ಚಿಕ್ಕಮಗಳೂರು – ವಿದ್ಯುತ್ಛಕ್ತಿ ಒಳ್ಳೆಯ ಸ್ನೇಹಿತ-ಕೆಟ್ಟ ಶತ್ರು ಎಂದು ಕೆಪಿಟಿಸಿಎಲ್ ಬೆಂಗಳೂರಿನ ಸಹಾಯಕ ಇಂಜಿನಿಯರ್ ಗಾಯತ್ರಿ ದೇವಿ ರಾಕೇಶ್ ನುಡಿದರು.


ಅಕ್ಕಮಹಾದೇವಿ ಮಹಿಳಾ ಸಂಘದ ಶರಣೆ ಕಾಳವ್ವೆ ತಂಡ ಶ್ರೀ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ‘ಮಾಘ ಹುಣ್ಣಿಮೆ’ ಕರ‍್ಯಕ್ರಮ ಉದ್ಘಾಟಿಸಿ ಅವರಿಂದು ಮಾತನಾಡಿದರು.


ನಾಗರಿಕ ಬದುಕನ್ನು ಸಹನೀಯವಾಗಿಸುವಲ್ಲಿ ವಿದ್ಯುತ್ಛಕ್ತಿಯ ಪಾತ್ರ ಅಪಾರ. ಸೌಲಭ್ಯಸೌರ‍್ಯಗಳನ್ನು ಒದಗಿಸಲು ಇಂದು ಬಹುತೇಕ ವಿದ್ಯುತ್ಛಕ್ತಿಯನ್ನು ಅವಲಂಭಿಸಿದ್ದೇವೆ. ನಿಜಕ್ಕೂ ಅದೊಂದು ಒಳ್ಳೆಯಮಿತ್ರ. ಆದರೆ ಎಚ್ಚರಿಕೆಯಿಂದ ಸರಿಯಾಗಿ ಬಳಸದಿದ್ದರೆ ಸಾವನ್ನೂ ಕಾಣಬಹುದು. ನಿರ್ಲಕ್ಷö್ಯವಹಿಸಿದರೆ ಅಪಾಯ ತಪ್ಪಿದ್ದಲ್ಲ ಎಂದವರು ವಿವರಿಸಿದರು.


ವಿದ್ಯುತ್ಛಕ್ತಿ ಅಪವ್ಯಯ ಸಲ್ಲದು. ತುಂಡಾಗಿ ನೆಲದಮೇಲೆ ವಿದ್ಯುತ್ ತಂತಿಗಳು ಬಿದ್ದಿದ್ದರೆ ತಕ್ಷಣ ವಿದ್ಯುತ್ ಸರಬರಾಜು ಕಛೇರಿಗೆ ತಿಳಿಸಬೇಕು. ವಿದ್ಯುತ್‌ಮಾರ್ಗ ಹೊತ್ತ ಕಂಬಗಳಿಗೆ ಜಾನುವಾರುಗಳನ್ನು ಕಟ್ಟಬಾರದು. ವಿದ್ಯುತ್ ಮಾರ್ಗಗಳ ಸಮೀಪ ಗಾಳಿಪಟ ಮತ್ತು ಡ್ರೋನ್‌ಗಳನ್ನು ಹಾರಿಸಬಾರದು. ಸ್ವಚ್ ಆಫ್ ಮಾಡದೇ ಬಲ್ಬಗಳನ್ನು ಬದಲಾಯಿಸಬಾರದು.


ಒದ್ದೆಕೈಗಳಿಂದ ಸ್ವಿಚ್‌ಗಳನ್ನು ಮುಟ್ಟಬಾರದು, ಎಕ್ಸೆಟೆನ್ಷನ್ ಕಾರ್ಡ್ಗಳನ್ನು ಬಳಸಿ ವಿದ್ಯುತ್‌ಮಂಡಲದ ಮೇಲೆ ಹೆಚ್ಚು ಭಾರ ಹಾಕಬಾರದು. ವಿದ್ಯುತ್ ಮಾರ್ಗದ ಸಮೀಪದಲ್ಲಿ ಕಟ್ಟಡವನ್ನು ನಿರ್ಮಾಣ ಮಾಡಬಾರದು. ಸಾಕೆಟ್‌ನ ಪಿನ್‌ಅನ್ನು ವಿದ್ಯುತ್ ಲೀಕೇಜ್‌ನಿಂದ ಸುರಕ್ಷತೆಗಾಗಿ ಭೂ ಸಂಪರ್ಕಗೊಳಿಸಬೇಕೆಂದು ವಿದ್ಯುತ್ ಸುರಕ್ಷತೆಯ ಬಗ್ಗೆ ಗಾಯತ್ರಿದೇವಿ ಮಾಹಿತಿ ನೀಡಿದರು.


ಹೆಣ್ಣುಮಕ್ಕಳು ಕೇವಲ ಮನೆಗೆ ಸೀಮಿತವಾಗದೆ ಜೀವನದಲ್ಲಿ ಏನಾದರೂ ಸಾಧಿಸುವ ಛಲ ಮನೋಭಾವ ಇರಬೇಕೆಂಬುದು ಎಲ್ಲ ತಂದೆ-ತಾಯಿಗಳ ಆಶಯ. ಆಗಿನ ಕಾಲದಂತೆ ಹೆಣ್ಣುಮಕ್ಕಳು ಮದುವೆ ಆದರೆ ಸಾಕು ಎನ್ನದೆ, ನಮ್ಮ ತಾಯಿ ಮಗಳು ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ನಂತರದಲ್ಲಿ ಒಳ್ಳೆಯ ಕೆಲಸಪಡೆದು ತನ್ನ ಕಾಲಮೇಲೆ ನಿಂತ ನಂತರದಲ್ಲಿ ಮದುವೆ ಎನ್ನುತ್ತಿದ್ದದ್ದು ಸಹಜವಾಗಿತ್ತು. ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಹೆಣ್ಣು ಮತ್ತು ಗಂಡುಮಕ್ಕಳನ್ನು ಮನೆಯಲ್ಲಿ ಸಮಾನವಾಗಿ ನೋಡಬೇಕೆಂದು ಕಿವಿಮಾತು ಹೇಳಿದರು.


ಅಕ್ಕಮಹಾದೇವಿ ಸಂಘದಲ್ಲಿ ಅನೇಕ ಕರ‍್ಯಕ್ರಮಗಳಲ್ಲಿ ಸಮಾಜದಲ್ಲಿ ಸಾಧನೆ-ಸೇವೆ ಮಾಡಿದಂತಹ ಮಹಿಳೆಯರನ್ನು ಆಹ್ವಾನಿಸಿ ಅವರ ಕರ‍್ಯಕ್ಷೇತ್ರದ ಬಗ್ಗೆ ಮಾಹಿತಿ, ಸಲಹೆ, ಸೂಚನೆಗಳು ಪಡೆಯುತ್ತಿರುವುದು ಪ್ರಶಂಸನೀಯ ಎಂದರು.


ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷೆ ಯಮುನಾ ಸಿ.ಶೆಟ್ಟಿ ಅಧ್ಯಕ್ಷತೆವಹಿಸಿ ಮಾತನಾಡಿ ಸ್ಥಾಪಕ ಅಧ್ಯಕ್ಷರಾಗಿದ್ದ ಗೌರಮ್ಮಬಸವೇಗೌಡರನ್ನು ಎಂದಿಗೂ ಮರೆಯದ ಮಾಣಿಕ್ಯ. ಅವರ ಗುಂಪಿನ ಕರ‍್ಯಕ್ರಮವಾದ್ದರಿಂದ ಅವರೇ ಖುದ್ದಾಗಿ ಕರ‍್ಯಕ್ರಮ ರೂಪುರೇಷೆಗಳ ಬಗ್ಗೆ ಮುತವರ್ಜಿವಹಿಸಿ ಅವರೆ ತಯಾರಿಸಿದ ಖಾದ್ಯವನ್ನು ತಮ್ಮಕೈಯಾರೆ ಬಡಿಸುತ್ತಿದದ್ದು ನೆನಪಿಗೆ ಬಂತು. ಅವರ ಶಿಸ್ತು, ಸಮಯಪ್ರಜ್ಞೆ ಸೇರಿದಂತೆ ಅವರ ಆದರ್ಶಗಳು ಎಲ್ಲರಿಗೂ ದಾರಿ ದೀಪವಾಗಲಿ ಎಂದರು.


೧೫ವರ್ಷದ ನಂತರ ಸಂಘದ ಆಡಳಿತಮಂಡಳಿಯ ಬದಲಾವಣೆ ಎಲ್ಲರೂ ಬಯಸುತ್ತಿದ್ದು ಅದೇರೀತಿ ಫೆಬ್ರುವರಿ ೧೬ ಭಾನುವಾರದಂದು ಸಂಘದ ಮತದಾನ ನಡೆಯಲಿದೆ. ಮುಂದಿನ ಆಡಳಿತಮಂಡಳಿ ಇದೇ ರೀತಿ ಸೇವಾಕರ‍್ಯದೊಂದಿಗೆ ಚೆನ್ನಾಗಿ ನಡೆಸಿಕೊಂಡು ಹೋಗಿ ಎಂದು ಯಮುನಾ ಆಶಿಸಿದರು.


ತಂಡದ ಮುಖಂಡೆ ದಾಕ್ಷಾಯಣಿಸತಿಶ್ಚಂದ್ರ ಪ್ರಾಸ್ತಾವಿಸಿ ನಮ್ಮ ಗುಂಪಿನ ಸದಸ್ಯರು ಬೇರೆ ಬೇರೆ ತೋಟಗಳಲ್ಲಿ ವಾಸವಿದ್ದು ಎಲ್ಲರನ್ನೂ ಒಂದುಗೂಡಿಸಿ ಕರ‍್ಯಕ್ರಮವನ್ನು ನಡೆಸುವುದು ಸುಲಭದ ಮಾತಲ್ಲ. ಈ ಮೂರುವರ್ಷ ಸಹಕರಿಸಿದ ಎಲ್ಲ ಸದಸ್ಯರಿಗೂ ಕೃತಜ್ಞತೆ ಸಲ್ಲಿಸುವುದಾಗಿ ನುಡಿದರು.


ಸದಸ್ಯರಾದ ದೀನಾ ಸ್ವಾಗತಿಸಿ, ವನಮಾಲ ಪರಿಚಯಿಸಿ ವಂದಿಸಿದರು. ಪುಷ್ಪಾ ಪ್ರಾರ್ಥಿಸಿ, ರಮ್ಯ ನಿರೂಪಿಸಿದರು. ಸವಿತಾ, ಶ್ವೇತಾ, ಕನ್ನಿಕಾ ತಂಡ ನಾಡಗೀತೆ ಹಾಡಿದರು.


ಕಾರ‍್ಯದರ್ಶಿ ರೇಖಾಉಮಾಶಂಕರ್, ಖಜಾಂಚಿ ಭಾರತಿಶಿವರುದ್ರಪ್ಪ, ಸಹಕರ‍್ಯದರ್ಶಿ ನಾಗಮಣಿಕುಮಾರ್, ನಿರ್ದೇಶಕರುಗಳಾದ ಹೇಮಲತಾ ಮತ್ತು ಗೀತಾಜಗದೀಶ್ ವೇದಿಕೆಯಲ್ಲಿದ್ದರು. ಆಟೋಟಸ್ಪರ್ಧಾ ವಿಜೇತರಿಗೆ ಬಹುಮಾನ ದಾಕ್ಷಾಯಣಿ ವಿತರಿಸಿದರು ವಿವಿಧ ಸಾಂಸ್ಕೃತಿಕ ಕಾರ‍್ಯಕ್ರಮ ಗಮನಸೆಳೆದವು.

Leave a Reply

Your email address will not be published. Required fields are marked *

× How can I help you?