ಚಿಕ್ಕಮಗಳೂರು-ಪ್ರತಿ-ಮನೆಯಲ್ಲೂ-ಬಣ್ಣಗಳ-ಹಬ್ಬವಾಗಲಿದೆ-ಸಿ.ಟಿ ರವಿ

ಚಿಕ್ಕಮಗಳೂರು- ಮುಂದಿನ ದಿನಗಳಲ್ಲಿ ಚಿಕ್ಕಮಗಳೂರಿನ ಪ್ರತಿ ಮನೆಮನೆಯಲ್ಲೂ ಬಣ್ಣಗಳ ಹಬ್ಬವಾಗಲಿದೆ ಎಂದು ವಿಧಾನ ಪರಿಷತ್ ಶಾಸಕ ಸಿಟಿ ರವಿ ತಿಳಿಸಿದರು.

ಅವರು ನಗರದ ವಿಜಯಪುರ ಬಡಾವಣೆಯಲ್ಲಿ ನೂತನವಾಗಿ ಪ್ರಾರಂಭವಾದ ಬಿರ್ಲಾ ಓಪಸ್ ದಿ ವರ್ಣ ಪೈಂಟ್ ಸ್ಟುಡಿಯೋವನ್ನು ಉದ್ಘಾಟಿಸಿ ಮಾತನಾಡಿದರು. 

ಚಿಕ್ಕಮಗಳೂರು ನಗರದಲ್ಲಿ ಪ್ರಪ್ರಥಮ ಬಾರಿಗೆ ಈ ರೀತಿಯ ಪೇಂಟ್ ಸ್ಟುಡಿಯೋವನ್ನು ಪ್ರಾರಂಭ ಮಾಡಿರುವುದು ಜಿಲ್ಲೆಯ ಜನರಿಗೆ ವರದಾನವಾಗಲಿದ್ದು ತಮ್ಮ ಮನೆಗಳನ್ನು ವರ್ಣ ರಂಜಿತವಾಗಿಸಲು ಹಾಗೂ ಅತ್ಯುತ್ತಮ ವಿನ್ಯಾಸಕ್ಕಾಗಿ ಪಾಶ್ಚ್ಯಾತ ಮಾದರಿಯ ಸ್ಪರ್ಶವನ್ನು ನೀಡಿ ಸುಂದರಗೊಳಿಸಲು ಈ ಸ್ಟುಡಿಯೋ ಸಹಕಾರಿಯಾಗಲಿದ್ದು, ಮುಂದಿನ ದಿನಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ಪ್ರತಿ ಮನೆಗಳಲ್ಲೂ ಬಣ್ಣದ ಕ್ರಾಂತಿಯಾಗಲಿದೆ ಎಂದು ತಿಳಿಸಿದರು.

ವ್ಯವಸ್ಥಾಪಕರಾದ ಧನಂಜಯ್ ಗೌಡ ಅವರು ಮಾತನಾಡಿ, ಚಿಕ್ಕಮಗಳೂರು ಜನರು ತಮ್ಮ ಮನೆಗಳನ್ನು ವರ್ಣ ರಂಜಿತವಾಗಿ ಶೃಂಗರಿಸಲು ನಮ್ಮ ಸ್ಟುಡಿಯೋ ಸಹಕಾರಿಯಾಗಲಿದ್ದು ಯಾವುದೇ ಶುಲ್ಕವಿಲ್ಲದೆ ಕೇವಲ ಮನೆಯ ಫೋಟೋವನ್ನು ತಂದರೆ ನಿಮಗೆ ಇಷ್ಟವಾದ ರೀತಿಯಲ್ಲಿ ಡಿಸೈನ್ ಮಾಡಿ ಕೊಡಲಾಗುವುದು ಇದು ಚಿಕ್ಕಮಗಳೂರು ಜಿಲ್ಲೆಯಲ್ಲಿಯೇ ಪ್ರಥಮ ಪ್ರಯೋಗವಾಗಿದ್ದು ಇದರ ಸದುಪಯೋಗವನ್ನು ಜಿಲ್ಲೆಯ ಜನರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಇಂಜಿನಿಯರ್ ಸಂಘದ ಅಧ್ಯಕ್ಷರಾದ ಜಿ ರಮೇಶ್, ವಿ ಸ್ಟಾರ್ ಸಂಸ್ಥೆಯ ಮುಖ್ಯಸ್ಥರಾದ ಅಫ್ಸರ್ ಅಹಮದ್.ಬಿರ್ಲಾ ಸಂಸ್ಥೆಯ ಆಡಳಿತ ಮುಖ್ಯಸ್ಥರಾದ ಗಣೇಶ್, ಸೈಯದ್ ತಾಜುದ್ದೀನ್ ಮತ್ತು ಜಾಫರ್ ಸೇರಿದಂತೆ ಹಲವರು ಇದ್ದರು.

  • ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?